ಯಾರೀ 'ಕೆಂಡಸಂಪಿಗೆ'? ಕಿರುತೆರೆಯ ನಟಿಯ ನೋಟಕ್ಕೆ ಕ್ಲೀನ್ ಬೌಲ್ಡ್ ಆದವರು ಏನಂತಾರೆ?

By ಪೂರ್ವ

'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಬಹಳ ಅದ್ಭುತವಾಗಿ ತನ್ನ ನಟನೆಯ ಮೂಲಕ ಎಲ್ಲರ ಮನಸ್ಸು ಕದ್ದ ಚೂರಿ ಕಾವ್ಯಾ ಶೈವ. ಮುದ್ದು ಮುದ್ದಾಗಿ ಮಾತನಾಡುವ ಈ ಬೆಡಗಿ 'ಕೆಂಡಸಂಪಿಗೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈ ನಟಿಯ ಸಹಜ ನಟನೆಗೆ ವೀಕ್ಷಕರು ಫಿದಾ ಆಗಿದ್ದರು. ಸುಮನಾ ಪಾತ್ರದಲ್ಲಿ ಮಿಂಚಿದ ಈ ನಟಿಯ ಪ್ರತಿಭೆಗೆ ವೀಕ್ಷಕರು ಮನ ಸೋತಿದ್ದರು.

ವೀಕ್ಷಕರು ಇಷ್ಟ ಪಟ್ಟ ಬಳಿಕವೂ ಕಾವ್ಯಾ ಶೈವ ದಿಢೀರನೇ ಆ ಧಾರಾವಾಹಿಯಿಂದ ಹೊರ ಬಂದಿದ್ದರು. ಇದು ಅವರನ್ನು ಇಷ್ಟ ಪಡುತ್ತಿದ್ದವರಿಗೆಲ್ಲ ಸಿಕ್ಕಾಪಟ್ಟೆ ಬೇಸರವಾಗಿತ್ತು. 'ಕೆಂಡಸಂಪಿಗೆ' ಧಾರಾವಾಹಿಯನ್ನು ಯಾಕೆ ಬಿಟ್ಟರೂ ಎಂಬ ವಿಚಾರಕ್ಕೆ ಈ ಮೊದಲೇ ಸ್ಪಷ್ಟನೆ ನೀಡಿದ್ದಾರೆ. 'ಕೆಂಡಸಂಪಿಗೆ' ಧಾರಾವಾಹಿಯಿಂದ ಹೊರ ಬಂದ ಬಳಿಕ ಹಲವು ಪ್ರಾಜೆಕ್ಟ್ ಇವರನ್ನು ಹುಡುಕಿಕೊಂಡು ಬಂದಿವೆ.

Kenda Sampige serial actress Kavya Shaiva photo is trending

ಇನ್ನು ಕಾವ್ಯಾ ಶೈವ ಅವರು ಮೂಲತಃ ಕೆ. ಆರ್ ಪೇಟೆಯವರು. ಇದೀಗ ಬೆಂಗಳೂರಿನಲ್ಲಿ ನೆಲೆಸಿದ್ದು, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ವೇದಿಕೆ ಈ ನಟಿಯ ಡ್ಯಾನ್ಸ್ ನೋಡಿ ಫಿದಾ ಆಗದವರೆ ಇಲ್ಲ. ಇವರ ಅದ್ಭುತವಾದ ಪರ್ಫಾಮೆನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗಾಗಿ ಡಿಕೆಡಿ ಪಟ್ಟವು ಕಾವ್ಯಾ ಶೈವ ಮೂಡಿಗೇರಿತ್ತು.

ಕಾವ್ಯಾ ಶೈವ ಇದೀಗ ಜಾಲಿ ಮೂಡ್‌ನಲ್ಲಿ ಇದ್ದಾರೆ. ಧಾರಾವಾಹಿ, ರಿಯಾಲಿಟಿ ಶೋ ಅಂತ ಬ್ಯುಸಿಯಾಗಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಆಗಾಗ ಫೋಟೊ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದಕ್ಕೆ ನೆಟ್ಟಿಗರು ಕೂಡ ಮುದ್ದಾದ ಮುದ್ದು ಗೊಂಬೆ ಎಂದೆಲ್ಲ ಕರೆಯುತ್ತಿದ್ದಾರೆ.

ಕಾವ್ಯಾ ಶೈವ ಇತ್ತೀಚೆಗೆ ಕೆಲವು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಫೋಟೊಗಳನ್ನು ನೋಡಿ ನೆಟ್ಟಿಗರ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಫೋಟೊಗಳಲ್ಲಿ ಕಾವ್ಯಾ ಶೈವ ಸುಂದರವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮುದ್ದಾಗಿ ಕ್ಯಾಮಾರಾಗೆ ಫೋಸ್ ನೀಡಿದ ಕಾವ್ಯಾ ಕೆಳಗೆ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.

'ಸೀತಾ ರಾಮ' ಧಾರಾವಾಹಿ ನಟಿ ಮೇಘನಾ ಶಂಕರಪ್ಪ ಇವರ ಫೋಟೊಗಳನ್ನು ಸೆರೆ ಹಿಡಿದಿದ್ದು, ಅದಕ್ಕೆ ಅವರನ್ನು ಟ್ಯಾಗ್ ಮಾಡಿ ಇವರು ಇಷ್ಟು ಬ್ಯೂಟಿಫುಲ್ ಆಗಿ ಕ್ಯಾಪ್ಚರ್ ಮಾಡಿರುವ ಪಿಕ್.. ಹಾಗೆಯೇ ಸುಮ್ಮನೆ ಗ್ಯಾಲರಿಗೆ ಸೀಮಿತ ಆಗಬಾರದು ಅಂತ ಪೋಸ್ಟ್ ಮಾಡುತ್ತಿದ್ದೇನೆ" ಎಂದು ಕಾವ್ಯಾ ಶೈವ ತನ್ನ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕಾವ್ಯಾ ಹಾಗೂ ಮೇಘನಾ ಜಾಲಿ ಮೂಡ್‌ನಲ್ಲಿದ್ದಾರೆ. ಸುತ್ತ ನೀರಿನ ಮಧ್ಯೆ ಬೋಟ್‌ನಲ್ಲಿ ಸುತ್ತಾಡಿ ಖುಷಿ ಪಟ್ಟಿದ್ದಾರೆ. ಕಾವ್ಯಾ ಶೈವ ಲುಕ್‌ಗೆ ಅಭಿಮಾನಿಗಳು ಬಹಳಷ್ಟು ಖುಷಿ ಪಟ್ಟಿರುವುದು ಮಾತ್ರ ಸತ್ಯ. ಈಗಾಗಲೇ ಸಾಕಷ್ಟು ಅಭಿಮಾನಿಗಳು ಲೈಕ್ ಕಾಮೆಂಟ್ ಮಾಡುತ್ತಿದ್ದು, ನೆಟ್ಟಿಗರು ಫೋಟೋ ನೋಡಿ ಬಹಳ ಖುಷಿ ಆಗಿದ್ದಾರೆ. "ಬ್ಯೂಟಿ ಫುಲ್ ಕಾವ್ಯಾ", "ಸೋ ಬ್ಯೂಟಿ ಫುಲ್" ಎಂದು ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Kenda Sampige serial actress Kavya Shaiva photo is trending
Read more about: actress filmibeat original poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X