ಮತ್ತೆ ಟಿವಿಯಲ್ಲಿ ಕೆಜಿಎಫ್ ಚಾಪ್ಟರ್ 1 ಪ್ರಸಾರ

Recommended Video

KGF 2 Kannada Movie: ಕೆಜಿಎಫ್ 2 ಆಡಿಷನ್ ನಲ್ಲಿ ಭಾಗವಹಿಸಿದ ಆಫ್ರಿಕಾದ ಯಶ್ ಫ್ಯಾನ್ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಮುಗಿದು ಈಗ ಚಾಪ್ಟರ್ 2 ಚಿತ್ರಕ್ಕೆ ಎಲ್ಲರೂ ಕಾಯುತ್ತಿದ್ದಾರೆ. ಆದ್ರೆ, ಕಿರುತೆರೆಯಲ್ಲಿ ಮಾತ್ರ ಇನ್ನು ಕೆಜಿಎಫ್ ಚಾಪ್ಟರ್ 1 ಹವಾ ನಿಂತಿಲ್ಲ. ಮತ್ತೆ ಮತ್ತೆ ಚಾಪ್ಟರ್ 1 ಪ್ರಸಾರವಾಗುತ್ತಲೇ ಇದೆ.

ಮಾರ್ಚ್ 30 ಮತ್ತು 31ರಂದು ಎರಡು ದಿನ ಕೆಜಿಎಫ್ ಸಿನಿಮಾ ಪ್ರಸಾರ ಮಾಡಿದ್ದ ಕಲರ್ಸ್ ಕನ್ನಡ ಈಗ ಮತ್ತೆ ಕೆಜಿಎಫ್ ಚಿತ್ರವನ್ನ ಟೆಲಿಕಾಸ್ಟ್ ಆಗ್ತಿದೆ. ಹೌದು, ಏಪ್ರಿಲ್ 29 ಅಂದ್ರೆ ಇಂದು ರಾತ್ರಿ 7 ಗಂಟೆಗೆ ಕಲರ್ಸ್ ಕನ್ನಡ ಸಿನಿಮಾಸ್ ವಾಹಿನಿಯಲ್ಲಿ ಕೆಜಿಎಫ್ ಚಾಪ್ಟರ್ 1 ಮೂಡಿಬರ್ತಿದೆ.

ಕನ್ನಡ ಕಿರುತೆರೆ ಇತಿಹಾಸದಲ್ಲಿ ಅತಿ ದೊಡ್ಡ ಬೆಲೆಗೆ ಸ್ಯಾಟ್ ಲೈಟ್ ಹಕ್ಕು ಮಾರಾಟವಾಗಿರುವ ಚಿತ್ರ ಎಂದು ಕೂಡ ಹೇಳಲಾಗುತ್ತಿದೆ. ಆದ್ರೆ, ನಿರ್ದಿಷ್ಟವಾದ ಬೆಲೆ ಬಹಿರಂಗವಾಗಿಲ್ಲ.

kgf chapter 1 movie will telecast again today

ಇನ್ನುಳಿದಂತೆ ನೂರು ದಿನ ಪೂರೈಸಿರುವ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲೂ ನೂರು ಕೋಟಿ ಗಳಿಸಿದೆಯಂತೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೂ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈಗ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ ತಯಾರಿ ನಡೆಸಿದ್ದು, ಇತ್ತೀಚಿಗಷ್ಟೆ ದೊಡ್ಡ ಮಟ್ಟದ ಆಡಿಷನ್ ನಡೆದಿತ್ತು. ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಈ ಪಾರ್ಟ್ 2 ಚಿತ್ರದಲ್ಲಿ ಸಂಜಯ್ ದತ್ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Rocking star yash and srinidhi shetty starrer kgf chapter 1 movie will telecast again today evening at 7 pm in colors kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X