'ಕೀರ್ತಿ ಕುಮಾರ ಹಾಡುಗಾರ'ನನ್ನು ಸ್ವಾಗತ ಮಾಡಲು ಕಾಯುತ್ತಿದ್ದಾರೆ ಪ್ರೇಕ್ಷಕರು!

By Priya Dore

ಹೊಸ ಸೀರಿಯಲ್‌ಗಳಿಗೇನು ಕಡಿಮೆ ಇಲ್ಲ. ಒಂದಾದ ಮೇಲೆ ಒಂದು ಧಾರಾವಾಹಿಗಳು ಹೊಸದು ಬರುತ್ತಲೇ ಇರುತ್ತವೆ. ಈಗಂತೂ ಬೇರೆ ಬೇರೆ ವಾಹಿನಿಗಳಲ್ಲಿ ಭಿನ್ನ ವಿಭಿನ್ನ ಸಿರೀಯಲ್‌ಗಳು ಬರುತ್ತಲೇ ಇವೆ. ಸಿರಿ ಕನ್ನಡ ವಾಹಿನಿಯಲ್ಲಿ 'ವಿಜಯದಶಮಿ', ಜೀ ಕನ್ನಡದಲ್ಲಿ 'ಶ್ರೀರಸ್ತು ಶುಭಮಸ್ತು'.

ಇನ್ನು ಸ್ಟಾರ್‌ ಸುವರ್ಣ ವಾಹಿನಿಯಲ್ಲಿ 'ಕೀರ್ತಿ ಕುಮಾರ ಹಾಡುಗಾರ'. ಹೀಗೆ ಎಲ್ಲಾ ವಾಹಿನಿಯಲ್ಲೂ ಈಗ ಹೊಸ ಧಾರಾವಾಹಿಗಳು ಶುರುವಾಗುತ್ತಿವೆ. ಸ್ಟಾರ್ ಸುವರ್ಣದಲ್ಲಿ 'ಕೀರ್ತಿ ಕುಮಾರ ಹಾಡುಗಾರ' ಧಾರಾವಾಹಿಗಾಗಿ ವೀಕ್ಷಕರು ಕಾದು ಕೂತಿದ್ದಾರೆ.

ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ

ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ

ಸ್ಟಾರ್‌ ಸುವರ್ಣದಲ್ಲಿ ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿವೆ. ಇತ್ತೀಚೆಗಷ್ಟೇ 'ರಾಜೀ' ಎಂಬ ಹೊಸ ಧಾರಾವಾಹಿಯನ್ನು ಪ್ರಾರಂಭಿಸಿತ್ತು. ಮೊನ್ನೆ ಮೊನ್ನೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಇಸ್ಮಾರ್ಟ್ ಜೋಡಿ' ಎಂಬ ಹೊಸ ರಿಯಾಲಿಟಿ ಶೋ ಅನ್ನು ಅದ್ಧೂರಿಯಾಗಿ ಪ್ರಾರಂಭಿಸಿದೆ. 'ಇಸ್ಮಾರ್ಟ್ ಜೋಡಿ ಕಾರ್ಯಕ್ರಮವನ್ನು ನೋಡಿದ ಪ್ರೇಕ್ಷಕರು ಕೂಡ ಖುಷಿಪಟ್ಟಿದ್ದಾರೆ. ಇದೀಗ ಮತ್ತೊಂದು ಹೊಸ ಧಾರಾವಾಹಿಯು ಈ ವಾಹಿನಿಯಲ್ಲಿ ಬಹಳ ಬೇಗ ಶುರುವಾಗಲಿದೆ. ಈ ಧಾರಾವಾಹಿ ಯಾವುದು.? ಇದರಲ್ಲಿ ಯಾರೆಲ್ಲಾ ಇದ್ದಾರೆ.? ಇದರ ಕಥೆ ಏನು ಎಂಬುದನ್ನು ಮುಂದೆ ನೋಡೋಣ.

'ಕೀರ್ತಿ ಕುಮಾರ ಹಾಡುಗಾರ' ಧಾರಾವಾಹಿ

'ಕೀರ್ತಿ ಕುಮಾರ ಹಾಡುಗಾರ' ಧಾರಾವಾಹಿ

'ಕೀರ್ತಿ ಕುಮಾರ ಹಾಡುಗಾರ' ಧಾರಾವಾಹಿಯ ಪ್ರೋಮೊವನ್ನು ಸ್ಟಾರ್‌ ಸುವರ್ಣ ವಾಹಿನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಈ ಧಾರಾವಾಹಿಯಲ್ಲಿ 'ಹರ ಹರ ಮಹಾದೇವ' ಖ್ಯಾತಿಯ ವಿನಯ್ ಗೌಡ ಹಾಗೂ ನಟಿ ರಜನಿ ನಟಿಸಿದ್ದಾರೆ. ಈ ಬಗ್ಗೆ ವಿನಯ್‌ ಗೌಡ ಕೂಡ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಟಿ ರಜಿನಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಯ್‌ ಗೌಡ ಹಾಡುಗಾರನ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಮರಿ ಕೋಗಿಲೆಯೂ ಇದ್ದು, ಮಗು, ಹಾಗೂ ಹಾಡಿನ ಸುತ್ತ ಧಾರಾವಾಹಿಯ ಕಥೆ ಸಾಗುತ್ತದೆ.

ಧಾರಾವಾಹಿಯಲ್ಲಿ ಹೊಸ ಪ್ರಯೋಗ

ಧಾರಾವಾಹಿಯಲ್ಲಿ ಹೊಸ ಪ್ರಯೋಗ

'ಕೀರ್ತಿ ಕುಮಾರ ಹಾಡುಗಾರ' ಧಾರಾವಾಹಿ ಕೊಂಚ ಡಿಫರೆಂಟ್‌ ಆಗಿದೆ ಎನಿಸುತ್ತಿದೆ. ಪ್ರೋಮೊದಲ್ಲಿ ತೋರಿಸಿದಂತೆ ಹಾಡಿಗೆ ಈ ಧಾರಾವಾಹಿಯಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈಗಾಗಲೇ ಎರಡು ಪ್ರೋಮೊಗಳು ಬಿಡುಗಡೆಯಾಗಿವೆ. ಇದರಲ್ಲಿ ಬರುವ ಪುಟ್ಟ ಹುಡುಗಿ ಹಾಗೂ ಸ್ನೇಹಿತರು ಹಾಡಿನ ಶೋ ನೋಡುತ್ತಿರುತ್ತಾರೆ. ಇದೇ ವೇಳೆಗೆ ಕರೆಂಟ್‌ ಹೋದಾಗ ಆ ಬಾಲಕಿಯೇ ಹಾಡು ಹಾಡುತ್ತಾಳೆ. ಮತ್ತೊಂದು ಪ್ರೋಮೊದಲ್ಲಿ ರೇಡಿಯೋದಲ್ಲಿ ಹಾಡು ಬರುತ್ತಿದ್ದಂತೆ ರೆಡಿಯೋ ತೆಗೆದುಕೊಂಡು ಗುಡ್ಡದ ಮೇಲೆ ಕೂತು ಪುಟ್ಟ ಹುಡುಗಿ ಹಾಡು ಕೇಳುತ್ತಿರುತ್ತಾಳೆ. ಆಕೆಯನ್ನು ರಜಿನಿ ಹುಡುಕಾಡುತ್ತಿರುತ್ತಾಳೆ. ಇತ್ತ ವಿನಯ್ ಗೌಡ ಪಾರ್ಟಿ ಒಂದರಲ್ಲಿ ಹಾಡುತ್ತಾ ಕಣ್ಣಿರು ಹಾಕುತ್ತಿರುತ್ತಾರೆ. ಇಲ್ಲಿಂದ 'ಕೀರ್ತಿಕುಮಾರ ಹಾಡುಗಾರ'ನ ಕಥೆ ಶುರುವಾಗುತ್ತದೆ.

ಇದು ಹಿಂದಿ ರಿಮೇಕ್

ಇನ್ನು ಈ ಧಾರಾವಾಹಿಯೂ ಹಿಂದಿಯಲ್ಲಿ ಬರುತ್ತಿರುವ ಸೀರಿಯಲ್‌ ನ ರಿಮೇಕ್‌ ಎನ್ನಲಾಗಿದೆ. ಹಿಂದಿಯಲ್ಲಿ ಕುಲ್ಫಿ ಕುಮಾರ್ ಬಾಜೆವಾಲ ಎಂಭ ಧಾರಾವಾಹಿಯನ್ನು ಆಧರಿಸಿ, ಕನ್ನಡದಲ್ಲಿ ಕೀರ್ತಿ ಕುಮಾರ ಹಾಡುಗಾರ ಧಾರಾವಾಹಿಯನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ದೊರಕಬೇಕಿದೆ.

More from Filmibeat

English summary
Keerthi Kumara Haadugara New Serial In Star Suvarna Coming Soon. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X