»   » ಕಿರುತೆರೆಯಲ್ಲಿ ಎರಡು ವಾರ ಸಿನಿತಾರೆಯರ ಕ್ರಿಕೆಟ್ ಹಬ್ಬ

ಕಿರುತೆರೆಯಲ್ಲಿ ಎರಡು ವಾರ ಸಿನಿತಾರೆಯರ ಕ್ರಿಕೆಟ್ ಹಬ್ಬ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ತಾರೆಯರು ಪಾಲ್ಗೊಂಡಿದ್ದ ಬಹುನಿರೀಕ್ಷಿತ 'ಕನ್ನಡ ಚಲನಚಿತ್ರ ಕಪ್' ಸಂಪೂರ್ಣ ಕ್ರಿಕೆಟ್ ಪಂದ್ಯಾವಳಿಗಳನ್ನ ಎಕ್ಸ್ ಕ್ಲೂಸಿವ್ ಆಗಿ ಮತ್ತು ಮೇ 12-13 ಮತ್ತು 19-20 ರಂದು ಸಂಜೆ 5 ರಿಂದ 7.30 ರವರಿಗೂ ಪ್ರಸಾರ ಮಾಡಲಾಗುತ್ತೆ.

'ಕನ್ನಡ ಚಲನಚಿತ್ರ ಕಪ್' ಪಂದ್ಯಾವಳಿಗಳು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆದಿದ್ದು, ಆರು ತಂಡಗಳನ್ನ ಒಳಗೊಂಡ ಇದರಲ್ಲಿ ಕೆ.ಪಿ.ಎಲ್ ನಲ್ಲಿ ಕರ್ನಾಟಕವನ್ನ ಪ್ರತಿನಿಧಿಸಿದ್ದ ಆಟಗಾಗರರು ಕೂಡ ಪಾಲ್ಗೊಂಡಿದ್ದರು.

KCC cricket tournament will telecast on zee kannada

ಎಲ್ಲಾ ತಂಡವನ್ನ ಸ್ಯಾಂಡಲ್ ವುಡ್ ನ ಪ್ರಮುಖ ತಾರೆಯರೇ ಮುನ್ನಡೆಸುವ ಮೂಲಕ ತಂಡಗಳಿಗೆ ಗತವೈಭವ ನೆನಪಿಸುವ ವಿಜಯನಗರ ಪೆಟ್ರಿಯಾಟ್ಸ್, ಹೊಯ್ಸಳ ಈಗಲ್ಸ್, ಒಡೆಯರ್ ಚಾರ್ಜರ್ಸ್, ಕದಂಬ ಲಯನ್ಸ್, ಗಂಗಾ ವಾರಿಯರ್ಸ್, ರಾಷ್ಟ್ರಕೂಟ ಫ್ಯಾಂಥರ್ಸ್ ಎಂದು ಹೆಸರಿಡಲಾಗಿತ್ತು. ಈ ಎಲ್ಲ ತಂಡಗಳನ್ನ ಎರಡು ಗುಂಪುಗಳಾಗಿ ವಿಂಗಡಿಲಾಗಿತ್ತು.

ಎ ಗುಂಪಿನಲ್ಲಾ ಗಂಗಾ ವಾರಿಯರ್ಸ್, ಕದಂಬ ಲಯನ್ಸ್, ಒಡೆಯರ್ ಚಾರ್ಜರ್ಸ್ ಇದ್ದರೇ, ಬಿ ಗುಂಪಿನಲ್ಲಿ ವಿಜಯನಗರ ಪೆಟ್ರಿಯಾಟ್ಸ್, ಹೊಯ್ಸಳ ಈಗಲ್ಸ್, ರಾಷ್ಟ್ರಕೂಟ ಫ್ಯಾಂಥರ್ಸ್ ಒಳಗೊಂಡು ಪ್ರೇಕ್ಷಕರಿಗೆ ಆಟದಲ್ಲಿ ಸಂಪೂರ್ಣ ಮನರಂಜನೆ ನೀಡಿದರು.

KCC cricket tournament will telecast on zee kannada

ಕನ್ನಡ ಚಲನಚಿತ್ರ ಕಪ್ ಪ್ರಸಾರವಾಗುವ ಮೊದಲ ದಿನ ಮೇ 12 ರಂದು, ಮಾಜಿ ಕ್ರಿಕೆಟಿಗ ಸ್ಪಿನ್ ಮಾಂತ್ರಿಕ ಭಾರತ ಕ್ರಿಕರೆಟ್ ತಂಡ ಮಾಜಿ ಆಟಗಾರ ಮತ್ತು ಕೋಚ್ ಅನಿಲ್ ಕುಂಬ್ಳೆ ಅವರ ಸಾರಥ್ಯದಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆ ಮತ್ತು ವಿಜಯನಗರ ಪೆಟ್ರಿಯಾಟ್ಸ್ ಮತ್ತು ಹೊಯ್ಸಳ ಈಗಲ್ಸ್ ನಡುವಿನ ಮೊದಲ ಪಂದ್ಯವನ್ನ ವೀಕ್ಷಿಸಬಹುದು.

ಎರಡನೇ ದಿನ ಮೇ13 ರಂದು ಮೂರು ರೋಚಕ ಪಂದ್ಯಗಳ ಸುರಿಮಳೆ ಎಂದೇ ಎನ್ನಬಹುದು. ಗಂಗಾ ವಾರಿಯರ್ಸ್ ವರ್ಸಸ್ ಒಡೆಯರ್ ಚಾರ್ಜರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ ವರ್ಸಸ್ ಹೊಯ್ಸಳ ಈಗಲ್ಸ್, ಹಾಗೂ ವಿಜಯನಗರ ಪೆಟ್ರಿಯಾಟ್ಸ್ ವರ್ಸಸ್ ಹೊಯ್ಸಳ ಈಗಲ್ಸ್ ಪಂದ್ಯಗಳು ನೋಡಬಹುದು.

KCC cricket tournament will telecast on zee kannada

ನಂತರದ ವಾರ ಮೇ 19 ರಂದು ಸೆಮಿಫೈನಲ್ ಪಂದ್ಯಗಳು ಮತ್ತು ಫೈನಲ್ ಪಂದ್ಯಗಳ ರೋಚಕ ಹಣಾಹಣಿ ನಡೆಯಲಿದೆ. ಮೇ20 ರಂದು ಸಂಜೆ 5ಕ್ಕೆ ವಿಜೇತ ತಂಡಗಳಿಗೆ ಮತ್ತು ಅತ್ಯುತ್ತಮ ಪ್ರದರ್ಶನ ನೀಡದ ಆಟಗಾರರಿಗೆ ಪ್ರಶಸ್ತಿ ಪ್ರದಾನ ಹಾಗೂ ಜೀ ಕನ್ನಡ ತಾರೆಗಳಿಂದ ಮನೋರಂಜನೆಯ ಮ್ಯೂಸಿಕಲ್ ಡ್ಯಾನ್ಸ್, ನೈಟ್ ಪ್ರಸಾರವಾಗಲಿದೆ.

English summary
Much awaited First ever tournament of Celebrities conducted for Good cause Kannada Chalanachitra Cup will be telecasted on your favourite Zee Kannada on 12th and 13th of this month and Re Telecasted on 19th and 20th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X