ಕಿರುತೆರೆಯ ಶ್ರೀವಲ್ಲಿ ನಟನೆಯಷ್ಟೇ ಅಲ್ಲ ಡ್ಯಾನ್ಸ್‌ನಲ್ಲೂ ಎತ್ತಿದ ಕೈ; ಯಾರಿವರು? ಹಿನ್ನೆಲೆಯೇನು?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶ್ರಾವಣಿ ಸುಬ್ರಹ್ಮಣ್ಯ'ವೂ ಒಂದು. 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಾಯಕ ಸುಬ್ಬು ಆಲಿಯಾಸ್ ಸುಬ್ರಹ್ಮಣ್ಯನ ಪ್ರೇಯಸಿ ಶ್ರೀವಲ್ಲಿಯಾಗಿ ನಟಿಸುತ್ತಿರುವ ಮುದ್ದು ಮುಖದ ಬೆಡಗಿಯ ಹೆಸರು ಕೀರ್ತಿ ವೆಂಕಟೇಶ್. ನಾಯಕ ಸುಬ್ಬುವಿನ ಮನೆಯ ಓನರ್‌ನ ಮಗಳಾಗಿರುವ ಶ್ರೀವಲ್ಲಿಗೆ ಸುಬ್ಬು ಎಂದರೆ ತುಂಬಾ ಪ್ರೀತಿ. ಸುಬ್ಬುವನ್ನು ಮನಸಾರೆ ಪ್ರೀತಿಸುವ ಶ್ರೀವಲ್ಲಿಗೆ ಅವನನ್ನೇ ಬಾಳಸಂಗಾತಿಯಾಗಿ ಪಡೆಯುವ ಬಯಕೆ.
ಅದಕ್ಕಾಗಿ ಶ್ರೀವಲ್ಲಿ ಏನು ಬೇಕಾದರೂ ಮಾಡಲು ತಯಾರಿರುತ್ತಾಳೆ.

ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಕೀರ್ತಿ ವೆಂಕಟೇಶ್ ಕಿರುತೆರೆ ವೀಕ್ಷಕರಿಗೆ ತೀರಾ ಪರಿಚಿತ ಮುಖ ಹೌದು. ಈ ಮೊದಲು ಇದೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಸತ್ಯ' ದಲ್ಲಿ ನಾಯಕ ಕಾರ್ತಿಕ್ ಆಲಿಯಾಸ್ ಅಮೂಲ್ ಬೇಬಿ ತಂಗಿ ರೀತುವಾಗಿ ಈಕೆ ನಟಿಸಿದ್ದರು.

Keerthy Venkatesh DKD contestant who has won the hearts of TV viewers her acting

ಮುಂದೆ ಕಾರಣಾಂತರಗಳಿಂದ ಧಾರಾವಾಹಿಯಿಂದ, ರೀತು ಪಾತ್ರದಿಂದ ಹೊರಬಂದ ಕೀರ್ತಿ ವೆಂಕಟೇಶ್ ನಂತರ ನಟಿಸಿದ್ದು ಕನ್ಯಾದಾನ ಧಾರಾವಾಹಿಯಲ್ಲಿ. ಹೌದು, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ ಒಂದಾದ 'ಕನ್ಯಾದಾನ'ದಲ್ಲಿ ಈಕೆ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

ಸದ್ಯ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಟಿಸುತ್ತಿರುವ ಕೀರ್ತಿ ವೆಂಕಟೇಶ್ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶಾಂತಿನಿವಾಸ' ಧಾರಾವಾಹಿಯಲ್ಲಿ ಸುಕೃತಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ನಾಯಕ ಸುಶಾಂತ್ ತಂಗಿ ಸುಕೃತಾ ಆಗಿ ಕಾಣಿಸುತ್ತಿರುವ ಕೀರ್ತಿ ವೆಂಕಟೇಶ್ ಅಲ್ಲೂ ಕೂಡಾ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಟನೆಯ ಹೊರತಾಗಿ ರಿಯಾಲಿಟಿ ಶೋವಿನಲ್ಲಿಯೂ ಮಿಂಚಿದ ಪ್ರತಿಭೆ ಈಕೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋವಿನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ ಕೀರ್ತಿ ವೆಂಕಟೇಶ್. ಅಂದ ಹಾಗೇ ಕೀರ್ತಿ ವೆಂಕಟೇಶ್ ಅವರು ಈ ರಿಯಾಲಿಟಿ ಶೋ ಶುರುವಾದಾಗ ಸ್ಪರ್ಧಿಯಾಗಿ ಕಾಣಿಸಿಕೊಂಡಿರಲಿಲ್ಲ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಾಯಕಿ ಸಹನಾಳಾಗಿ ಅಭಿನಯಿಸಿದ್ದ ಅಕ್ಷರ ಗೌಡ ಅವರು ಡಿಕೆಡಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಮುಂದೆ ಆಕೆ ಕಾರಣಾಂತರಗಳಿಂದ ಆ ರಿಯಾಲಿಟಿ ಶೋವಿನಿಂದ ಹೊರಬಂದಾಗ ಆ ಜಾಗಕ್ಕೆ ಬಂದವರೇ ಶ್ರೀವಲ್ಲಿ ಆಲಿಯಾಸ್ ಕೀರ್ತಿ ವೆಂಕಟೇಶ್. ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ, ಮನೆ ಸೆಳೆದ ಕೀರ್ತಿ ವೆಂಕಟೇಶ್ ಅವರು ನೃತ್ಯದ ಮೂಲಕವೂ ಕಿರುತೆರೆ ವೀಕ್ಷಕರ ಜೊತೆಗೆ ತೀರ್ಪಗಾರರ ಮನ ಸೆಳೆಯುತ್ತಿದ್ದಾರೆ. ಹೀಗಿರುವಾಗ ಈಕೆ ಮುಂದೊಂದು ದಿನ ನಾಯಕಿಯಾಗಿ ಹಿರಿತೆರೆಯಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.

More from Filmibeat

English summary
Keerthy Venkatesh DKD contestant who has won the hearts of TV viewers her acting;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X