»   » ಇನ್ಮೇಲೆ ಸೋಮವಾರದಿಂದ ಶುಕ್ರವಾರ ನಿಮ್ಮನೇಲಿ ನಗುವಿನ ಫುಲ್ ಮೀಲ್ಸ್ ಗ್ಯಾರೆಂಟಿ.!

ಇನ್ಮೇಲೆ ಸೋಮವಾರದಿಂದ ಶುಕ್ರವಾರ ನಿಮ್ಮನೇಲಿ ನಗುವಿನ ಫುಲ್ ಮೀಲ್ಸ್ ಗ್ಯಾರೆಂಟಿ.!

Posted By:
Subscribe to Filmibeat Kannada

ಶನಿವಾರ ಹಾಗೂ ಭಾನುವಾರ ಆಯ್ತು ಅಂದ್ರೆ ಸಾಕು... ಕಿಲ ಕಿಲ ಅಂತ ನಕ್ಕು ನಲಿಯಲು ಕಿರುತೆರೆ ವೀಕ್ಷಕರು ತಪ್ಪದೇ ಜೀ ಕನ್ನಡ ವಾಹಿನಿ ಟ್ಯೂನ್ ಮಾಡುತ್ತಿದ್ದರು. ಅಷ್ಟರಮಟ್ಟಿಗೆ, 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮ ವೀಕ್ಷಕರ ಮನ ಗೆದ್ದಿತ್ತು.

ಈಗ ನೀವೆಲ್ಲ ನಕ್ಕು ನಲಿಯಲು 'ವಾರಾಂತ್ಯ' ಬೇಕಾಗಿಲ್ಲ. ಸೋಮವಾರದಿಂದ ಹಿಡಿದು ಶುಕ್ರವಾರದವರೆಗೆ ನಿಮಗೆ ಪ್ರತಿ ಸಂಜೆ ನಗುವಿನ ಫುಲ್ ಮೀಲ್ಸ್ ದೊರೆಯಲಿದೆ.

ಹಾಗೆ ನಗುವಿನ ರಸದೌತಣವನ್ನ ನಿಮಗೆಲ್ಲ ಬಡಿಸುವವರು ಒನ್ ಅಗೇನ್ ಕಾಮಿಡಿ ಕಿಲಾಡಿಗಳೇ.! ಅದು 'ಕಿಲಾಡಿ ಕುಟುಂಬ' ಎಂಬ ಹೊಸ ರೂಪದಲ್ಲಿ....

'ಕಿಲಾಡಿ ಕುಟುಂಬ'

'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಿಲಾಡಿಗಳೆಲ್ಲ 'ಕಿಲಾಡಿ ಕುಟುಂಬ'ದಲ್ಲಿ ಮತ್ತೆ ಒಂದಾಗಿದ್ದಾರೆ. ನಿಮಗೆಲ್ಲ ಮನರಂಜನೆ ನೀಡಲು ಸೋಮವಾರದಿಂದ ಶುಕ್ರವಾರ ಬರ್ತಿದ್ದಾರೆ.

ಪ್ರಸಾರ ಯಾವಾಗ.?

ಈಗಾಗಲೇ 'ಕಿಲಾಡಿ ಕುಟುಂಬ' ಪ್ರೋಮೋಗಳು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಆದ್ರೆ, ಕಾರ್ಯಕ್ರಮ ಪ್ರಸಾರ ಯಾವಾಗ್ಲಿಂದ ಎಂಬ ಮಾಹಿತಿಯನ್ನ ಜೀ ಕನ್ನಡ ಬಿಟ್ಟುಕೊಟ್ಟಿಲ್ಲ.

ಪ್ರೋಮೋ ನೋಡಿದ್ರಾ.?

'ಕಿಲಾಡಿ ಕುಟುಂಬ' ಕಾರ್ಯಕ್ರಮದ ಪ್ರೋಮೋ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ ನೋಡಿ....

'ಅವಳಲ್ಲ... ಅವನು'

ಕಾಮಿಡಿ ಕಿಲಾಡಿಗಳಾದ ಸಂಜು ಬಸಯ್ಯ ಹಾಗೂ ಅನೀಶ್ ಕಾಣಿಸಿಕೊಂಡಿರುವ 'ಕಿಲಾಡಿ ಕುಟುಂಬ' ಕಾರ್ಯಕ್ರಮದ ಹೊಚ್ಚ ಹೊಸ ಪ್ರೋಮೋ ಇಲ್ಲಿದೆ. ಲಿಂಕ್ ಕ್ಲಿಕ್ ಮಾಡಿ ನೋಡಿ...

English summary
'Khiladi Kutumba', New show in Zee Kannada Channel to telecast from Monday to Friday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada