ಮುಗ್ಧ ಹುಡುಗಿ ಸುಮನಾ ಆಗಿ ಮೋಡಿ ಮಾಡುತ್ತಿರುವ ಕಾವ್ಯ ಶೈವ

'ಕೆಂಡಸಂಪಿಗೆ' ಧಾರಾವಾಹಿಯ ಸುಮನಾ ಆಗಿ ಎಲ್ಲರ ಮನಗೆದ್ದವರು ಕಾವ್ಯ ಶೈವ. ಈಕೆ ರಂಗಭೂಮಿ ಹಿನ್ನೆಲೆಯಿಂದ ಬಂದವರು ಅಲ್ಲ. ತಮ್ಮ ಸ್ವಪ್ರತಿಭೆಯಿಂದ ಜನರ ಮನ ಸೂರೆ ಗೊಂಡಿದ್ದಾರೆ. ಕಾವ್ಯ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಕೆ. ಆರ್ ಪೇಟೆಯಲ್ಲಿ. ಬಾಲ್ಯದ ಶಿಕ್ಷಣವನ್ನು ಹುಟ್ಟೂರಿನಲ್ಲಿ ಮುಗಿಸಿದ್ದರು ಕಾವ್ಯ. ಆ ಬಳಿಕ ತಮ್ಮ ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ಬರುವಂತಾಯಿತು.

ಓದುವ ಸಮಯದಲ್ಲೇ ಕಿರುತೆರೆಯತ್ತ ಮುಖ ಮಾಡಿದರು. ಕಾವ್ಯ ಶೈವ ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದಾರೆ. ಟ್ರೆಡಿಶನಲ್ ಲುಕ್‌ನಲ್ಲಿ ಹೆಚ್ಚಾಗಿ ಫೋಟೋ ಶೂಟ್ ಮಾಡಿಸಿತ್ತಾರೆ. ಆ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಆಕೆಯ ಫೋಟೊಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ ಕೂಡ ಸಿಗುತ್ತದೆ.

Kenda sampige Serial Fame Actress Kavya Shaiva Personal life and other details

ಈ ಮೊದಲು 'ಭೂಮಿ ತಾಯಾನೆ' ಎಂಬ ಧಾರಾವಾಹಿಯಲ್ಲಿ ಕಾವ್ಯ ಮಿಂಚಿದ್ದಾರೆ. ಆದರೆ ಅಷ್ಟಾಗಿ ಇವರನ್ನು ಜನರು ಗುರುತಿಸಿ ಇರಲಿಲ್ಲ. ಆದರೆ ಈಗೀಗ 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಅಭಿನಯ ಮಾಡಲು ಹೊರಟ ಬಳಿಕ ಸುಮನಾ ಮುಗ್ಧತೆಯನ್ನು ಕಂಡು ಜನರು ಬಹಳ ಮೆಚ್ಚಿಕೊಂಡಿದ್ದಾರೆ. ಜನರ ಪ್ರೀತಿ ವಿಶ್ವಾಸ ನೋಡಿ ಕಾವ್ಯ ಮಾತ್ರ ಸಖತ್ ಖುಷಿ ಆಗಿದ್ದಾರೆ.

ಎಲ್ಲರ ಮನೆ ಮಾತಾದ ಕಾವ್ಯ

ಇನ್ನು ಕಾವ್ಯ ಶೈವ ಯಾವ ಅಭಿನಯ ತರಬೇತಿ ತೆಗೆದುಕೊಂಡವರು ಅಲ್ಲ. ಆಕೆಗೆ ನಟನೆಯ ಯಾವ ಅನುಭವವೂ ಇರಲಿಲ್ಲ . ಆದರೂ ನಾನು ಬಹುದೊಡ್ಡ ನಟಿಯಾಗಬೇಕು ಎಂದು ತನ್ನಲ್ಲೇ ದೊಡ್ಡ ಆಶಾ ಗೋಪುರವನ್ನು ಇಟ್ಟುಕೊಂಡು ಗೆದ್ದವರು. ತಾನು ಏನಾದರು ಸಾಧನೆ ಮಾಡಬೇಕು ಎಂದು ಹಂಬಲವನ್ನು ಇಟ್ಟುಕೊಂಡವಳು ಕಾವ್ಯ.

ಕಾವ್ಯ ನಟನೆಗೆ ಅಭಿಮಾನಿಗಳು ಫಿದಾ

ಇತ್ತೀಚಿನ ದಿನಗಳಲ್ಲಿ ಕಾವ್ಯ ನಟನೆ ಕಂಡು ಎಲ್ಲರೂ ಮೆಚ್ಚಿಕೊಳ್ಳುತ್ತಿದ್ದಾತೆ. ತೀರ್ಥಂಕರ ಮಗುವಿನ ತಾಯಿಯಾಗಿ ಸುಮನಾ ಪಡುತ್ತಿರುವ ಬಾಧೆಯನ್ನು ಯಾರ ಜೊತೆಯೂ ಹೇಳಿಕೊಳ್ಳದೆ ತಾನೇ ಎಲ್ಲವನ್ನೂ ನಿಭಾಯಿಸುತ್ತಿರುವ ದೃಶ್ಯ ಮಾತ್ರ ಮನಕಲಕುವಂತಿದೆ. ಕಾವ್ಯ ಅವರಿಗೆ ನಟನೆಯಲ್ಲಿ ಯಾವುದೇ ಅನುಭವ ಇಲ್ಲ, ತಮ್ಮ ಪ್ರತಿಭೆಯಿಂದ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.

Kenda sampige Serial Fame Actress Kavya Shaiva Personal life and other details

'ಹಂಸಗೀತಂ'ದಲ್ಲಿ ನಟನೆ

'ಹಂಸಗೀತಂ' ಎನ್ನುವ ಧಾರವಾಹಿಯಲ್ಲಿ ಕಾವ್ಯ ಅವರು ಮುಸ್ಲಿಂ ಮನೆತನದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಈಗ 'ಕೆಂಡಸಂಪಿಗೆ' ಸುಮನಾ ಆಗಿ ಗುರುತಿಸಿಕೊಂಡಿದ್ದಾರೆ. ತನ್ನ ಮಾವ ಕೇಶವ ಪ್ರಸಾದ್ ಮಾತ್ರ ಸುಮನಾಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾ ಇರುತ್ತಾರೆ. ಆದರೆ ಇದಾವುದೂ ಮನೆಯವರಿಗೆ ಕೂಡ ತಿಳಿದು ಇರುವುದು ಇಲ್ಲ. ಸುಮನಾ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ ಎನ್ನುವ ಒಂದೇ ಕಾರಣಕ್ಕೆ ಆತ ಆಕೆಯನ್ನು ಸುಮ್ಮನೆ ಬಿಟ್ಟಿದ್ದಾನೆ. ಇಲ್ಲವಾದರೆ ಮನೆಯಿಂದ ಹೊರ ಹಾಕುತ್ತಿದ್ದ. ಮುಗ್ದತೆಯಿಂದ ಕೂಡ ಸುಮನಾ ಪಾತ್ರಧಾರಿ ನಟನೆಗೆ ಫಿದಾ ಆಗದವರು ಇಲ್ಲ.

ತಾನು ಕಲಿತ ಶಾಲೆಗೆ ಅತಿಥಿ ಆದ ಸುಮನಾ

ಇತ್ತೀಚಿನ ದಿನಗಳಲ್ಲಿ ತಾನು ಕಲಿತ ಶಾಲೆ ಕಾರ್ಯಕ್ರಮಕ್ಕೆ ಅತಿಥಿ ಆಗಿ ಹೋಗಿದ್ದರು ಕಾವ್ಯ ಶೈವ . ಇದು ಆಕೆಗೆ ಬಹಳ ಖುಷಿ ನೀಡಿರುವ ಸುದ್ದಿ ಕೂಡ. ತನ್ನೆಲ್ಲ ಕನಸನ್ನು ಕಾರ್ಯ ರೂಪಕ್ಕೆ ತರಲು ಕಾವ್ಯ ಶೈವ ಅವರ ಪರಿಶ್ರಮ ಕಾರಣ ಎಂದು ಅಭಿಮಾನಿಗಳು ಎಲ್ಲರೂ ಹೇಳುತ್ತಾರೆ.

More from Filmibeat

English summary
Kenda sampige Serial Fame Actress Kavya Shaiva Personal life and other details. she steals the show with her innocence. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X