'ಕೆಜಿಎಫ್'ಗೆ ಸಂಬಂಧಿಸಿದಂತೆ ಇಂದು ಎರಡು ಘಟನೆ ನಡೆಯಿತು

Recommended Video

KGF 2 Movie : ಕೆಜಿಎಫ್ ಸಿನೆಮಾಗೆ ಸಂಬಂಧಿಸಿದಂತೆ ನಡೆಯಿತು ಎರಡು ಘಟನೆ | FILMIBEAT KANNADA

ಕನ್ನಡ ಚಿತ್ರರಂಗವನ್ನು ದೇಶ ಮಟ್ಟದಲ್ಲಿ ಕಂಗೊಳಿಸುವಂತೆ ಮಾಡಿದ್ದ ಸಿನಿಮಾ 'ಕೆಜಿಎಫ್'. ಈ ಬಂಗಾರದ ಸಿನಿಮಾದ ಎರಡನೇ ಅಧ್ಯಾಯದ ಮುಹೂರ್ತ ಇಂದು ನೆರವೇರಿದೆ.

'ಕೆಜಿಎಫ್' ಸಿನಿಮಾದ ಡೈಲಾಗ್ ನಲ್ಲಿ ಇರುವ ಹಾಗೇಯೇ ಈ ದಿನ ಎರಡು ಘಟನೆ ನಡೆದಿದೆ. ಒಂದು ಕಡೆ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಮಹೂರ್ತ ಕಾರ್ಯಕ್ರಮ ನಡೆದರೆ, ಇತ್ತ 'ಕೆಜಿಎಫ್ ಚಾಪ್ಟರ್ 1' ಸಿನಿಮಾದ ಟಿವಿ ಪ್ರಸಾರ ದಿನಾಂಕ ಹೊರ ಬಂದಿದೆ.

ಕಲರ್ಸ್ ಕನ್ನಡ ವಾಹಿನಿ ಚಿತ್ರದ ಪ್ರಸಾರ ದಿನವನ್ನು ಬಹಿರಂಗ ಪಡಿಸಿದೆ. ಈಗಾಗಲೇ, ಹಿಂದಿಯಲ್ಲಿ ಚಿತ್ರ ಪ್ರಸಾರ ಆಗಿದ್ದು, ಕನ್ನಡದಲ್ಲಿ ಸಿನಿಮಾ ನೋಡುವ ಕಾಲ ಇದೀಗ ಬಂದಿದೆ. ಮುಂದೆ ಓದಿ...

ಮಾರ್ಚ್ 30 ರಂದು ಪ್ರಸಾರ

ಮಾರ್ಚ್ 30 ರಂದು ಪ್ರಸಾರ

'ಕೆಜಿಎಫ್' ಮೊದಲ ಅಧ್ಯಾಯದ ಟಿವಿ ಪ್ರಸಾರ ಹಕ್ಕನ್ನು ಕಲರ್ಸ್ ಕನ್ನಡ ವಾಹಿನಿ ಪಡೆದುಕೊಂಡಿತ್ತು. ಇದೀಗ ಆ ಚಿತ್ರದ ಪ್ರಸಾರ ದಿನಾಂಕವನ್ನು ಅನೌನ್ಸ್ ಮಾಡಲಾಗಿದೆ. 'ಕೆಜಿಎಫ್' ಟಿವಿಯಲ್ಲಿ ಇದೇ ತಿಂಗಳ 30 ರಂದು ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ.

ದಿಗ್ಗಜರ ಹುಟ್ಟುಹಬ್ಬಕ್ಕೆ ಸಿನಿಮಾ

ವಿಶೇಷ ಏನೆಂದರೆ, 'ಕೆಜಿಎಫ್' ಸಿನಿಮಾ ಪ್ರಸಾರ ಆಗುವ ಆಸು ಪಾಸಿನಲ್ಲಿಯೇ ಕನ್ನಡ ಚಿತ್ರರಂಗದ ಇಬ್ಬರು ದಿಗ್ಗಜ ನಟರ ಹುಟ್ಟುಹಬ್ಬ ಇದೆ. ನಟ ರವಿಚಂದ್ರನ್ ಹುಟ್ಟುಹಬ್ಬ ಮಾರ್ಚ್ 30 ರಂದು ಇದ್ದರೆ, ಮಾರ್ಚ್ 29 ರಂದು ನಟ ಅಂಬರೀಶ್ ಅವರ ಹುಟ್ಟುಹಬ್ಬದ ಸವಿ ನೆನಪು.

ಇಂದಿನಿಂದ ಚಾಪ್ಟರ್ 2 ಶುರು

ಇಂದಿನಿಂದ ಚಾಪ್ಟರ್ 2 ಶುರು

'ಕೆಜಿಎಫ್ ಚಾಪ್ಟರ್ 2' ಸಿನಿಮಾ ಚಿತ್ರೀಕರಣ ಇಂದಿನಿಂದ ಶುರು ಆಗಿದೆ. ಇಂದು ಸಿನಿಮಾದ ಮುಹೂರ್ತ ವಿಜಯನಗರದ ಕೋದಂಡರಾಮ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ಅಂದಹಾಗೆ, ನಟ ಯಶ್, ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ ಕಿರಗಂದರು, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾಟೋಗ್ರಾಫರ್ ಭುವನ್ ಗೌಡ ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

'ಕೆಜಿಎಫ್ 2' ಬಗ್ಗೆ ಯಶ್ ಟ್ವೀಟ್

'ಕೆಜಿಎಫ್ ಚಾಪ್ಟರ್ 2' ಬಗ್ಗೆ ನಟ ಯಶ್ ಟ್ವೀಟ್ ಮಾಡಿದ್ದಾರೆ. ''ಕೆಜಿಎಫ್ ಚಾಪ್ಟರ್ 1' ಸಿನಿಮಾ ನಿಮ್ಮೆರಲ್ಲ ಪ್ರೀತಿ ಪಡೆದ ನಂತರ, ಈಗ ಚಾಪ್ಟರ್ 2 ಡಬಲ್ ಧಮಾಕ ಮಾಡಲು ಸಜ್ಜಾಗಿದೆ. ಇದಕ್ಕೆ ನಿಮಗೆ ಆಶೀರ್ವಾದ ಮತ್ತು ಪ್ರೀತಿ ಬೇಕಿದೆ.'' ಎಂದು ಬರೆದುಕೊಂಡಿದ್ದಾರೆ.

More from Filmibeat

English summary
Rocking Star Yash and Srinidhi Shetty's most expected 'KGF chapter 1' kannada movie will be telecasting on march 30th in colors kannada channel. The movie is directed by Prashanth neel and producing by Hombale films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X