Kendasampige: ಸುಮನಾ ಒಡಲಲ್ಲಿ‌ ಮಗು ಇದೆ.. ತೀರ್ಥಂಕರದ ಮನಸ್ಸಲ್ಲಿ ಸ್ವಾರ್ಥವಿದೆ.. ಮುಂದೇನು?

By ಎಸ್ ಸುಮಂತ್

ತೀರ್ಥಂಕರ್ ಪಕ್ಕಾ ರಾಜಕಾರಣಿ‌ ಎಂಬುದನ್ನು ಪ್ರೂವ್ ಮಾಡಿದ್ದಾನೆ. ರಾಜಕೀಯದ ಸಕ್ಸಸ್ ಗೋಸ್ಕರ ಸಂಬಂಧಗಳ ಜೊತೆಗೂ ಆಟ ಆಡೋದನ್ನು ಚೆನ್ನಾಗಿಯೇ ಅರಿತಿದ್ದಾನೆ. ಯಾರ ಭಾವನೆಗೆ ಧಕ್ಕೆಯಾದರೇ ಏನಂತೆ, ತನ್ನ ಸ್ವಾರ್ಥದ ಬದುಕಷ್ಟೇ ಮುಖ್ಯ ಎನ್ನುತ್ತಿದ್ದಾನೆ. ಅದಕ್ಕಾಗಿಯೇ ಹೆಂಡತಿ ಎಂಬ ಸಂಬಂಧವನ್ನು ರಾಜಕಾರಣದ ಪ್ರಚಾರಕ್ಕೆ ಬಳಸಿಕೊಂಡಿದ್ದಾನೆ.

ಸುಮನಾ ಪಟ್ಟ ಪಾಡು ಅಷ್ಟಿಷ್ಟಲ್ಲ. ಸಾಹೇಬ್ರು ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಕಷ್ಟಪಟ್ಟಳು. ಮನೆ ಮನೆ ಪ್ರಚಾರ ಮಾಡಿದಳು. ತನ್ನ ಪ್ರಾಣ ಲೆಕ್ಕಿಸದೆ, ಸಾಹೇಬ್ರ ಪ್ರಾಣ ಉಳಿಸಲು ಹೋರಾಟ ನಡೆಸಿದಳು. ಆದರೂ ತೀರ್ಥಂಕರ್‌ಗೆ ಆ ಋಣ ಕಾಡಲೇ ಇಲ್ಲ. ಈಗ ನಿತ್ಯಳ ಕಡೆ ಮನಸ್ಸು ವಾಲುತ್ತಿದೆ.

Kendasampige serial Written Update on May 5th episode

ಸುಮನಾ ಖುಷಿಗೆ ಪಾರವೇ ಇಲ್ಲ

ಸುಮನಾ ಇಷ್ಟು ದಿನ ತಾನು ತನ್ನ ಮನೆ, ಸಂಸಾರ, ಕಷ್ಟ ಸುಖ ಅಂತ ತನ್ನೆಲ್ಲಾ ಬದುಕನ್ನು ಮನೆಯವರಿಗಾಗಿಯೇ ಮೀಸಲಿಟ್ಟಳು. ಗಂಡನ ಕಷ್ಟ ಸುಖದಲ್ಲಿ ಭಾಗಿಯಾದಳು. ಈಗ ತೀರ್ಥಂಕರನ ಮಗುವಿಗೆ ತಾಯಿಯೂ ಆಗ್ತಿದ್ದಾಳೆ. ತಾನೂ ತಾಯಿ ಎಂದು ತಿಳಿದ ಕೂಡಲೇ ಇನ್ನಿಲ್ಲದ ಸಂಭ್ರಮ ಪಟ್ಟಿದ್ದಾಳೆ. ಸಾಹೇಬ್ರು ಅಪ್ಪ ಆಗ್ತಿದ್ದಾರೆ ಅಂತ ಮನೆಯವರಿಗೆಲ್ಲಾ ಹೇಳುವ ಸಂಭ್ರಮದಲ್ಲಿದ್ದಾಳೆ. ಆದರೆ, ಆ ಖುಷಿ ಹೆಚ್ಚು ಸಮಯ ನಿಲ್ಲುವುದು ಕಷ್ಟವಾಗಿದೆ. ಯಾಕಂದ್ರೆ, ತೀರ್ಥಂಕರನಿಗೆ ಮಗುವೂ ಬೇಡ. ಸುಮನಾನೂ ಬೇಡ ಎಂಬ ಮನಸ್ಥಿತಿ ನಿರ್ಮಾಣವಾಗಿದೆ.

ಕೇಶವ್ ಪ್ರಸಾದ್ ರಿಂದ ಸರಿಯಾಗುತ್ತಾ ಸಂಸಾರ?

ಕೇಶವ ಪ್ರಸಾದ್ ಮನೆಯ ಯಜಮಾನ. ಮೊದ ಮೊದಲಿಗೆ ಸುಮನಾಳನ್ನು ಕಂಡರೆ ಆಗುತ್ತಿರಲಿಲ್ಲ. ಚಿಕ್ಕ ಸೊಸೆ ಕಿವಿ ಹಿಂಡಿದ್ದೆಲ್ಲವನ್ನು ನಂಬಿಕೊಂಡು ಸುಮನಾ ಮೇಲೆ ಹೆಗರಾಡುತ್ತಿದ್ದ. ಆದರೆ ಹಾಳಾಗಿದ್ದ ರಾಜೇಶನನ್ನು ಬದಲಾಯಿಸಿದಳು, ಹೆಂಡತಿಯ ಪ್ರಾಣ ಕಾಪಾಡಿದಳು, ಮಗನ ಪ್ರಾಣ ಕಾಪಾಡಿದ್ದಲ್ಲದೇ, ಎಲೆಕ್ಷನ್ ನಲ್ಲೂ ಗೆಲ್ಲಿಸಿದಳು. ಅಷ್ಟೇ ಯಾಕೆ ಕಡೆಗೆ ತನ್ನ ಪ್ರಾಣವನ್ನು ಕಾಪಾಡಿದಳು ಎಂಬ ಪ್ರೀತಿ ಕೇಶವ ಪ್ರಸಾದ್‌ರಲ್ಲಿ ಹುಟ್ಟಿದೆ. ಅದರಿಂದಾಗಿಯೇ ಯಾವುದೇ ಕಾರಣಕ್ಕೂ ಮಗ ಸೊಸೆ ದೂರಾಗಬಾರದು ಎಂದು ಬಯಸುತ್ತಿದ್ದಾನೆ. ಈಗ ಸಂಸಾರ ಸರಿಯಾಗಬೇಕಾದರೇ ಕೇಶವ್ ಪ್ರಸಾದ್ ಅವರೇ ಮಧ್ಯ ಪ್ರವೇಶಿಸಬೇಕಾಗಿದೆ.

Kendasampige serial Written Update on May 5th episode

ಸುಮನಾ ಬಳಿ ಸತ್ಯ ಹೇಳಿದ ತೀರ್ಥಂಕರ್

ಸುಮನಾಗೆ ತಾನು ತಾಯಿಯಾಗುತ್ತಿರುವುದು ಇನ್ನಿಲ್ಲದ ಸಂತಸ ತಂದಿದೆ. ಆ ಖುಷಿಯ ವಿಚಾರವನ್ನು ಎಲ್ಲರಿಗೂ ಹೇಳಬೇಕು ಎಂದುಕೊಂಡು ಓಡೋಡಿ ಬಂದಿದ್ದಾಳೆ. ಮನೆಯವರ ಮುಂದೆಲ್ಲಾ ಹೇಳಿದ್ದಾಳೆ‌. ಆದ್ರೆ ತೀರ್ಥಂಕರ ಆ ಕ್ಷಣವೇ ಖುಷಿಯನ್ನು ಹಾಳು ಮಾಡಿದ್ದಾನೆ. "ನಾನು ಎಲೆಕ್ಷನ್ ಗೋಸ್ಕರ ಮಾತ್ರ ನಿನ್ನ ಮದುವೆಯಾಗಿದ್ದು. ನಿನ್ನ ಜೊತೆಗೆ ಸಂಬಂಧ ಮುಂದುವರೆಸಲು ಸಾಧ್ಯವಿಲ್ಲ" ಎಂದಿದ್ದಾನೆ. ಇದನ್ನು ಕೇಳಿದ ಅಪ್ಪ - ಅಮ್ಮ, ಸುಮನಾಗೆ ದಿಗಿಲು ಬಡಿದಂತೆ ಆಗಿದೆ.

ನಿತ್ಯಾಳನ್ನೇ ಮದುವೆಯಾಗುತ್ತಾನಾ..?

ತೀರ್ಥ ಈ ರೀತಿ ಮಾತನಾಡಿದ್ದು ನೋಡಿದ ಸಾಧನಾಗೆ ಖುಷಿಯ ಎಲ್ಲೆ ಮೀರಿದೆ. ನಿತ್ಯಾಳನ್ನು ಮನೆಯ ಸೊಸೆ ಮಾಡಿಕೊಳ್ಳಬೇಕು ಎಂದು ಕಾಯುತ್ತಿದ್ದಳು. ಆದರೆ ತೀರ್ಥ ಯಾವುದೋ ಇಕ್ಕಟ್ಟಿಗೆ ಸಿಲುಕಿ ಸುಮನಾಳನ್ನು ಮದುವೆಯಾಗಿದ್ದ. ಬಳಿಕವೂ ನಿತ್ಯಾಳನ್ನು ತೀರ್ಥಂಕರನ ಹಿಂದೆ ಬಿಟ್ಟಿದ್ದಳು ಸಾಧನಾ. ತೀರ್ಥನೋ ಎಲೆಕ್ಷನ್‌ನಲ್ಲಿ ಗೆಲ್ಲುವುದಕ್ಕೆ ಸುಮನಾ ಎಷ್ಟು ಕಷ್ಟ ಪಟ್ಟಿದ್ದಾಳೆ ಎಂಬುದನ್ನು ಮರೆತು ನಿತ್ಯಾಳನ್ನು ಹೊಗಳಿದ್ದ. ಈಗ ಸುಮನಾಳನ್ನು ಬಿಡುವ ಮಾತನಾಡುತ್ತಿದ್ದು, ನಿತ್ಯಾ ಮತ್ತೆ ಸಾಧನಾ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ.

More from Filmibeat

English summary
Colors Kannada Kendasampige serial Written Update on May 5th episode. Here is the details Sumana pregnant matter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X