ಕನ್ನಡ ಕಿರುತೆರೆಯಲ್ಲೂ ಬಂದೆ ಬಿಡ್ತು ಕೆಜಿಎಫ್ ಚಾಪ್ಟರ್ 1.!

Recommended Video

KGF Movie: ಕನ್ನಡ ಕಿರುತೆರೆಯಲ್ಲೂ ಬಂದೆ ಬಿಡ್ತು ಕೆಜಿಎಫ್ ಚಾಪ್ಟರ್ 1.! | FILMIBEAT KANNADA

ಕಳೆದ ವರ್ಷ ಅತಿ ದೊಡ್ಡ ಯಶಸ್ಸು ಕಂಡು ಕನ್ನಡದ ಸಿನಿಮಾ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದ ಈ ಚಿತ್ರ ಐದು ಭಾಷೆಯಲ್ಲಿ ತೆರೆಕಂಡು ಇಡೀ ದೇಶ ನಮ್ಮ ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿತ್ತು.

ಸಿನಿಮಾ ರಿಲೀಸ್ ಆಗಿ ಬಹುತೇಕ ಎರಡು ತಿಂಗಳು ಆಗಿದೆ. ಈಗಾಗಲೇ ಅಮೇಜಾನ್ ಪ್ರೈಮ್ ನಲ್ಲಿ ಕೆಜಿಎಫ್ ಸಿನಿಮಾ ಪ್ರಸಾರ ಆಗ್ತಿದೆ. ಈ ಕಡೆ ಬಾಲಿವುಡ್ ಕಿರುತೆರೆಯಲ್ಲೂ ಕೆಜಿಎಫ್ ಪ್ರದರ್ಶನವಾಗಿದೆ. ಬಟ್, ಕನ್ನಡದ ಟಿವಿ ಪ್ರೇಕ್ಷಕರಿಗೆ ಇನ್ನೂ ಕೆಜಿಎಫ್ ದರ್ಶನವಾಗಲಿಲ್ಲ ಎಂಬ ಬೇಸರ ಕಾಡ್ತಿತ್ತು.

ಇದೀಗ, ಕನ್ನಡ ಕಿರುತೆರೆಯಲ್ಲೂ ಕೆಜಿಎಫ್ ಟೆಲಿಕಾಸ್ಟ್ ಆಗ್ತಿದೆ. ಅತಿ ದೊಡ್ಡ ಬೆಲೆಗೆ ಟಿವಿ ಹಕ್ಕು ಮಾರಾಟವಾಗಿದ್ದ ಕೆಜಿಎಫ್ ಈಗ ಮನೆ ಮನೆಗೂ ಬರ್ತಿದೆ. ಹಾಗಿದ್ರೆ, ಕೆಜಿಎಫ್ ಯಾವ ಚಾನಲ್ ನಲ್ಲಿ ಮತ್ತು ಯಾವಾಗ ಪ್ರಸಾರ ಎಂದು ತಿಳಿಯಲು ಮುಂದೆ ಓದಿ.....

ಕಲರ್ಸ್ ಕನ್ನಡದಲ್ಲಿ ಕೆಜಿಎಫ್

ಕಲರ್ಸ್ ಕನ್ನಡದಲ್ಲಿ ಕೆಜಿಎಫ್

ಕೆಜಿಎಫ್ ಚಿತ್ರದ ಟಿವಿ ಹಕ್ಕು ಯಾರು ಖರೀದಿಸಿರಬಹುದು ಎಂಬ ಕುತೂಹಲ ಅನೇಕರನ್ನ ಕಾಡ್ತಿತ್ತು. ಜೀ ಕನ್ನಡ ಅಥವಾ ಕಲರ್ಸ್ ಕನ್ನಡ ಅಥವಾ ಉದಯ ಟಿವಿ ಅಂತ ಗೆಸ್ ಮಾಡ್ತಿದ್ರು. ಇದೀಗ, ಕೆಜಿಎಫ್ ಚಿತ್ರ ಕಲರ್ಸ್ ಕನ್ನಡ ಪಾಲಾಗಿರುವುದು ಖಚಿತವಾಗಿದ್ದು, ರಿಲೀಸ್ ಪ್ರೋಮೋ ಟೆಲಿಕಾಸ್ಟ್ ಆಗ್ತಿದೆ.

ಕ್ರೇಜ್ ಕಮ್ಮಿಯಾಗಿಲ್ಲ

ಕ್ರೇಜ್ ಕಮ್ಮಿಯಾಗಿಲ್ಲ

ಕೆಜಿಎಫ್ ಸಿನಿಮಾವನ್ನ ಥಿಯೇಟರ್ ನಲ್ಲಿ ನೋಡಿದ್ದಾರೆ, ಅಮೇಜಾನ್ ಪ್ರೈಮ್ ನಲ್ಲಿ ನೋಡಿದ್ದಾರೆ. ಇನ್ನು ಕೆಲವರು ಮೊಬೈಲ್ ನಲ್ಲಿ ಕೂಡ ನೋಡಿದ್ದಾರೆ. ಈಗ ಟಿವಿಯಲ್ಲಿ ಬರ್ತಿದೆ ಅಂದಿದ್ದಕ್ಕೆ ಅಲ್ಲಿಯೂ ನೋಡ್ತೀವಿ ಎಂಬ ಕ್ರೇಜ್ ಇನ್ನು ಇದೆ. ಹಾಗಾಗಿ, ಕೆಜಿಎಫ್ ಪ್ರಸಾರದ ದಿನ ಟಿಆರ್ ಪಿ ಹೆಚ್ಚಬಹುದು.

50 ದಿನದಿಂದ ನೂರು ಕಡೆಗೆ

50 ದಿನದಿಂದ ನೂರು ಕಡೆಗೆ

ರಾಜ್ಯದ ಹಲವು ಚಿತ್ರಮಂದಿರದಲ್ಲಿ ಕೆಜಿಎಫ್ ಪ್ರದರ್ಶನವಾಗ್ತಿದ್ದು, ಕೆಲವು ಸೆಂಟರ್ ನಲ್ಲಿ ನೂರು ದಿನ ಮುಂದುವರಿಯುವ ಸಾಧ್ಯತೆ ಇದೆ. ಕೆಲಕ್ಷನ್ ನಲ್ಲಿ ನೂತನ ಇತಿಹಾಸ ನಿರ್ಮಿಸಿರುವ ಕೆಜಿಎಫ್ ಒಟ್ಟಾರೆ 200 ಕೋಟಿ ಗಳಿಕೆ ಕಂಡಿದೆಯಂತೆ.

ಶಿವರಾತ್ರಿ ಅಥವಾ ಯುಗಾದಿ

ಸದ್ಯ ಕೆಜಿಎಫ್ ಸಿನಿಮಾ ಪ್ರಸಾರ ದಿನ ಅಧಿಕೃತವಾಗಿಲ್ಲ. ಯಾವುದಾದರೂ ವಿಶೇಷ ದಿನದಂದು ಕೆಜಿಎಫ್ ಟೆಲಿಕಾಸ್ಟ್ ಆಗಬಹುದು ಎಂಬ ನಿರೀಕ್ಷೆ. ಹಾಗ್ನೋಡಿದ್ರೆ, ಮಾರ್ಚ್ 4 ರಂದು ಶಿವರಾತ್ರಿ ಹಬ್ಬವಿದೆ. ಏಪ್ರಿಲ್ ಮೊದಲ ವಾರದಲ್ಲಿ ಯುಗಾದಿ ಹಬ್ಬವಿದೆ. ಹಾಗಾಗಿ, ಈ ಎರಡರಲ್ಲಿ ಒಂದು ದಿನ ಕೆಜಿಎಫ್ ಪ್ರಸಾರವಾಗಬಹುದು.

More from Filmibeat

English summary
Finally, Rocking star yash is will be seen gracing the small screen. yes, KGF kannada movie will be premiered on television very soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X