ನಟಿಯಾಗಬೇಕು ಎಂದು ಕಿರುತೆರೆಗೆ ಕಾಲಿಟ್ಟ ನಿಸರ್ಗ ಖಳನಾಯಕಿಯಾಗಿ ಫೇಮಸ್ಸು!
ಸಾಮಾನ್ಯವಾಗಿ ನಟನೆಗೆ ಕಾಲಿಡುವವರೆಲ್ಲರೂ ತಾವು ನಾಯಕ ಅಥವಾ ನಾಯಕಿ ಆಗಬೇಕೆಂದು ಕನಸು ಕಾಣುವುದು ತೀರ ಸಹಜ. ಆದರೆ, ಎಲ್ಲರೂ ನಾಯಕರಾದರೆ ಬೇರೆ ಪಾತ್ರಗಳ ಕಥೆ ಏನು? ಅದರಲ್ಲೂ ನಾಯಕ ಪಾತ್ರದಷ್ಟೇ ಮುಖ್ಯವಾಗಿರುವ ವಿಲನ್ ಪಾತ್ರಗಳನ್ನು ಮಾಡುವವರಾರು? ಹೌದು, ಎಷ್ಟೋ ಬಾರಿ ವಿಲನ್ ಪಾತ್ರಕ್ಕೆ ಲುಕ್ ಟೆಸ್ಟ್, ಆ್ಯಕ್ಟಿಂಗ್ ಟೆಸ್ಟ್ ಎಲ್ಲವೂ ಬೇಕಾಗುತ್ತದೆ. ಹಾವ- ಭಾವದಿಂದಲೂ ಈ ವ್ಯಕ್ತಿ ವಿಲನ್ ಪಾತ್ರಕ್ಕೆ ಸೂಕ್ತವೇ ಎಂಬುದನ್ನು ನಿರ್ದೇಶಕರು ನೋಡುತ್ತಾರೆ.
ಅದೇ ರೀತಿಯಲ್ಲಿ ನಾಯಕಿ ಆಗಬೇಕೆಂಬ ಕನಸು ಹೊತ್ತು ಕಿರುತೆರೆಗೆ ಕಾಲಿಟ್ಟ ನಟಿ ನಿಸರ್ಗ ಮಂಜುನಾಥ್ ಅವರಿಗೆ ಸಿಕ್ಕಿದ್ದು ವಿಲನ್ ಪಾತ್ರ. ಹೌದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ನಾಯಕ ತೀರ್ಥಂಕರ್ ತಂಗಿ ಜಾಹ್ನವಿಯಾಗಿ ನಿಸರ್ಗ ಮಂಜುನಾಥ್ ನಟಿಸುತ್ತಿದ್ದಾರೆ .

ನಾಯಕಿ ಆಗಬೇಕೆಂಬ ಆಸೆ ಇದ್ದ ಇವರು ಸದ್ಯ ಖಳನಾಯಕಿಯ ಪಾತ್ರ ನಿರ್ವಹಿಸುತ್ತಿದ್ದು ತಮ್ಮ ಅಭಿನಯಕ್ಕೆ ಬಹಳ ಹೆಸರುವಾಸಿಯಾಗಿದ್ದಾರೆ. ಕಿರುತೆರೆ ಪ್ರಿಯರು ಕೂಡಾ ಇವರ ನಟನೆಯನ್ನು ಬಹಳ ಮೆಚ್ಚಿದ್ದಾರೆ. ಅಂದ್ಹಾಗೆ ಕ್ಯಾಮೆರಾಮ್ಯಾನ್ ಮಗಳೇ ಆಗಿದ್ದರೂ ನಟಿ ನಿಸರ್ಗ ಮಂಜುನಾಥ್ ನಟನಾ ಕ್ಷೇತ್ರಕ್ಕೆ ಬರೋದು ಸುಲಭದ ಮಾತಾಗಿರಲಿಲ್ಲವಂತೆ. ಲುಕ್ ಟೆಸ್ಟ್, ಆಡಿಶನ್ ಈ ರೀತಿ ಹಲವಾರು ಸರ್ಕಸ್‌ಗಳ ನಂತರವೇ ಈ ಪಾತ್ರ ಸಿಕ್ಕಿದೆ.
ಜಾಹ್ನವಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಈಕೆ ಪಾತ್ರದ ಬಗ್ಗೆ ನಟಿ ಬಹಳ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಕೆಯ ಅಭಿನಯಕ್ಕೆ ಒಂದೊಳ್ಳೆಯ ಉದಾಹರಣೆ ಎಂದರೆ ನಟಿ ನಿಸರ್ಗ ಮಂಜುನಾಥ್ ಅವರು ಒಂದೊಮ್ಮೆ ದೇವಸ್ಥಾನಕ್ಕೆ ತೆರಳಿದಾಗ ಒಂದು ಅಜ್ಜಿ ಆಕೆಗೆ ಹೊಡೆಯಲು ಬಂದಿದ್ದರಂತೆ. "ಯಾಕಮ್ಮಾ ನಿನ್ನ ಅತ್ತಿಗೆ ಪ್ರೆಗ್ನೆಂಟ್. ಅವಳನ್ನ ಮೇಲಿಂದ ದೂಡ್ತಿಯಲ್ಲ ಮಗು ಏನಾದ್ರು ಸತ್ತೋದ್ರೆ ಏನು ಕಥೆ?!" ಎಂದು ದಬಾಯಿಸಿದ್ದರಂತೆ. ಈ ರೀತಿಯ ಪ್ರತಿಕ್ರಿಯೆ ನಟಿಯ ನಟನೆಗೆ ಒಂದೊಳ್ಳೆಯ ಪ್ರಶಸ್ತಿ ಅಂತ ಹೇಳಬಹುದು.

ಏಕೆಂದರೆ, ಪಾತ್ರ ಯಾವುದೇ ಆಗಲಿ ನಟನೆಯ ಸಾಮರ್ಥ್ಯದ ಮೇಲೆ ಎಲ್ಲವೂ ನಿಂತಿರುತ್ತದೆ. ಒಬ್ಬ ನಾಯಕಿಯನ್ನು ಜನರು ಮೆಚ್ಚಿಕೊಂಡು ಇಷ್ಟ ಪಟ್ಟಂತೆಯೇ ಒಬ್ಬ ಖಳನಾಯಕಿಯನ್ನು ದ್ವೇಷಿಸುತ್ತಾರೆಂದರೆ ಅಲ್ಲಿ ಆ ಖಳನಾಯಕಿ ಗೆದ್ದಳೆಂದೇ ಅರ್ಥ.
ಈ ನಿಟ್ಟಿನಲ್ಲಿ ನಿಸರ್ಗ ಮಂಜುನಾಥವರು 'ಕೆಂಡಸಂಪಿಗೆ' ಧಾರಾವಾಹಿಯ ಜಾಹ್ನವಿ ಪಾತ್ರದ ಮೂಲಕ ಖಂಡಿತವಾಗಿಯೂ ತಮ್ಮ ಪ್ರೇಕ್ಷಕರ ಮನೆಗೆದ್ದಿದ್ದಾರೆ ಎಂಬುವುದರಲ್ಲಿ ಸಂಶಯವಿಲ್ಲ. ತಮ್ಮ ಪಾತ್ರದ ಬಗ್ಗೆ ಬಹಳ ಸಂತೃಪ್ತಿ ಇರುವ ನಟಿ ನಿಸರ್ಗ ಮಂಜುನಾಥ ಅವರು ಮುಂದೊಂದು ದಿನ ಸಿನಿಮಾ ಕ್ಷೇತ್ರದಲ್ಲಿ ಕಾಣಿಸಿಕೊಂಡರೂ ಅಚ್ಚರಿಯೇನಿಲ್ಲ.


Click it and Unblock the Notifications











