For Quick Alerts
  ALLOW NOTIFICATIONS  
  For Daily Alerts

  ನಟ ಹರೀಶ್ ರಾಜ್ ಗೆ ಸಿಕ್ಕಿದೆ ಕಿಚ್ಚ ಸುದೀಪ್ ಕಡೆಯಿಂದ ದುಬಾರಿ ಉಡುಗೊರೆ.!

  |
  Harish Raj gets a watch from Sudeep after Bigg Boss | Kiccha sudeep | Harishraj | BBK7 | Oneindia Kannada

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ವೀಕ್ಷಕರಿಗೆ ಹೆಚ್ಚು ಮನೋರಂಜನೆ ನೀಡಿದವರ ಪೈಕಿ ನಟ ಹರೀಶ್ ರಾಜ್ ಕೂಡ ಒಬ್ಬರು. ಮಿಮಿಕ್ರಿ ಮಾಡುತ್ತ, ಎಲ್ಲರನ್ನು ನಕ್ಕು ನಲಿಸುತ್ತ ಹರೀಶ್ ರಾಜ್ 'ಬಿಗ್ ಬಾಸ್' ಮನೆಯಲ್ಲಿ ಕಾಲ ಕಳೆದಿದ್ದರು.

  'ಬಿಗ್ ಬಾಸ್' ಮನೆಯಲ್ಲಿ ಪ್ರಬಲ ಸ್ಪರ್ಧಿ ಆಗಿದ್ದರೂ, ಫಿನಾಲೆಗೆ ಬೆರಳೆಣಿಕೆಯಷ್ಟು ದಿನಗಳು ಬಾಕಿ ಇದ್ದಾಗ, ಹರೀಶ್ ರಾಜ್ ಔಟ್ ಆಗಿದ್ದರು. ಇದು ವೀಕ್ಷಕರಿಗೆ ಮಾತ್ರ ಅಲ್ಲ, ಕಿಚ್ಚ ಸುದೀಪ್ ಗೂ ಬೇಸರ ತಂದಿತ್ತು. ಭರಪೂರ ಮನರಂಜನೆ ನೀಡಿದ್ದ ಹರೀಶ್ ರಾಜ್ ಗೆ ಏನಾದರೂ ಕೊಡಬೇಕು ಎಂದುಕೊಂಡಿದ್ದ ಸುದೀಪ್ ದುಬಾರಿ ಬೆಲೆಯ ಉಡುಗೊರೆಯನ್ನೇ ನೀಡಿದ್ದಾರೆ.

  ಹೌದು, ನಟ ಹರೀಶ್ ರಾಜ್ ಗೆ ಸುದೀಪ್ ದುಬಾರಿ ಬೆಲೆಯ ವಾಚ್ ನ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಬಗ್ಗೆ ಹರೀಶ್ ರಾಜ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

  ಉಡುಗೊರೆಯಾಗಿ ದುಬಾರಿ ವಾಚ್ ಕೊಟ್ಟ ಸುದೀಪ್

  ಉಡುಗೊರೆಯಾಗಿ ದುಬಾರಿ ವಾಚ್ ಕೊಟ್ಟ ಸುದೀಪ್

  ''ಬಿಗ್ ಬಾಸ್' ಆದ್ಮೇಲೆ ನಾವೆಲ್ಲ ಒಂದು ಪಾರ್ಟಿಗೆ ಸೇರಿದ್ವಿ. ಅಲ್ಲಿ, ಸುದೀಪ್ ಸರ್, ''ಹರೀಶ್ ರಾಜ್ ತುಂಬಾ ಚೆನ್ನಾಗಿ ಮನೋರಂಜನೆ ಕೊಟ್ಟಿದ್ದಾರೆ. ನಾನು ಅವರಿಗೆ ಏನಾದರೂ ಮಾಡಲೇಬೇಕು'' ಅಂತ ಹೇಳಿ ತಕ್ಷಣ ಅವರ ಕೈಯಲ್ಲಿದ್ದ ವಾಚನ್ನು ತೆಗೆದು ನನಗೆ ಹಾಕಿದರು. ಜೊತೆಗೆ ''ಒಳ್ಳೆಯದಾಗಲಿ'' ಅಂತ ವಿಶ್ ಮಾಡಿದರು. ನನಗೆ ಆಗ ತುಂಬಾ ಎಮೋಷನಲ್ ಆಯ್ತು. ನಾನು ಸುದೀಪ್ ಸರ್ ನ ತಬ್ಬಿಕೊಂಡೆ'' ಎಂದು ಸುದೀಪ್ ತಮಗೆ ಕೊಟ್ಟ ಉಡುಗೊರೆ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ನೀಡಿರುವ ಸಂದರ್ಶನದಲ್ಲಿ ಹರೀಶ್ ರಾಜ್ ಹೇಳಿಕೊಂಡಿದ್ದಾರೆ.

  'ಬಿಗ್ ಬಾಸ್' ಗೆದ್ದವರಿಗೆ ಮಾತ್ರ ಅಲ್ಲ, ಸೋತವರಿಗೂ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ.!'ಬಿಗ್ ಬಾಸ್' ಗೆದ್ದವರಿಗೆ ಮಾತ್ರ ಅಲ್ಲ, ಸೋತವರಿಗೂ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ.!

  ರಿಯಲ್ ಸೂಪರ್ ಸ್ಟಾರ್

  ರಿಯಲ್ ಸೂಪರ್ ಸ್ಟಾರ್

  ''ನೋಡೋಕೆ ಖಡಕ್ ಆಗಿ ಕಾಣಿಸಿದರೂ, ಸುದೀಪ್ ಸರ್ ಜೆಂಟಲ್ ಮ್ಯಾನ್. ಅವರು ರಿಯಲ್ ಸೂಪರ್ ಸ್ಟಾರ್. ಒಬ್ಬ ಕಲಾವಿದನಾಗಿ, ಇನ್ನೊಬ್ಬ ಕಲಾವಿದನನ್ನು ಗೈಡ್ ಮಾಡಿ, ನಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆ ತಂದಿದ್ದಾರೆ. ನಮ್ಮ ಜೊತೆ ನಕ್ಕಿದ್ದಾರೆ. ನಮಗೆ ಸಮಾಧಾನ ಮಾಡಿದ್ದಾರೆ'' ಎಂದು ಸುದೀಪ್ ಬಗ್ಗೆ ಹಾಡಿ ಹೊಗಳಿದ್ದಾರೆ ಹರೀಶ್ ರಾಜ್.

  ನಿಮ್ಮ ಊಹೆಗೂ ಮೀರಿದೆ 'ಬಿಗ್ ಬಾಸ್'ಗಾಗಿ ನಟಿ ದೀಪಿಕಾ ದಾಸ್ ಪಡೆದ ಸಂಭಾವನೆ.!ನಿಮ್ಮ ಊಹೆಗೂ ಮೀರಿದೆ 'ಬಿಗ್ ಬಾಸ್'ಗಾಗಿ ನಟಿ ದೀಪಿಕಾ ದಾಸ್ ಪಡೆದ ಸಂಭಾವನೆ.!

  ಸುದೀಪ್ ತಂದೆ ಹೇಳಿದ್ದೇನು.?

  ಸುದೀಪ್ ತಂದೆ ಹೇಳಿದ್ದೇನು.?

  ''ಫಿನಾಲೆ ದಿನ ಸುದೀಪ್ ಅವರ ತಂದೆ ಸಿಕ್ಕಿದ್ದರು. ಅವರು, ''ಹರೀಶ್ ರಾಜ್.. ನೀವು ಮತ್ತು ಪ್ರತಾಪ್ ನಮ್ಮ ದೀಪುನ ತುಂಬಾನೇ ನಗಿಸಿದ್ದೀರಾ'' ಅಂತ ಹೇಳಿದ್ದರು. ಅವರು ನಮ್ಮ ಹೆಸರುಗಳನ್ನು ನೆನಪಿಟ್ಟುಕೊಂಡು ಹೇಳಿದ್ದು ನನಗೆ ತುಂಬಾನೇ ಖುಷಿ ಆಯ್ತು'' ಅಂತಾರೆ ಹರೀಶ್ ರಾಜ್.

  ಇದಕ್ಕಿಂತ ದೊಡ್ಡ ಗೆಲುವು ಮತ್ತೊಂದಿಲ್ಲ.!

  ಇದಕ್ಕಿಂತ ದೊಡ್ಡ ಗೆಲುವು ಮತ್ತೊಂದಿಲ್ಲ.!

  ''ಸುದೀಪ್ ದೊಡ್ಡ ಸೂಪರ್ ಸ್ಟಾರ್ ಆಗಿ, ''ನೀವು ನಮ್ಮನ್ನ ತುಂಬಾ ಎಂಟರ್ ಟೇನ್ ಮಾಡಿದ್ದೀರಾ. ನೀವು ಕಪ್ ಗೆಲ್ಲಲಿಲ್ಲ. ಆದ್ರೆ, ಜನರ ಮನಸ್ಸನ್ನು ಗೆದ್ದಿದ್ದೀರಾ'' ಅಂತ ಹೇಳಿದಾಗ ತುಂಬಾನೇ ಖುಷಿ ಆಯ್ತು. ಇದಕ್ಕಿಂತ ದೊಡ್ಡ ಗೆಲುವು ಮತ್ತೊಂದಿಲ್ಲ ಅಂತ ಅನಿಸಿತು'' ಎಂದಿದ್ದಾರೆ ನಟ ಹರೀಶ್ ರಾಜ್.

  English summary
  Kiccha Sudeep gifts costly watch to Harish Raj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X