»   » ಪುನೀತ್ ರಾಜ್ ಕುಮಾರ್ ಹಾಡಿಗೆ ಧ್ವನಿಯಾದ ಕಿಚ್ಚ ಸುದೀಪ್

ಪುನೀತ್ ರಾಜ್ ಕುಮಾರ್ ಹಾಡಿಗೆ ಧ್ವನಿಯಾದ ಕಿಚ್ಚ ಸುದೀಪ್

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸುದೀಪ್ ಕಡೆಯಿಂದ ಒಂದು ಸ್ಪೆಷಲ್ ಉಡುಗೊರೆ ಸಿಕ್ಕಿದೆ. ಹೌದು, ಪುನೀತ್ ಅಭಿನಯದ ಚಿತ್ರದ ಹಾಡನ್ನ, ಸುದೀಪ್ ಕಾರ್ಯಕ್ರಮದ ವೇದಿಕೆಯ ಮೇಲೆ ಹಾಡಿದ್ದಾರೆ. ವಿಶೇಷ ಅಂದ್ರೆ, ಈ ಹಾಡನ್ನ ಮೂಲತಃ ಪುನೀತ್ ರಾಜ್ ಕುಮಾರ್ ಹಾಡಿದ್ದರು. ಈಗ ಅದೇ ಹಾಡು ಕಿಚ್ಚನ ಧ್ವನಿಯಲ್ಲಿ ಮೂಡಿದೆ.

ಇಂತಹ ಅಪರೂಪದ ಕ್ಷಣಕ್ಕೆ ವೇದಿಕೆಯಾಗಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ''ಸರಿಗಮಪ 13ನೇ ಸೀಸನ್'' ಕಾರ್ಯಕ್ರಮ. ಅಂದ್ಹಾಗೆ, ಸರಿಗಮಪ 13ನೇ ಸೀಸನ್ ಕಾರ್ಯಕ್ರಮದ ಮೆಗಾ ಆಡಿಷನ್ ಗೆ ಕಿಚ್ಚ ಸುದೀಪ್ ಅತಿಥಿಯಾಗಿ ಆಗಮಿಸಿದ್ದು, ಮೈಕ್ ಹಿಡಿದು ತಮ್ಮ ಕಂಚಿನ ಕಂಠದಲ್ಲಿ ಕೆಲವು ಸೂಪರ್ ಹಿಟ್ ಗೀತೆಗಳನ್ನ ಹಾಡಿದ್ದಾರೆ. ಮುಂದೆ ಓದಿ....

ಪುನೀತ್ ಹಾಡಿಗೆ ಕಿಚ್ಚನ ಧ್ವನಿ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ ಚಿತ್ರದಿಂದ ಸೂಪರ್ ಆಗಿರುವ ಹಾಡೊಂದನ್ನ ಕಿಚ್ಚ ಸುದೀಪ್ ವೇದಿಕೆಯಲ್ಲಿ ಹಾಡಿದ್ದಾರೆ. ಈ ಹಾಡು ಕಿಚ್ಚನ ಫೆವರೇಟ್ ಕೂಡ ಆಗಿದೆ ಎನ್ನುವುದು ಮತ್ತೊಂದು ವಿಶೇಷ.

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ....

1981 ರಲ್ಲಿ ಬಿಡುಗಡೆಯಾಗಿದ್ದ 'ಭಾಗ್ಯವಂತ' ಚಿತ್ರದ ''ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ....ಚಂದ್ರ ಮೇಲೆ ಬಂದ....ಹಾಡನ್ನ ಸುದೀಪ್ 'ಸರಿಗಮಪ' ವೇದಿಕೆಯಲ್ಲಿ ಹಾಡಿದರು.

'ಅಪ್ಪು' ಅಭಿನಯಿಸಿ, ಹಾಡಿದ್ದ ಹಾಡು

'ಭಾಗ್ಯವಂತ' ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರ ಮತ್ತು ಪುನೀತ್ ರಾಜ್ ಕುಮಾರ್ ಧ್ವನಿಯಲ್ಲಿ ಮೂಡಿ ಬಂದಿದ್ದ ಹಾಡು ಇದು. ಈ ಹಾಡನ್ನ ಸುದೀಪ್ ತಮ್ಮ ಧ್ವನಿಯಲ್ಲಿ ಹಾಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. (ಸುದೀಪ್ ಹಾಡಿರುವ ಪ್ರೋಮೋ ಇಲ್ಲಿದೆ)

'ಹೆಬ್ಬುಲಿ' ಚಿತ್ರದ 'ದೇವರೇ' ಹಾಡು!

ಇನ್ನೂ ಪುನೀತ್ ರಾಜ್ ಕುಮಾರ್ ಅವರ ಹಾಡಿನ ಜೊತೆ, ಸುದೀಪ್ ಅಭಿನಯದ 'ಹೆಬ್ಬುಲಿ' ಚಿತ್ರದ 'ದೇವರೇ ನೀನು ಇರೋ ವಿಳಾಸ ಬೇಕಾಗಿದೆ' ಹಾಡನ್ನ ಕೂಡ ಕಿಚ್ಚ ಹಾಡಿದ್ದಾರೆ. (ಸುದೀಪ್ ಹಾಡಿರುವ ಪ್ರೋಮೋ ಇಲ್ಲಿದೆ)

ಪ್ರಸಾರ ಯಾವಾಗ?

ಇದೇ ಭಾನುವಾರ ರಾತ್ರಿ 7.30ಕ್ಕೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಸರಿಗಮಪ' ಸೀಸನ್-13' ಮೆಗಾ ಆಡಿಷನ್ ಕಾರ್ಯಕ್ರಮದಲ್ಲಿ, ಸುದೀಪ್ ಅವರ ಕಂಚಿನ ಕಂಠದಲ್ಲಿ ಮೂಡಿಬಂದಿರುವ ಹಾಡುಗಳನ್ನ ಕೇಳಬಹುದು.

English summary
Kannada Actor Kiccha Sudeep Sing a Song in Puneeth Rajkumar's Movie From 'Baagyavantha' at SAREGAMAPA Mega Audition Z Kannada. This will be aired march 5th 7.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada