Kendasampige: ವರ್ಕ್ ಔಟ್ ಆಗುತ್ತಾ ಪದ್ಮ ಮಾಡಿರುವ ಪ್ಲಾನ್? ಸಾಧನಾಗೆ ಚಿಟ್ಟೆ ಮೇಲೆ ಅನುಮಾನ
ಸಾಧನಾ ನೀಡುತ್ತಿರುವ ಸವಾಲುಗಳನ್ನು ಸುಮನಾ ನೀರು ಕುಡಿದಷ್ಟೇ ಸಲೀಸಾಗಿ ಗೆದ್ದುಕೊಂಡು ಬರುತ್ತಾ ಇದ್ದಾಳೆ. ಇದೆಲ್ಲವನ್ನು ನೋಡುತ್ತಿರುವ ಸಾಧನಾಗೆ ನಾನೇನಾದರೂ ಸುಮನಾಳನ್ನು ಗೆಲ್ಲುವ ರೀತಿ ಮಾಡುತ್ತಿದ್ದೀನಾ? ಎಂದು ಎನಿಸುತ್ತಿದೆ. ಇದಕ್ಕಾಗಿ ನಾನಾ ತಂತ್ರಗಳನ್ನ ಮಾಡುತ್ತಾ ಪ್ರತಿ ತಂತ್ರಗಳನ್ನ ರೂಪಿಸುತ್ತಾ ಇದ್ದಾಳೆ. ಒಳ್ಳೆಯವಳ ಮುಖವಾಡ ಹಾಕಿಕೊಂಡು ಮನೆಯಲ್ಲಿ ಮನೆಯವರ ಮನಸ್ಸುಗಳನ್ನು ಹೊಡೆಯುವ ರೀತಿ ಮಾಡುತ್ತಿದ್ದಾಳೆ.
ಒಂದು ಕಡೆ ತೀರ್ಥಂಕರ್‌ಗೆ ಸಾಧನಾ ಮೇಲೆ ಅನುಮಾನ ಬಂದಿದೆ. ಇದಕ್ಕಾಗಿ ಮನೆಗೆ ಚಿಟ್ಟೆಯನ್ನು ಕರೆದುಕೊಂಡು ಬಂದಿದ್ದಾನೆ. ಸಾಧನಾಗೆ ಯಾಕೋ ತೀರ್ಥಂಕರ್ ಏನನ್ನು ನಮ್ಮಲ್ಲೇ ಮುಚ್ಚಿಡುತ್ತಿದ್ದಾನೆ ಎಂಬ ಅನುಮಾನ ದಟ್ಟವಾಗುತ್ತಿದೆ. ಇನ್ನು ಐಟಿ ರೈಡ್ ಆದ ಬಳಿಕ ಸಾಧನ ಚಾಣಾಕ್ಷತನದಿಂದ ಕಾಲೋನಿಯ ಅವರ ಮೇಲೆ ಅನುಮಾನ ಬರುವಂತೆ ಮಾಡಿದ್ದಳು. ನಮ್ಮವರೇ ಯಾರೋ ಸಂಚು ಮಾಡುತ್ತಿದ್ದಾರೆ ಎಂಬ ಅನುಮಾನ ದಟ್ಟವಾಗಿದೆ.

ಇನ್ನು ಪದ್ಮಾಗೆ ತನ್ನ ಮಗ ಹಾಗೂ ಸೊಸೆ ಇಬ್ಬರು ತುಂಬಾ ಪ್ರೀತಿಯಿಂದ ಇರಬೇಕು ಎಂಬ ಹಂಬಲ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕಾಗಿ ತೀರ್ಥ ಬಳಿ ಒಂದು ಚಾಲೆಂಜ್ ಮಾಡಿದ್ದು, 48 ಗಂಟೆಗೆಗಳ ಕಾಲ ಮಾತನಾಡಬಾರದು ಎಂಬ ಷರತ್ತು ಸಹ ಹಾಕಿದ್ದಾರೆ. ತೀರ್ಥಂಕರ್ ಸಹ ಸುಮನಾ ಜೊತೆ ಮಾತನಾಡದೇ ಒದ್ದಾಡುತ್ತಾ ಇದ್ದಾನೆ. ಪದೇ ಪದೇ ಸುಮನಾ ಕಾಲ್ ಮಾಡಿದರೂ ಸಹ ತೀರ್ಥ ಕರೆ ಸ್ವೀಕರಿಸುತ್ತಿಲ್ಲ. ತಾನು ಗೆಲ್ಲಲೇ ಬೇಕು ಎಂದು ಅಂದುಕೊಂಡಿದ್ದಾನೆ.
ಒಂದಾಗ್ತಾರಾ ತೀರ್ಥ-ಸುಮನಾ?
ಪದ್ಮಾಗೆ ತನ್ನ ಮಗ ಹಾಗೂ ಸೊಸೆಯನ್ನ ಒಟ್ಟಾಗಿ ನೋಡಬೇಕು ಎಂಬ ಆಸೆ ಹೆಚ್ಚಾಗಿದ್ದು ಅದಕ್ಕಾಗಿ ಚಾಲೆಂಜ್ ಕೂಡ ಹಾಕಿದ್ದಾಳೆ. ಇನ್ನು ತೀರ್ಥ ಅಮ್ಮನಿಗೆ ಹೇಳಿದ ರೀತಿಯೇ ನಡೆದುಕೊಳ್ಳುತ್ತಾ ಇದ್ದಾನೆ. ಸುಮನಾ ಏನೇ ಕೊಡಲು ಬಂದರು ಸಹ ತೆಗೆದುಕೊಳ್ಳುತ್ತಿಲ್ಲ. ಅಮ್ಮನ ಬಳಿ ಎಲ್ಲವನ್ನು ಮಾಡಿಸಿಕೊಳ್ಳುತ್ತಿದ್ದಾನೆ. ಇದು ಯಾಕೋ ಸುಮನಾಗೆ ಬೇಸರ ತರಿಸಿದೆ. ಸಾಹೇಬರು ನಾನು ಏನನ್ನು ಮಾಡಿದರು ಸಹ ಮಾಡಿಸಿಕೊಳ್ಳುತ್ತಿಲ್ಲ. ಕಾಫಿ ಮಾಡಿಕೊಟ್ಟರು ಸಹ ಕುಡಿದಿಲ್ಲ, ಇವರಿಗೆ ಏನಾಗಿದೆ ಎಂದುಕೊಂಡು ಸುಮ್ಮನಾ ಟೆನ್ಶನ್ ಮಾಡಿಕೊಂಡಿದ್ದಾಳೆ.
ಅಳುತ್ತಿರುವ ಸುಮನಾ
ಈ ಕಡೆ ಸುಮನಾ ಕಾಲ್ ಮಾಡಿದರೂ ಸಹ ತೀರ್ಥ ರಿಸಿವ್ ಮಾಡದೇ ಒದ್ದಾಡುತ್ತಾ ಇದ್ದಾನೆ. ಅವನಿಗೆ ಒಳಗೊಳಗೆ ಅರ್ಥವಾಗುತ್ತಿದೆ, ನನಗೆ ಸುಮನಾ ಮೇಲೆ ಪ್ರೀತಿ ಹುಟ್ಟುತ್ತಿದೆ ಎಂದು ಆದರೂ ಸಹ ಅದನ್ನು ತೋರಿಸಿಕೊಳ್ಳುತ್ತಿಲ್ಲ. ಇನ್ನೂ ರೂಮ್‌ನಲ್ಲಿ ತೀರ್ಥನನ್ನು ನೆನೆದು ಸುಮನಾ ಅಳುತ್ತಿದ್ದಾಳೆ. ಅಲ್ಲಿಗೆ ಬಂದ ಪದ್ಮಾ ನಿನ್ನ ಮನಸ್ಸಿನಲ್ಲಿರುವ ಪ್ರೀತಿ ಮೊದಲು ಹೊರಗೆ ತೆಗಿ. ತೀರ್ಥ ಬಂದ ಮೇಲೆ ಯಾಕೆ ನೀವು ನನ್ನ ಬಳಿ ಮಾತನಾಡುತ್ತಿಲ್ಲ ಎಂದು ಕೇಳುವ ಧೈರ್ಯ ಮಾಡು ಎಂದೆಲ್ಲಾ ಸೊಸೆಗೆ ಹೇಳುತ್ತಾ ಇದ್ದಾರೆ.
ಚಿಟ್ಟೆ ಮೇಲೆ ಶುರುವಾಯ್ತು ಅನುಮಾನ
ಸಾಧನಾಗೆ ಚಿಟ್ಟೆ ಮನೆಗೆ ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ನಾನೇನಾದರೂ ಮಾಡುತ್ತಿರುವ ಕೆಲಸ ಚಿಟ್ಟೆ ಕಣ್ಣಿಗೆ ಬಿದ್ದರೆ ಅಷ್ಟೇ ಎಂದು ಸಾಧನಾ ಅಂದುಕೊಂಡಿದ್ದಾಳೆ. ಆದರೆ ಚಿಟ್ಟೆ, ಸಾಧನಾಗೆ ತಿಳಿಯದಂತೆ ಅವಳನ್ನ ಗಮನಿಸುತ್ತಾ ಇದ್ದಾನೆ. ಕೀರ್ತನ ಬಳಿಯೂ ಸಹ ಅಷ್ಟೇ ಸಾಧನಾ ಅವರು ನಡೆದುಕೊಳ್ಳುತ್ತಿರುವ ರೀತಿಯ ಮೇಲೆ ನನಗೆಕೋ ಅನುಮಾನವಿದೆ ಎಂದು ಹೇಳುತ್ತಾ ಇದ್ದಾನೆ.

ಎಚ್ಚರದಿಂದ ಇರುಬೇಕು ಎಂದ ಚಿಟ್ಟೆ
ಇದಕ್ಕೆ ತೀರ್ಥ ನಾನು ಯಾರನ್ನ ನಂಬಬೇಕು ಯಾರನ್ನು ನಂಬಬಾರದು ಎಂಬುದೇ ಕ್ಲಾರಿಟಿ ಸಿಗುತ್ತಿಲ್ಲ ಎಂದು ಚಿಟ್ಟೆ ಬಳಿ ಹೇಳಿದ್ದಾನೆ. ಸಾಧನಾ ಮೇಡಂ ಬಹಳ ಖತರ್ನಾಕ್ ಇದ್ದಾರೆ ಅವರು ಮಾಡುವ ಕೆಲಸಗಳು ನಮ್ಮ ಕಣ್ಣಿಗೆ ಬೀಳೋದಿಲ್ಲ. ನೀವು ಅವರ ಬಳಿಯಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು ಎಂದು ಚಿಟ್ಟೆ, ತೀರ್ಥಂಕರ್ ಬಳಿ ಹೇಳಿದ್ದಾನೆ.


Click it and Unblock the Notifications











