twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ವೇದಿಕೆಯಲ್ಲಿ ಕಿಚ್ಚನಿಗೆ 'ಬಿಗ್' ಸರ್ಪ್ರೈಸ್: ಸುದೀಪ್ ಗೆ ಬಿ.ಎಂ.ಡಬ್ಲ್ಯೂ ಬೈಕ್ ಗಿಫ್ಟ್.!

    |

    'ಬಿಗ್ ಬಾಸ್' ವೇದಿಕೆ ಮೇಲೆ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಸರ್ಪ್ರೈಸ್ ಹಾಗೂ ಶಾಕ್ ನೀಡುವುದರಲ್ಲಿ ಕಿಚ್ಚ ಸುದೀಪ್ ಎತ್ತಿದ ಕೈ. ಆರು ವರ್ಷಗಳಿಂದ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಕಿಚ್ಚ ಸುದೀಪ್ ಗೆ 'ಬಿಗ್ ಬಾಸ್' ವೇದಿಕೆಯಲ್ಲಿ ಬಿಗ್ ಸರ್ಪ್ರೈಸ್ ಸಿಕ್ಕಿದೆ.

    ಹೇಳಿ ಕೇಳಿ ಕಿಚ್ಚ ಸುದೀಪ್ ಗೆ ಕಾರು ಮತ್ತು ಬೈಕ್ ಗಳ ಮೇಲೆ ಸಿಕ್ಕಾಪಟ್ಟೆ ಕ್ರೇಜ್ ಇದೆ. ಬಿಡುವಿನ ಸಮಯದಲ್ಲಿ ಬೈಕ್ ಏರಿ ಊರೂರು ಸುತ್ತುವ ಸುದೀಪ್ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ.

    ಇಂತಿಪ್ಪ ಸುದೀಪ್ ರವರ ಇಷ್ಟ ಕಷ್ಟಗಳನ್ನು ಚೆನ್ನಾಗಿ ಅರಿತಿರುವ ಅಭಿಮಾನಿ ಶ್ರೀನಿವಾಸ್ ರೆಡ್ಡಿ ಮತ್ತು ಬಿಗ್ ಬಾಸ್ ತಂಡದಿಂದ ಸುದೀಪ್ ಗೆ ದೊಡ್ಡ ಕಾಣಿಕೆ ನೀಡಿದೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

    ಸುದೀಪ್ ಗೆ ಸಿಕ್ತು ದೊಡ್ಡ ಉಡುಗೊರೆ

    ಸುದೀಪ್ ಗೆ ಸಿಕ್ತು ದೊಡ್ಡ ಉಡುಗೊರೆ

    ಬೈಕ್ ಗಳೆಂದರೆ ಕಿಚ್ಚ ಸುದೀಪ್ ಗೆ ಪಂಚ ಪ್ರಾಣ. ಇದನ್ನು ಅರಿತ ಅಭಿಮಾನಿ ಶ್ರೀನಿವಾಸ ರೆಡ್ಡಿ ಮತ್ತು ಬಿಗ್ ಬಾಸ್ ತಂಡ ಕಿಚ್ಚ ಸುದೀಪ್ ಗೆ ದುಬಾರಿ ಬಿ ಎಂ ಡಬ್ಲ್ಯೂ ಬೈಕ್ ನ ಗಿಫ್ಟ್ ಆಗಿ ನೀಡಿದೆ.

    ಬಿಗ್ ಬಾಸ್ ಫೈನಲ್ ಗೂ ಮುಂಚೆ ಸುದೀಪ್ ಅಂತರಾಳದ ಮಾತುಬಿಗ್ ಬಾಸ್ ಫೈನಲ್ ಗೂ ಮುಂಚೆ ಸುದೀಪ್ ಅಂತರಾಳದ ಮಾತು

     ಕೆಂಪು ಬಣ್ಣ ಅಂದ್ರೆ ಅಚ್ಚುಮೆಚ್ಚು

    ಕೆಂಪು ಬಣ್ಣ ಅಂದ್ರೆ ಅಚ್ಚುಮೆಚ್ಚು

    ಕಿಚ್ಚ ಸುದೀಪ್ ಗೆ ಕೆಂಪು ಬಣ್ಣ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ ಕೆಂಪು ಬಣ್ಣದ ಬಿ.ಎಂ.ಡಬ್ಲ್ಯೂ ಬೈಕ್ ಅನ್ನು ಸುದೀಪ್ ಗೆ ನೀಡಲಾಗಿದೆ. ಬಿಗ್ ಬಾಸ್ ವೇದಿಕೆ ಮೇಲೆ ಬೈಕ್ ಮತ್ತು ಕೀಯನ್ನು ಸುದೀಪ್ ಗೆ ಶ್ರೀನಿವಾಸ್ ರೆಡ್ಡಿ ಹಸ್ತಾಂತರಿಸಿದರು.

    ಬಿಗ್ ಬಾಸ್ 6ನೇ ಸೀಸನ್ ಅಂತ್ಯ : ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ಕಿಚ್ಚ ಬಿಗ್ ಬಾಸ್ 6ನೇ ಸೀಸನ್ ಅಂತ್ಯ : ಟ್ವೀಟ್ ಮಾಡಿ ಧನ್ಯವಾದ ತಿಳಿಸಿದ ಕಿಚ್ಚ

     ಸ್ನೇಹಿತರು

    ಸ್ನೇಹಿತರು

    ಹಾಗ್ನೋಡಿದ್ರೆ ಶ್ರೀನಿವಾಸ್ ರೆಡ್ಡಿ ಮತ್ತು ಸುದೀಪ್ ಸ್ನೇಹಿತರು. ಶ್ರೀನಿವಾಸ್ ರೆಡ್ಡಿ ಅವರ ಶೋ ರೂಮ್ ನಲ್ಲಿ ಸುದೀಪ್ ಕೆಲ ಬೈಕ್ ಗಳನ್ನು ಖರೀದಿಸಿದ್ದಾರೆ. ಇದೀಗ ಅದೇ ಶ್ರೀನಿವಾಸ್ ರೆಡ್ಡಿ ಸುದೀಪ್ ಗೆ ಬೈಕ್ ಗಿಫ್ಟ್ ಕೊಟ್ಟಿದ್ದಾರೆ.

    ಫಿನಾಲೆ ಗ್ಯಾಪ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಗ್ರಾಂಡ್ ಪಾರ್ಟಿ ಕೊಟ್ಟ ಕಿಚ್ಚ ಸುದೀಪ್ ಫಿನಾಲೆ ಗ್ಯಾಪ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಗ್ರಾಂಡ್ ಪಾರ್ಟಿ ಕೊಟ್ಟ ಕಿಚ್ಚ ಸುದೀಪ್

     ಸುದೀಪ್ ಫುಲ್ ಖುಷ್

    ಸುದೀಪ್ ಫುಲ್ ಖುಷ್

    ''ನಿಮ್ಮ ಬಳಿ ಎಷ್ಟು ಬೈಕ್ ಗಳಿವೆ'' ಎಂದು ರಾಪಿಡ್ ರಶ್ಮಿ ಪ್ರಶ್ನಿಸಿದಾಗ, ''ಅದನ್ನೆಲ್ಲ ಕೇಳಬೇಡಿ, ಮೊನ್ನೆಯಷ್ಟೇ ಬೇರೆ ವಿಚಾರ ಆಗಿದೆ'' ಎಂದು ಸುದೀಪ್ ನಗೆ ಚಟಾಕಿ ಹಾರಿಸಿದರು. ಒಟ್ನಲ್ಲಿ ಹೊಸ ಬೈಕ್ ಸಿಕ್ಕಿರುವುದಕ್ಕೆ ಸುದೀಪ್ ಅಂತೂ ಫುಲ್ ಖುಷ್ ಆಗಿದ್ದಾರೆ.

    English summary
    Kiccha Sudeep gets BMW Bike as gift in Bigg Boss Kannada 6 stage.
    Monday, January 28, 2019, 18:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X