Kendasampige: ಪಪ್ಪಾಯ ಕೊಟ್ಟು ಸುಮನಾ ಗರ್ಭಿಣಿ ಎಂಬುದನ್ನು ತಿಳಿದು ಬಿಟ್ಟಳು ಸಾಧನಾ.. ಮುಂದೇನು?

By ಎಸ್ ಸುಮಂತ್

ಮನೆಯಲ್ಲಿ ಸುಮನಾಗೆ ದೊಡ್ಡ ದುಷ್ಮನ್ ಎಂದರೆ ಅದು ಸಾಧನಾ. ದೊಡ್ಡ ಸೊಸೆ ಎನಿಸಿಕೊಂಡಿರುವ ಸಾಧನಾ ಹೊಟ್ಟೆಕಿಚ್ಚಿನ ಸ್ವಭಾವದವಳು. ಯಾರನ್ನು ತನ್ನ ಸರಿ ಸಮಾನ ಎಂದು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ಮನೆಯಲ್ಲಿ ಸುಮನಾಳನ್ನು ಯಾವಾಗಲೂ ಸಂಕಷ್ಟದಲ್ಲಿಯೇ ಸಿಕ್ಕಿ ಹಾಕಿಸಲು ನೋಡುತ್ತಿದ್ದಾಳೆ.

ಸುಮನಾಳನ್ನು ಕಂಡರೆ ಸಾಧನಾಗೆ ಆಗುವುದೇ ಇಲ್ಲ. ಮನೆಯಲ್ಲಿ ಮಾವನಿಂದ, ನಾದಿನಿಯಿಂದ, ಮೈದುನನಿಂದ ವಿಲನ್ ಮಾಡಿದ್ದಳು. ಅದೃಷ್ಟ ಸುಮನಾಳ ಒಳ್ಳೆಯತನ ಮನೆಯಲ್ಲಿ ಎಲ್ಲರಿಗೂ ಅರ್ಥವಾಗಿತ್ತು. ಈಗ ಸಾಧನಾ ಒಬ್ಬಳೆ ಆಗಿದ್ದಾಳೆ. ಅತ್ತೆ, ಮಾವ, ಮೈದುನ ಎಲ್ಲರೂ ಸುಮನಾಳ ಪರವಾವಿದ್ದಾರೆ.

Kendasampige serial Written Update on May 29th episode

ಮನೆಯವರಿಂದ ಸತ್ಯ ಮುಚ್ಚಿಟ್ಟ ಸುಮನಾ

ಎಲೆಕ್ಷನ್‌ನಲ್ಲಿ ಗಂಡನ ಗೆಲುವಿಗಾಗಿ ಸುಮನಾ ಹೋರಾಡಿದ್ದು ಅಷ್ಟಿಷ್ಟಲ್ಲ. ಅದು ಅತ್ತೆ ಮತ್ತು ಮಾವ ಇಬ್ಬರು ನೋಡಿದ್ದಾರೆ. ಸುಮನಾಳನ್ನು ಕಂಡರೆ ಆಗದ ಮಾವ ಇದೊಂದು ಕಾರಣಕ್ಕೆ ಸುಮನಾಳನ್ನು ಅರ್ಥ ಮಾಡಿಕೊಂಡು, ಸೊಸೆಯೆಂದು ಒಪ್ಪಿಕೊಂಡು‌ಬಿಟ್ಟರು. ಎಲೆಕ್ಷನ್ ಮುಗಿದು, ಫಲಿತಾಂಶವೂ ಬಂತು ತೀರ್ಥಂಕರ್ ಗೆಲುವನ್ನು ಸಾಧಿಸಿದ. ತನ್ನ ಗೆಲುವಿನ ಸಾಧನೆಗಾಗಿ ಸುಮನಾಳನ್ನು ಮದುವೆಯಾಗಿದ್ದ ತೀರ್ಥಂಕರ್, ಬಳಿಕ ಎಲ್ಲರ ಮುಂದೆ ಸತ್ಯ ಹೇಳಿ, ಸುಮನಾಳಿಂದ ದೂರವಾಗಲು ನಿರ್ಧರಿಸಿದ್ದ. ಆದರೆ ಅದು ಅಸಾಧ್ಯವಾಗಿತ್ತು. ಸುಮನಾ ಗರ್ಭಿಣಿಯಾಗಿದ್ದಳು. ಇದು ಮಾವನಿಗೆ ಮತ್ತು ಗಂಡನಿಗೆ ಮಾತ್ರ ಗೊತ್ತಿರುವಂತ ಸತ್ಯವಾಗಿದೆ.

ಅತ್ತೆಗೂ ಬಂದಿದೆ ಅನುಮಾನ

ಕೇಶವ ಪ್ರಸಾದ್ ಮನೆಯಲ್ಲಿ ಸುಮನಾಳನ್ನು ಮೊದಲಿನಿಂದಾನೂ ಕಾಪಾಡಿಕೊಂಡು ಬಂದಿದ್ದು ಎಂದರೆ ಅದು ಅತ್ತೆ. ಯಾರೂ ಏನೇ ಮಸಲತ್ತು ಮಾಡಿದರೂ ತಾನೂ ಸುಮಾನಾಳ ಪರವಾಗಿ‌ ನಿಲ್ಲುತ್ತಾ ಇದ್ದಳು. ಸುಮನಾಳನ್ನು ಸಾಕಷ್ಟು ಬಾರೀ ಮನೆ ಬಿಟ್ಟು ಕಳುಹಿಸಿದ್ದರು. ಅನಾರೋಗ್ಯದ ನೆಪದಿಂದ ಮತ್ತೆ ಸುಮನಾಳನ್ನು ಮನೆಗೆ ಬರುವಂತೆ ಮಾಡುತ್ತಿದ್ದಳು. ಆದರೆ, ಈಗ ಇಡೀ ಮನೆ ಖುಷಿ ಪಡುವ ಸಂತಸದ ವಿಚಾರವನ್ನು ಸುಮನಾ ತನ್ನ ಅತ್ತೆಯಿಂದಾನೇ ಮುಚ್ಚಿಟ್ಟಿದ್ದಾಳೆ‌. ಇತ್ತೀಚೆಗೆ ಸುಸ್ತು, ವಾಂತಿ ಎನ್ನುತ್ತಿರುವ ಸುಮನಾಳನ್ನು ಕಂಡು ಅತ್ತೆಗೆ ಅನುಮಾನ ಬಂದಿದೆ. ಜೊತೆಗೆ ಸುಮನಾಳ ರೂಮಿನಲ್ಲಿ ಕೇಸರಿ ಬೇರೆ ಸಿಕ್ಕಿದೆ. ಅತ್ತೆಯ ಬಳಿ ಸುಮನಾ ಸುಳ್ಳು ಹೇಳಿದ್ದಾಳೆ.‌

Kendasampige serial Written Update on May 29th episode

ಸಾಧನಾಗೆ ದೊಡ್ಡ ಅನುಮಾನ

ನಿತ್ಯಾಳನ್ನು ಈ ಮನೆಯ ಸೊಸೆಯಾಗಿ ಮಾಡಿಕೊಳ್ಳಬೇಕು ಎಂಬುದು ಸಾಧನಾಳ ಉದ್ದೇಶ. ತೀರ್ಥಂಕರ್‌ಗೂ ನಿತ್ಯಾಳ ಮೇಲೆ ಮನಸ್ಸು ಇದೆ. ಅದಕ್ಕೆ ಚುನಾವಣೆಯಲ್ಲಿ ಗೆದ್ದ ಮೇಲೆ ತೀರ್ಥಂಕರ್ ಸುಮನಾಳನ್ನು ಬಿಡುವ ಮಾತನಾಡಿದ್ದ. ನಿತ್ಯಾಳಿಗೆ ಮಾತು ಕೊಟ್ಟಿದ್ದ. ಈಗ ಎಲ್ಲವೂ ಉಲ್ಟಾ ಆಗಿರುವುದಕ್ಕೆ ಸಾಧನಾಳ ತಲೆಯಲ್ಲಿ ದೊಡ್ಡ ಪ್ರಶ್ನೆಯೇ ಕಾಡುತ್ತಿದೆ. ಅನುಮಾನವೂ ಮೂಡಿದೆ. ಸುಮನಾ ಗರ್ಭಿಣಿ ಇರಬಹುದಾ ಎಂದು ಅಂದಾಜಿಸುತ್ತಿದ್ದಾಳೆ‌.

ಪಪ್ಪಾಯದಿಂದ ತಿಳಿಯಿತು ಸತ್ಯ

ಸಾಧನಾಗೆ ಪ್ರಶ್ನೆ ಹುಟ್ಟಿದರೆ ಅದಕ್ಕೆ ಉತ್ತರ ಕಂಡುಕೊಳ್ಳುವ ತನಕ ಬಿಡುವುದಿಲ್ಲ. ಅದರಲ್ಲೂ ಸುಮನಾ ಗರ್ಭಿಣಿ ಎಂಬುದು ಗೊತ್ತಾದ ಮೇಲೆ ಬಿಡುತ್ತಾಳಾ‌..? ಅದಕ್ಕೆ ಕೆಲಸದಾಕೆ ಬಳಿ ಪಪ್ಪಾಯ ಕೊಟ್ಟು ಕಳುಹಿಸಿದ್ದಾಳೆ‌. ಪಪ್ಪಾಯ ಅಂದ್ರೆ ಸುಮನಾಗೆ ಅತಿ ಹೆಚ್ಚು ಪ್ರೀತಿ. ನೋಡಿದ ಕೂಡಲೇ ತುಂಬಾ ಖುಷಿಯಾದಳು. ಬಟ್ಟೆ ಮಡಿಚಿಟ್ಟು ತಿನ್ನುತ್ತೀನಿ ಎಂದಳು. ಇದನ್ನೆಲ್ಲಾ ನೋಡಿದ ಸಾಧನಾಗೆ ಅನುಮಾನ ಸ್ವಲ್ಪ ಕಡಿಮೆಯಾಗಿತ್ತು. ಓ ಹಾಗಾದ್ರೆ ಗರ್ಭಿಣಿ ಅಲ್ಲ ಎಂದುಕೊಂಡು ಹೊರಗೆ ನಡೆಯುವಾಗಲೇ, ಸುಮನಾ ಖುಷಿಯಿಂದ ಬಾಯಿಗೆ ಪಪ್ಪಾಯ ಇಡಲು ಹೋದಳು ತಕ್ಷಣ ತಾನು ಗರ್ಭಿಣಿ ಎಂದು ನೆನೆದು ಸುಮ್ಮನೆ ಆಗಿದ್ದಾಳೆ. ಇದನ್ನು ಕಂಡು ಸಾಧನಾಳ ಅನುಮಾನ ಸತ್ಯ ಎಂಬುದು ಗೊತ್ತಾಗಿದೆ.

More from Filmibeat

English summary
Colors Kannada serial Kendasampige Written Update on May 29th episode. Here is the details Sadhana got truth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X