For Quick Alerts
  ALLOW NOTIFICATIONS  
  For Daily Alerts

  'ಹೆಮ್ಮೆಯ ಕನ್ನಡಿಗ ಪ್ರಶಸ್ತಿ'ಯಲ್ಲಿ ಕೇಕೆ ಹಾಕಿದ 'ಕೆಜಿಎಫ್'

  |

  'ಕೆಜಿಎಫ್' ಕನ್ನಡ ಚಿತ್ರರಂಗದ ಘನತೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋದ ಸಿನಿಮಾ. ಇಡೀ ಭಾರತ ಚಿತ್ರರಂಗ ಕನ್ನಡದ ಈ ಹೆಮ್ಮೆಯ ಸಿನಿಮಾವನ್ನು ಅಪ್ಪಿಕೊಂಡಿದೆ.

  'ಕೆಜಿಎಫ್' ಬಗ್ಗೆ ಹೃದಯ ತುಂಬಿ ಮಾತನಾಡಿದ ಬಹುಭಾಷಾ ನಟ ಸುಮನ್

  ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಈ ಸಿನಿಮಾಗೆ ಈಗ ಪ್ರಶಸ್ತಿಗಳು ಬರಲು ಶುರು ಆಗಿದೆ. ಜೀ ಕನ್ನಡ ವಾಹಿನಿಯ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಕಾರ್ಯಕ್ರಮದಲ್ಲಿ 'ಕೆಜಿಎಫ್' ಕೇಕೆ ಹಾಕಿದೆ.

  ಅತ್ಯುತ್ತಮ ಸಿನಿಮಾ : ಕೆಜಿಎಫ್

  ಅತ್ಯುತ್ತಮ ನಟ : ಯಶ್

  ಅತ್ಯುತ್ತಮ ನಿರ್ದೇಶಕ : ಪ್ರಶಾಂತ್ ನೀಲ್

  ಅತ್ಯುತ್ತಮ ಸಂಗೀತ : ರವಿ ಬಸ್ರೂರ್

  ಅತ್ಯುತ್ತಮ ಖಳನಟ : ರಾಮ್

  ಅತ್ಯುತ್ತಮ ಗೀತರಚನೆ : ವಿ ನಾಗೇಂದ್ರ ಪ್ರಸಾದ್

  ಅತ್ಯುತ್ತಮ ಛಾಯಾಗ್ರಹಣ : ಭುವನ್ ಗೌಡ

  ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬರೋಬ್ಬರಿ ಏಳು ಪ್ರಶಸ್ತಿಗಳು 'ಕೆಜಿಎಫ್' ಪಾಲಾಗಿವೆ. ರಾಕಿ ಬಾಯ್ ಅತ್ಯುತ್ತಮ ನಟನಾಗಿದ್ದಾರೆ.

  ಕೆಜಿಎಫ್ ಚಾಪ್ಟರ್ 2 ಕಥೆ ಬಗ್ಗೆ ಹೀಗೊಂದು ಚರ್ಚೆ, ಇದು ನಿಜ ಆದ್ರೆ.?

  ಜೀ ಕನ್ನಡ ವಾಹಿನಿಯ ಈ ಅದ್ದೂರಿ ಕಾರ್ಯಕ್ರಮ ಕಳೆದ ಶನಿವಾರ ನಡೆದಿದೆ. ಸದ್ಯದಲ್ಲಿಯೇ ಟಿವಿಯಲ್ಲಿ ನೀವು ಈ ಕಾರ್ಯಕ್ರವನ್ನು ವೀಕ್ಷಿಸಬಹುದಾಗಿದೆ. ಇನ್ಫೋಸಿಸ್ ಸುಧಾಮೂರ್ತಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  English summary
  Rocking Star Yash's 'KGF' movie got 7 awards in Zee Kannada channel 'Hemmeya Kannadiga' awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X