Kavaya Shaiva: 'ಕೆಂಡಸಂಪಿಗೆ' ಬಿಟ್ಮೇಲೆ ಥೀಮ್ ಫೋಟೋಶೂಟ್‌ನಲ್ಲಿ ಬ್ಯುಸಿಯಾದ ಸುಮನಾ!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಬರುತ್ತಿರುವ 'ಕೆಂಡ ಸಂಪಿಗೆ' ಧಾರಾವಾಹಿಯಲ್ಲಿ ಸುಮನಾ ಪಾತ್ರಧಾರಿ ಇತ್ತೀಚೆಗೆ ಬದಲಾವಣೆ ಆಗಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೇ ಸುಮನಾ ಪಾತ್ರ ಬದಲಾಗಿದ್ದೇಕೆ? ಎಂಬುದು ಯಾರಿಗೂ ತಿಳಿದಿಲ್ಲ. ಕಾವ್ಯ ಪಾತ್ರಕ್ಕೆ ಬೇರೆ ನಟಿ ಬಂದಿದ್ದಾರೆ. ಆದರೆ ಧಾರಾವಾಹಿ ಬಿಟ್ಟ ಮೇಲೆ ಸುಮನಾ ಎಲ್ಲಿ ಹೋದರೂ ಎಂಬುದನ್ನು ಧಾರಾವಾಹಿ ಪ್ರೇಮಿಗಳು ಹುಡುಕುತ್ತಿದ್ದಾರೆ.

ಸುಮನಾ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹೇಬ್ರು ತೀರ್ಥ ತನ್ನ ಸ್ವಾರ್ಥಕ್ಕಾಗಿ ಸುಮನಾಳನ್ನ ಮದುವೆಯಾಗಿದ್ದರು. ಆದರೆ ಅದು ದಿನ ಕಳೆದಂತೆ ಸುಮನಾ ಹಾಗೂ ತೀರ್ಥ ಪ್ರಸಾದ್ ನಡುವೆ ಪ್ರೀತಿ ಚಿಗುರಿತ್ತು. ಸಾಂಸಾರಿಕ ಜೀವನವೂ ಚೆನ್ನಾಗಿತ್ತು. ಸಾಧನಾಳ ಕಿತಾಪತಿಯ ನಡುವೆಯೂ ತೀರ್ಥ ಹಾಗೂ ಸುಮನಾ ಅದ್ಭುತ ಜೀವನಕ್ಕೆ ನಾಂದಿ ಹಾಡಿದ್ದರು. ಆದರೆ ಇದೀಗ ಸುಮನಾ ಸೋಷಿಯಲ್ ಮೀಡಿಯಾದಲ್ಲಿ ಮಿಂಚ್ತಾ ಇದಾರೆ.

Kendasampige kannada serial fame Kavya shaiva new theme video shoot
'ಕೆಂಡಸಂಪಿಗೆ'ಯಿಂದ ಹೊರ ಬರೋಕೆ ಕಾರಣ?

ಕಾವ್ಯ ಶೈವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರ ನಿರ್ವಹಿಸುತ್ತಾ ಇದ್ದರು. ಆದರೆ ಈಗ ಧಾರಾವಾಹಿಯಿಂದ ಹೊರಗೆ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ 'ವೈಯಕ್ತಿಕ ಕಾರಣದಿಂದ ಹೊರಗೆ ಬಂದಿದ್ದೇನೆ. ಈಗ ಇರುವ ಸುಮನಾಗೂ ನೀವೂ ಅದೇ ರೀತಿಯ ಬೆಂಬಲ ನೀಡಿ' ಎಂದು ಹೇಳಿದ್ದಾರೆ. ಆದರೆ ಎಲ್ಲಿಯುಇ ತಾನೂ ಧಾರಾವಾಹಿಯಿಂದ ಹೊರ ಬಂದ ಕಾರಣ ಹೇಳಿಲ್ಲ. ಇತ್ತಿಚೆಗೆ ಧಾರಾವಾಹಿ ಮತ್ತೆ ಹಳೆ ಕಥೆಗೆ ಜಾರಿದ್ದು, ಪ್ರೇಕ್ಷಕರು ಕೂಡ ಆಸಕ್ತಿ ಕಳೆದುಕೊಂಡಿದ್ದಾರೆ.


ಥೀಮ್ ಫೋಟೋಶೂಟ್ ನಲ್ಲಿ ಬ್ಯುಸಿ

ಕಾವ್ಯಾ ಶೈವ ಧಾರಾವಾಹಿಯಿಂದ ಹೊರ ಬಂದ ಮೇಲೆ ತಮ್ಮ ಅಭಿಮಾನಿಗಳನ್ನು ಬೇರೆ ರೀತಿಯಲ್ಲಿಯೇ ರಂಜಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಕಾವ್ಯಾ, ಒಳ್ಳೊಳ್ಳೆ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ವಿಭಿನ್ನವಾದ ಫೋಟೋಶೂಟ್ ಮಾಡಿಸುತ್ತಿದ್ದಾರೆ.

'ಆಕಾಶ್' ಸಾಂಗ್‌ಗೆ ಕಾವ್ಯಾ ಆಕ್ಟ್

ಇತ್ತಿಚೀಗೆ ಥೀಮ್ ಫೋಟೋಶೂಟ್ ಕ್ರೇಜ್ ಹೆಚ್ಚಾಗಿದೆ. ಹಳೇ ಹಾಡುಗಳಿಗೆ ಅಥವಾ ಇಷ್ಟದ ಹಾಡುಗಳಿಗೆ ಪೋಸ್ ಕೊಡುವುದು. ಎಡಿಟ್ ಮಾಡಿದ ಮೇಲೆ ಹಾಡುಗಳು ಸಾಕಷ್ಟು ಸೆಳೆಯುತ್ತವೆ‌. ಇದೀಗ ಕಾವ್ಯ ಶೈವ ಕೂಡ ಅದೇ ರೀತಿಯಾದಂತ ಶೂಟ್ ಮಾಡಿಸುತ್ತಿದ್ದಾರೆ. ಆಕಾಶ್ ಸಿನಿಮಾದಲ್ಲಿ ಫೇಮಸ್ ಆಗಿದ್ದಂತ ಆಹಾ ಎಂಥ ಆ ಕ್ಷಣ ಎಂಬ ಹಾಡಿಗೆ ವಿಡಿಯೋ ಶೂಟ್ ಮಾಡಿಸಿದ್ದಾರೆ. ಬೇಬಿ ಪಿಂಕ್ ಸೀರೆಯಲ್ಲಿ, ಪಾರ್ಕ್ ಒಂದರಲ್ಲಿ ನಿಂತು, ಫೋನ್ ಮಾಡುವ ರೀತಿಯಲ್ಲಿ, ಯಾರಿಗೋ ಕಾಯುತ್ತಿರುವಂತ ರೀತಿಯಲ್ಲಿ ವಿಡಿಯೋ ಶೂಟ್ ಮಾಡಿಸಿದ್ದಾರೆ. ಈ ವಿಡಿಯೋ ಶೂಟ್ ಗೆ ಎಲ್ಲರೂ ಕಮೆಂಟ್ಸ್ ಹಾಕುವ ಮೂಲಕ, ಲೈಕ್ಸ್ ಕೊಡುವ ಮೂಲಕ ಸಪೋರ್ಟ್ ಮಾಡಿದ್ದಾರೆ.

Kendasampige kannada serial fame Kavya shaiva new theme video shoot
ಪುಸ್ತಕದ ಬಗ್ಗೆ ಹೇಳಿದ ಕಾವ್ಯಾ

ಸಾಕಷ್ಟು ಜನರಿಗೆ ಕನೆಕ್ಟ್ ಆಗುವಂತ ಮತ್ತೊಂದು ವಿಡಿಯೋವನ್ನು ಕಾವ್ಯಾ ಮಾಡಿದ್ದಾರೆ. ಇದ್ದರೆ ಪುಸ್ತಕದಂತೆ ಇರಬೇಕು ಎಂಬ ಎಂಬ ವಿಚಾರಕ್ಕೆ ವಿಡಿಯೋ ಶೂಟ್ ಮಾಡಿಸಿದ್ದಾರೆ. 'ಇದ್ದರೆ ಪುಸ್ತಕದಂತೆ ಇರು. ದೂರದಿಂದ ನೋಡಿದರೆ ನೀನು ಏನೆಂಬುದು ಅರಿವಾಗದಂತೆ: ಎಂಬ ಸಾಲುಗಳು ಆ ವಿಡಿಯೋದಲ್ಲಿದೆ. ಕೆಂಪು ಸೀರೆಯನ್ನುಟ್ಟು ಕಾವ್ಯಾ, ಬಸ್ ಇಳಿದು, ಪುಸ್ತಕವೊಂದನ್ನು ಹಿಡಿದುಕೊಂಡು, ನಿಧಾನವಾಗಿ ನಡೆದುಕೊಂಡು ಬರುತ್ತಾರೆ. ಪಾರ್ಕ್‌ನಲ್ಲಿ ಕೂತು, ಬಸ್ ಸ್ಟಾಪ್‌ನಲ್ಲಿ ಕೂತು ಪುಸ್ತಕದ ಬಗ್ಗೆ ಒಂದಷ್ಟು ಹಿತ ನುಡಿಗಳನ್ನು ಹೇಳಿದ್ದಾರೆ. ಹಿತ ನುಡಿಗಳಿಗೆ ಪುಸ್ತಕ ಪ್ರೇಮಿಗಳು ಖುಷಿಯಾಗಿದ್ದಾರೆ.

More from Filmibeat

English summary
Colors kannada serial Kendasampige about Kavya shaiva new theme video shoot
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X