ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ 'ಕೆಜಿಎಫ್' ಪ್ರಸಾರ
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದಲ್ಲಿ ಮೂಡಿ ಬಂದಿದ್ದ ಸೂಪರ್ ಹಿಟ್ ಸಿನಿಮಾ 'ಕೆಜಿಎಫ್ ಚಾಪ್ಟರ್ 1' ಈಗ ಟಿವಿಯಲ್ಲಿ ಪ್ರಸಾರವಾಗ್ತಿದೆ. 25 ದಿನ ಪೂರೈಸಿ, 50 ದಿನದತ್ತ ಸಾಗುತ್ತಿರುವಾಗಲೇ ಕಿರುತೆರೆಯಲ್ಲಿ ಕೆಜಿಎಫ್ ಟೆಲಿಕಾಸ್ಟ್ ಆಗ್ತಿರುವುದು ನಿಜಕ್ಕೂ ಅಚ್ಚರಿಯೇ ಸರಿ.
ಕಳೆದ ಡಿಸೆಂಬರ್ 21 ರಂದು ಐದು ಭಾಷೆಯಲ್ಲಿ ಕೆಜಿಎಫ್ ಚಾಪ್ಟರ್ 1 ಬಿಡುಗಡೆಯಾಗಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿತ್ತು. ಕಲೆಕ್ಷನ್ ನಲ್ಲಿ ಭಾರಿ ಗಳಿಕೆ ಕಂಡಿದ್ದ ಕೆಜಿಎಫ್ ಸ್ಯಾಂಡಲ್ ವುಡ್ ಇತಿಹಾಸದಲ್ಲಿ ಹೊಸ ದಾಖಲೆಗಳನ್ನ ನಿರ್ಮಿಸಿತ್ತು.
ನೂರು ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕೆಜಿಎಫ್ ಚಿತ್ರವನ್ನ ಈಗ ಮನೆಯಲ್ಲೇ ನೋಡಬಹುದು. ಅಷ್ಟಕ್ಕೂ, ಕೆಜಿಎಫ್ ಯಾವ ಚಾನಲ್ ನಲ್ಲಿ ಪ್ರಸಾರ ವಾಗ್ತಿದೆ? ಯಾವಾಗ ಎಂದು ತಿಳಿಯಲು ಮುಂದೆ ಓದಿ.....

ಹಿಂದಿಯಲ್ಲಿ ಕೆಜಿಎಫ್
ಅಂದ್ಹಾಗೆ, ಕೆಜಿಎಫ್ ಚಾಪ್ಟರ್ 1 ಟಿವಿಯಲ್ಲಿ ಪ್ರಸಾರವಾಗ್ತಿರೋದು ಕನ್ನಡದಲ್ಲಲ್ಲ, ಹಿಂದಿ ಭಾಷೆಯಲ್ಲಿ ಟೆಲಿಕಾಸ್ಟ್ ಆಗಲಿದೆ. ಚಿತ್ರಮಂದಿರದಲ್ಲಿ ನೋಡಿ ಖುಷಿಯಾಗಿದ್ದ ಬಾಲಿವುಡ್ ಮಂದಿ ಈಗ ಟಿವಿಯಲ್ಲಿ ನೋಡುವ ಅವಕಾಶ ಪಡೆದುಕೊಂಡಿದ್ದಾರೆ.
ಸೋನಿ ಮ್ಯಾಕ್ಸ್ ನಲ್ಲಿ ಪ್ರಸಾರ
ಗರಿಷ್ಠ ಬೆಲೆಗೆ ಸೇಲ್ ಆಗಿದ್ದ ಕೆಜಿಎಫ್ ಸಿನಿಮಾ ಈಗ ಸೋನಿ ಮ್ಯಾಕ್ಸ್ ನಲ್ಲಿ ಪ್ರಸಾರವಾಗ್ತಿದೆ. ಈಗಾಗಲೇ ಕೆಜಿಎಫ್ ಪ್ರೋಮೋ ಟೆಲಿಕಾಸ್ಟ್ ಮಾಡ್ತಿರುವ ಟಿವಿ ವಾಹಿನಿ, ಅತಿ ಶೀಘ್ರದಲ್ಲಿ ಎಂದು ಜಾಹೀರಾತು ನೀಡುತ್ತಿದೆ. ಸದ್ಯದ ಮಾಹಿತಿ ಪ್ರಕಾರ ಫೆಬ್ರವರಿಯಲ್ಲಿ ಸಿನಿಮಾ ಪ್ರದರ್ಶನವಾಗಲಿದೆ.

ಇನ್ನು ಥಿಯೇಟರ್ ನಲ್ಲೇ ಇದೆ ಕೆಜಿಎಫ್
ಅಂದ್ಹಾಗೆ, ಕೆಜಿಎಫ್ ಸಿನಿಮಾ ಕರ್ನಾಟಕ ಸೇರಿದಂತೆ ಹಲವು ಕಡೆ ಇನ್ನು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣ್ತಿದೆ. ಅಷ್ಟರಲ್ಲೇ ಟಿವಿಯಲ್ಲಿ ಪ್ರಸಾರ ಮಾಡ್ತಿರೋದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಹಿಂದಿ ಭಾಷೆ ಮಾಡಿದ್ರು ಅದನ್ನ ನೋಡುವ ಕನ್ನಡಿಗರಿದ್ದಾರೆ. ಇದರಿಂದ ಥಿಯೇಟರ್ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು. ಪೈರಸಿಯಾಗಬಹುದು ಎಂಬ ಆತಂಕವೂ ಇದೆ.

ಕನ್ನಡದಲ್ಲಿ ಸದ್ಯಕ್ಕಿಲ್ಲ.!
ಕನ್ನಡ ಭಾಷೆಯಲ್ಲಿ ಕೆಜಿಎಫ್ ಸಿನಿಮಾ ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ಕೆಜಿ ರಸ್ತೆಯ ನರ್ತಕಿ ಸೇರಿದಂತೆ ರಾಜ್ಯದ ಹಲವು ಕಡೆ ಕೆಜಿಎಫ್ ಪ್ರರ್ದಶನವಾಗ್ತಿದೆ. ಹಾಗಾಗಿ, ಚಿತ್ರಮಂದಿರದಿಂದ ಹೊರಗೆ ಹೋಗುವವರೆಗೂ ಕೆಜಿಎಫ್ ಕನ್ನಡ ಟಿವಿಯಲ್ಲಿ ಬರೋದು ಬಹುತೇಕ ಅನುಮಾನ.


Click it and Unblock the Notifications











