ಉಪೇಂದ್ರಗೆ ಕಿಚ್ಚ ಸುದೀಪ್ ಇಟ್ಟ ಬೇಡಿಕೆ ಏನು?
'ಓಂ', 'ಎ', 'ಉಪೇಂದ್ರ', 'ಸೂಪರ್', 'ಉಪ್ಪಿ-2' ಅಂತಹ ಸೂಪರ್ ಡ್ಯೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ರಿಯಲ್ ಸ್ಟಾರ್ ಉಪೇಂದ್ರ ಹೆಚ್ಚು ಚಿತ್ರಗಳನ್ನ ನಿರ್ದೇಶನ ಮಾಡಲಿ ಅನ್ನೋದು ಅಭಿಮಾನಿಗಳ ಆಶಯ.
ಇದೇ ಆಶಯ ಕಿಚ್ಚ ಸುದೀಪ್ ಗೂ ಇದೆ. ಅದಕ್ಕೆ 'ಬಿಗ್ ಬಾಸ್' ವೇದಿಕೆಯಲ್ಲಿ ಉಪೇಂದ್ರಗೆ ''ಹೆಚ್ಚು ಚಿತ್ರಗಳನ್ನ ನಿರ್ದೇಶನ ಮಾಡಿ'' ಅಂತ ಬೇಡಿಕೆ ಇಟ್ಟರು.['ಬಿಗ್ ಬಾಸ್' ವೇದಿಕೆಯಲ್ಲಿ ಉಪೇಂದ್ರ 'ರಿಯಲ್ ಸ್ಟಾರ್' ಆದ ಜರ್ನಿ]

ಇದಕ್ಕೆ ಒಪ್ಪಿಕೊಂಡ ಉಪೇಂದ್ರ ಕೂಡ ಸುದೀಪ್ ಗೆ ''ನೀವು ವರ್ಷಕ್ಕೆ ಮೂರು ಸಿನಿಮಾ ಮಾಡಿ'' ಅಂತ ಡಿಮ್ಯಾಂಡ್ ಮಾಡಿದರು.
ವರ್ಷಕ್ಕೆ ಒಂದು ಸಿನಿಮಾ ಮಾಡುವ ಸುದೀಪ್ 'ನೋಡೋಣ' ಅಂತ್ಹೇಳಿದ್ರು.[ರಾಜಕೀಯಕ್ಕೆ ಧುಮುಕಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ!?]
'ಬಿಗ್ ಬಾಸ್' ವೇದಿಕೆ ಮೇಲೆ ಒಪ್ಪಿಕೊಂಡಂತೆ ಇಬ್ಬರು ಮನಸ್ಸು ಮಾಡಿದರೆ ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ.
More from Filmibeat
English summary
Kannada Actor Kiccha Sudeep demands Real Star Upendra to direct more movies in Super Sunday with Sudeep (Bigg Boss Kannada-3) show.
bigg boss kannada 3 bigg boss reality show tv colors channel sudeep upendra ಬಿಗ್ ಬಾಸ್ ಕನ್ನಡ 3 ಬಿಗ್ ಬಾಸ್ ರಿಯಾಲಿಟಿ ಶೋ ಟಿವಿ ಕಲರ್ಸ್ ವಾಹಿನಿ ಸುದೀಪ್ ಉಪೇಂದ್ರ


Click it and Unblock the Notifications











