ಈ ನಟಿಯ ಮೇಲೆ ಕಿಚ್ಚ ಸುದೀಪ್ ಗೆ ಕ್ರಶ್ ಆಗಿತ್ತು.! ಯಾರದು.?

By Harshitha

Recommended Video

ಹೌದಾ ..!! ಸುದೀಪ್ ಗೆ ಈ ನಟಿಯ ಮೇಲೆ ಲವ್ ಆಗಿತ್ತ ..??| Filmibeat Kannada

''ಕನ್ನಡ ಚಿತ್ರರಂಗದಲ್ಲಿ ನಿಮಗೆ ಯಾವ ಹೀರೋ ಮೇಲೆ ಕ್ರಶ್ ಆಗಿದೆ.?'' ಎಂಬ ಪ್ರಶ್ನೆಯನ್ನು ಮುಂದಿಟ್ಟಾಗ, ಬಹುತೇಕ ನಟಿಯರು ಕೊಡುವ ಉತ್ತರ ''ಸುದೀಪ್''.

ಸುರಸುಂದರಾಂಗ, ಸ್ಟೈಲ್ ಐಕಾನ್ ಆಗಿರುವ ಕಿಚ್ಚ ಸುದೀಪ್ ಗೆ ಕನ್ನಡ ಚಿತ್ರರಂಗದಲ್ಲಿರುವ ಓರ್ವ ಹೀರೋಯಿನ್ ಮೇಲೆ ಕ್ರಶ್ ಆಗಿತ್ತಂತೆ. ಅದು ಯಾರಪ್ಪ ಅಂದ್ರೆ, ಬೇರೆ ಯಾರೂ ಅಲ್ಲ ರೀ... 'ಕನಸಿನ ರಾಣಿ' ಮಾಲಾಶ್ರೀ.! ಹಾಗಂತ ಸ್ವತಃ ಕಿಚ್ಚ ಸುದೀಪ್ ಹೇಳಿದ್ದಾರೆ. ಅದು 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿರ್ದೇಶಕ ಪ್ರೇಮ್ ಹಾಗೂ ಕಿಚ್ಚ ಸುದೀಪ್ ಭಾಗವಹಿಸಿದ್ದರು.

Kiccha Sudeep had a crush on Kanasina Rani Malashree

ಕಾರ್ಯಕ್ರಮದ ಮೊದಲ ಸೆಗ್ನೆಂಟ್ (ಸತ್ಯನಾ... ಧೈರ್ಯನಾ...) ಸತ್ಯ ಹೇಳಲು ಕಿಚ್ಚ ಸುದೀಪ್ ರೆಡಿ ಆದರು. ಅಗ, ಸುದೀಪ್ ಗೆ ಎದುರಾದ ಮೊದಲ ಪ್ರಶ್ನೆ - ''ಕನ್ನಡ ಇಂಡಸ್ಟ್ರಿಯಲ್ಲಿ ನಿಮ್ಮ ಫಸ್ಟ್ ಕ್ರಶ್ ಯಾರು.?''. ಶಿವಣ್ಣ ಕೇಳಿದ ಈ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ - ''ಮಾಲಾಶ್ರೀ''.

''ಮಾಲಾಶ್ರೀ ಅವರ ಸಿನಿಮಾ ರಿಲೀಸ್ ಆದಾಗ, ಅವರನ್ನೇ ನೋಡಲು ಹೋಗುತ್ತಿದ್ದೆ'' ಎಂದೂ ಕೂಡ ಇದೇ ಕಾರ್ಯಕ್ರಮದಲ್ಲಿ ಸುದೀಪ್ ಹೇಳಿದ್ದಾರೆ.

More from Filmibeat

English summary
Kannada Actor Kiccha Sudeep revealed that he had a crush on Kannada Actress, Kanasina Rani Malashree in 'No.1 Yari with Shivanna' program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X