Bhagyalakshmi: ಭಾಗ್ಯಾಳ ಲೈಫ್‌ಗೆ ಟರ್ನಿಂಗ್ ಪಾಯಿಂಟ್; ಜೂನಿಯರ್ ರಾಕಿ ಭಾಯ್ ಎಂಟ್ರಿ
ತಾಂಡವ್‌ಗೆ ಬೇಕಾಗಿದ್ದದ್ದು ಏನು. ಭಾಗ್ಯಾಳಿಂದ ಮುಕ್ತಿ. ಅದನ್ನ ಭಾಗ್ಯಾ ಕೊಟ್ಟು ಆಗಿದೆ. ತಾಂಡವ್ ಕಟ್ಟಿದ ತಾಳಿಯನ್ನು ಬಿಚ್ಚೆಸೆದು, ನನಗೂ ನಿನಗೂ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಸಾರಿ ಸಾರಿ ಹೇಳಿದ್ದಾಳೆ. ಅದೇ ಖುಷಿಯಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಮದುವೆ ಕೂಡ ಆಗಿದ್ದಾರೆ.
ಇಷ್ಟೆಲ್ಲಾ ಆದರೂ ತಾಂಡವ್ ಮಾತ್ರ ಭಾಗ್ಯಾಳ ಸಹವಾಸವನ್ನ ಬಿಡುತ್ತಾ ಇಲ್ಲ. ಮುಂದೆ ನೀ ಹೋದಾಗ ಹಿಂದೆ ನಾನು ಬರುವೆ ಎಂಬ ಹಾಡಿನಂತೆ ಭಾಗ್ಯಾಳ ಹಿಂದೆ ಮುಂದೆ ತಿರುಗುತ್ತಿದ್ದಾನೆ. ಭಾಗ್ಯಾ ಏನು ಮಾಡ್ತಾ ಇದಾಳೆ ಅನ್ನೋದೇ ಅವನ ಕಥೆಯಾಗಿದೆ.

ಒಂದು ಗಾದೆ ಮಾತಿದೆ, ಕೆಟ್ಟದು ಮಾಡುವುದಕ್ಕೆ ಒಬ್ಬರಿದ್ದರೆ ಒಳ್ಳೆಯದು ಮಾಡೋದಕ್ಕೆ ಇನ್ನೊಬ್ಬರು ಬಂದೇ ಬರುತ್ತಾರೆ ಎಂಬುದು. ಭಾಗ್ಯಾಳ ಲೈಫ್ ನಲ್ಲೂ ಅದೇ ಆಗ್ತಾ ಇದೆ. ಭಾಗ್ಯಾ ಇನ್ನೇನು ದುಡಿಮೆ ಮಾಡುವುದಕ್ಕೆ ಶುರು ಮಾಡಿದಳು ಎನ್ನುವಾಗಲೇ ತಾಂಡವ್ ಬಂದು ಕಡ್ಡಿ ಅಲ್ಲಾಡಿಸುತ್ತಿದ್ದ. ಜೋಕರ್ ಮುಖವಾಡದ ಕೆಲಸವೂ ಹೋಯ್ತು. ಈ ಸಲ ಬೀದಿಗೆ ಬರೋದು ಗ್ಯಾರಂಟಿ ಎನ್ನುವಾಗಲೇ ಜೂನಿಯರ್ ರಾಕಿ ಬಾಯ್ ಭಾಗ್ಯಾಳ ಕೈ ಹಿಡಿಯುತ್ತಿದ್ದಾನೆ.
ಭಾಗ್ಯಾ ಲೈಫ್‌ನಲ್ಲಿ ರಾಕಿ ಎಂಟ್ರಿ
'KGF' ಸಿನಿಮಾದ ಕ್ರೇಜ್ ಇನ್ನು ಕೂಡ ಕಡಿಮೆಯಾಗಿಲ್ಲ. ಆ ಸಿನಿಮಾದಲ್ಲಿ ಜೂನಿಯರ್ ರಾಕಿ ಭಾಯ್ ಪಾತ್ರ ಮಾಡಿದ್ದ ಹುಡುಗ ಕೂಡ ಎಲ್ಲರಿಗೂ ನೆನಪಿದ್ದೆ ಇರುತ್ತಾನೆ. ಆತ ಅನ್ಮೋಲ್ ಭಟ್ಕಲ್. ಇದೀಗ 'ಭಾಗ್ಯಲಕ್ಷ್ಮೀ' ಧಾರಾವಾಹಿಗೆ ಎಂಟ್ರಿಯಾಗಿದ್ದಾನೆ. ಭಾಗ್ಯಾಳ ಲೈಫ್ ಜೂನಿಯರ್ ರಾಕಿ ಭಾಯ್‌ನಿಂದ ಬದಲಾಗುವ ಎಲ್ಲಾ ಸೂಚನೆ ಸಿಕ್ಕಂತಾಗಿದೆ.
ಭಾಗ್ಯಾಳ ಕೈರುಚಿ
ಭಾಗ್ಯಾಳ ಕೈರುಚಿಗೆ ಕಳೆದು ಹೋಗದವರಿಲ್ಲ. ಅತ್ತೆ ಸೊಸೆ ಇಬ್ಬರು ಅಡುಗೆ ಮಾಡುವುದರಲ್ಲಿ ಎಕ್ಸ್ಪರ್ಟ್ ಇದ್ದಾರೆ. ಅದರಲ್ಲೂ ಭಾಗ್ಯಾಳ ಅಡುಗೆ ಎಂದರೆ ಎಲ್ಲರಿಗೂ ಇಷ್ಟ. ಬೇರೆ ಯಾರಿಗೋ ಯಾಕೆ, ದ್ವೇಷಿಸುವ ತಾಂಡವ್ ಗೂ ಇಷ್ಟ. ಒಮ್ಮೊಮ್ಮೆ ಅವಳು ಮಾಡುವ ಅಡುಗೆಯೇ ಅವಳನ್ನು ಕಾಪಾಡುವುದು ಕೂಡ. ಇದೀಗ ಜೂನಿಯರ್ ರಾಕಿಭಾಯ್ ಕೂಡ ಭಾಗ್ಯಾಳ ಅಡುಗೆ ವಿಚಾರದಲ್ಲಿ ಕಳೆದು ಹೋಗಿದ್ದಾನೆ.
ಭಾಗ್ಯಾಳ ಲೈಫ್‌ಗೆ ತಿರುವು?
ಜೂನಿಯರ್ ರಾಕಿಭಾಯ್‌ಗೆ ತನ್ಮಯ್ ಫ್ರೆಂಡ್. ಭಾಗ್ಯಾ ಕೂಡ ಪರಿಚಯ. ಅವಳ ಕೈ ಅಡುಗೆ ರುಚಿ ತಿಂದವ, ಮನೆಯವರೆಗೂ ಹುಡುಕಿಕೊಂಡು ಬಂದು ಇನ್ನೊಂದು ಬಾಕ್ಸ್ ಊಟ ಬೇಕು ಎಂದು ಕೇಳಿದ್ದಾನೆ. ಇದನ್ನು ಕಂಡ ಕುಸುಮಾ ಶಾಕ್ ಆಗಿದ್ದಾಳೆ. ಮನೆ ಅಡುಗೆಯನ್ನ ಈಗಿನ ಮಕ್ಕಳು ಅಷ್ಟು ಇಷ್ಟಪಡುತ್ತಾರಾ ಎಂದು ಪ್ರಶ್ನಿಸಿದಾಗ ಅಮ್ಮನ ಕೈರುಚಿಯಲ್ಲಿ ಅಡಗಿರುವ ಪ್ರೀತಿಯ ಬಗ್ಗೆ ವಿವರಿಸಿದ್ದಾನೆ. ಕುಸುಮಾಗೂ ಆತ ಇಷ್ಟವಾಗಿದ್ದಾನೆ.
ತಾಂಡವ್ - ಶ್ರೇಷ್ಠಾಗೆ ಸೋಲು
ಜೂನಿಯರ್ ರಾಕಿಭಾಯ್ ಇರುವುದು ಹಾಸ್ಟೆಲ್‌ನಲ್ಲಿ. ಭಾಗ್ಯಾಳ ಕೈ ರುಚಿ ಈಗ ಹಾಸ್ಟೆಲ್ ಹುಡುಗರಿಗೆ ಇಷ್ಟವಾಗಿದೆ. ಇಷ್ಟು ದಿನ ಹೇಗೋ ನಿಭಾಯಿಸಿದ್ದಳು. ಈ ಬಾರಿಯಂತು ಭಾಗ್ಯಾ ಇಎಂಐ ಕಟ್ಟುವುದಕ್ಕೆ ಸಾಧ್ಯವೇ ಇಲ್ಲ. ಬೀದಿಗೆ ಬಿದ್ದೆ ಬೀಳುತ್ತಾಳೆ ಅಂತ ಖುಷಿಯಾಗಿರುವ ತಾಂಡವ್ ಹಾಗೂ ಶ್ರೇಷ್ಠಾಗೆ ಬುದ್ದಿ ಕಲಿಸುವಂತೆ ಆಗಲಿದೆ. ಹಾಸ್ಟೆಲ್‌ಗೆ ಭಾಗ್ಯಾಳೆ ಅಡುಗೆ ಮಾಡಿಕೊಡುವ ಸಾಧ್ಯತೆಯೂ ಬರಲಿದೆ. ಪದೇ ಪದೇ ಸೋಲು ಮನುಷ್ಯನನ್ನ ಕಾಡುವುದಿಲ್ಲ. ಆದರೆ ಈ ಬಾರಿ ರಾಕಿಬಾಯ್ ಬಂದಿರುವ ಕಾರಣ ಇನ್ಮುಂದೆ ಭಾಗ್ಯಾ ಸೋಲುವುದು ಕಡಿಮೆ ಎಂಬ ಅಂದಾಜು ಸಿಗುತ್ತಿದೆ. ಇನ್ಮೇಲೆ ಏನಿದ್ದರು ತಾಂಡವ್ ಹಾಗೂ ಶ್ರೇಷ್ಠಾಗೆ ಬದುಕಿನ ಪಾಠ ಅರ್ಥವಾಗಬೇಕಿದೆ. ಜೂನಿಯರ್ ರಾಕಿ ಭಾಯ್ ಬಂದ ಬಳಿಕ ಭಾಗ್ಯಾಳ ಲೈಫ್ ಸರಿ ಹೋಗಬಹುದು.


Click it and Unblock the Notifications











