For Quick Alerts
  ALLOW NOTIFICATIONS  
  For Daily Alerts

  ಕೆಂಡಸಂಪಿಗೆ: ಮನೆಯಿಂದ ಹೊರಗೆ ಹೋಗ್ತಾಳ ಸುಮನಾ...?

  By ಶ್ರುತಿ ಹರೀಶ್ ಗೌಡ
  |

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಹಲವಾರು ಧಾರಾವಾಹಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.‌ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಈ ಧಾರಾವಾಹಿ. ಕೌನ್ಸಿಲರ್ ತೀರ್ಥಂಕರ ಪ್ರಸಾದ್ ಕೊಲೆಗೆ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಯಾಗಿದ್ದ ರೌಡಿ ಬಾಯ್ಬಿಟ್ಟ ಸತ್ಯದ ಆಧಾರದಲ್ಲಿ ಕಾಶಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

  ಇದರಿಂದಾಗಿ ಆತ ಬಾಯ್ಬಿಟ್ಟ ಸುಳ್ಳು ಸುಮನಾಳ ಜೀವನಕ್ಕೆ ಕುತ್ತಾಗಿ ಪರಿಣಮಿಸಿದೆ. ಕಾಶಿ ಸುಮನಾಳನ್ನು ಪ್ರೀತಿ ಮಾಡುತ್ತಿದ್ದೆ ಎಂದು ಹೇಳುವ ಮೂಲಕ ಕಥೆಗೊಂದು ತಿರುವು ಕೊಟ್ಟಿದ್ದಾನೆ. ಇದು ಮೀಡಿಯಾದಲ್ಲಿ ಪ್ರಸಾರವಾದ ಮೇಲೆ ಮನೆಯಲ್ಲಿರುವ ತೀರ್ಥನ ಅತ್ತಿಗೆ ಸಾಧನಾಳ ಕುತಂತ್ರದಿಂದ ಸುಮನಾ ಮನೆಯಿಂದ ಹೊರಗೆ ಹೋಗುವ ಪರಿಸ್ಥಿತಿ ಬಂದಿದೆ.

  ಮಾಧ್ಯಮಗಳಲ್ಲಿ ಸುಮನಾ ಬಗ್ಗೆ ಕಟ್ಟದಾಗಿ ಬಂದ ಕಾರಣ ಸಾಧನಾ ಮನೆಯ ಯಜಮಾನ ದೊಡ್ಡಣ್ಣನ ತಲೆಗೆ ಇಲ್ಲದ್ದನ್ನು ತುಂಬಿದ್ದಾಳೆ. ಇದರಿಂದ ದುಡ್ಡು ಇಲ್ಲದ ಕಾಶಿ ಬಿಟ್ಟು ಸುಮನಾ ಕೌನ್ಸಿಲರ್ ತೀರ್ಥನನ್ನು ಮದುವೆಯಾಗಿದ್ದಾಳೆ ಎಂದು ಕಿವಿಯನ್ನು ಊದುವ ಮೂಲಕ ಮತ್ತೆ ಮನೆಯಿಂದ ಹೊರಗೆ ಹಾಕುವ ಪ್ಲ್ಯಾನ್ ಮಾಡಲಾಗಿದೆ.

  ಇನ್ನೂ ಅತ್ತೆ ಮನೆಯಲ್ಲಿ ಇಲ್ಲದಾಗ ಸುಮನಾಳನ್ನು ಹೊರಗೆ ಹಾಕುವ ಕುತಂತ್ರ ನಡೆದಿದೆ. ಈ ಕುತಂತ್ರದಿಂದ ಹೇಗೆ ಪಾರಾಗುತ್ತಾಳೆ ಸುಮನಾ ಎಂಬುದನ್ನು ಕಾದು ನೋಡಬೇಕಾಗಿದೆ. ತೀರ್ಥ ಬಂಸು ಸುಮನಾಳನ್ನು ಕಾಪಾಡುತ್ತಾನಾ ಅಥವಾ ಅವಳೆ ಯಾವುದಾದರೊಂದು ದಾರಿಯನ್ನು ಹುಡುಕುತ್ತಾಳ ನೋಡಬೇಕಾಗಿದೆ.

  English summary
  Kendasampige serial January 01 episode written update. Know more about it.
  Sunday, January 1, 2023, 20:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X