For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಗೆ ಬಂದೇ ಬಿಡ್ತು ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್'.!

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಿಗ್ ಬಜೆಟ್ ಸಿನಿಮಾ 'ಪೈಲ್ವಾನ್' ತೆರೆಗೆ ಅಪ್ಪಳಿಸಿ ಮೂರು ತಿಂಗಳು ಕಳೆದಿದೆ ಅಷ್ಟೇ. ಅಷ್ಟು ಬೇಗ ಕಿರುತೆರೆಗೆ 'ಪೈಲ್ವಾನ್' ಸಿನಿಮಾ ಬಂದೇ ಬಿಟ್ಟಿದೆ.!

  ಹೌದು, ಸೆಪ್ಟೆಂಬರ್ ತಿಂಗಳಲ್ಲಿ ಭಾರತದಾದ್ಯಂತ 'ಪೈಲ್ವಾನ್' ಹವಾ ಜೋರಾಗಿಯೇ ಇತ್ತು. ಕುಸ್ತಿ ಪಟುವಾಗಿ ಸಿನಿಮಾದಲ್ಲಿ ಸುದೀಪ್ ಅಬ್ಬರಿಸಿದ್ದರು. ಸುನೀಲ್ ಶೆಟ್ಟಿ, ಆಕಾಂಕ್ಷ ಸಿಂಗ್, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್, ಅವಿನಾಶ್ ಮುಂತಾದವರ ತಾರಾಬಳಗ ಹೊಂದಿದ್ದ 'ಪೈಲ್ವಾನ್' ಪೈರಸಿ ಕಾಟದ ನಡುವೆಯೂ ಬಾಕ್ಸ್ ಆಫೀಸ್ ಲೂಟಿ ಮಾಡಿತ್ತು.

  Pailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾPailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾ

  ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬಂದಿದ್ದ 'ಪೈಲ್ವಾನ್' ಪ್ಯಾನ್ ಇಂಡಿಯಾ ಚಿತ್ರವಾಗಿ ಗುರುತಿಸಿಕೊಂಡಿತ್ತು. ಸ್ವಪ್ನ ಕೃಷ್ಣ ನಿರ್ಮಾಣದ, ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರ ಇದೀಗ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ. ದೊಡ್ಡ ಮೊತ್ತ ಕೊಟ್ಟು ಪ್ರಸಾರ ಹಕ್ಕು ಪಡೆದಿದ್ದ ಜೀ ಕನ್ನಡ ವಾಹಿನಿಯಲ್ಲಿ 'ಪೈಲ್ವಾನ್' ಪ್ರಸಾರವಾಗಲಿದೆ.

  ನಾ ನೋಡಿದ ಪೈಲ್ವಾನ್: ತಪ್ಪು ಒಪ್ಪಿನ ನಡುವೆ 'ಒಪ್ಪಿ, ಅಪ್ಪಿಕೊಳ್ಳಬಹುದಾದ' ಚಿತ್ರನಾ ನೋಡಿದ ಪೈಲ್ವಾನ್: ತಪ್ಪು ಒಪ್ಪಿನ ನಡುವೆ 'ಒಪ್ಪಿ, ಅಪ್ಪಿಕೊಳ್ಳಬಹುದಾದ' ಚಿತ್ರ

  ಥಿಯೇಟರ್ ನಲ್ಲಿ 'ಪೈಲ್ವಾನ್' ಚಿತ್ರವನ್ನ ನೋಡದವರು, ನೋಡಿದ್ದೂ ಮತ್ತೊಮ್ಮೆ ನೋಡಬೇಕು ಎನ್ನುವವರು ಜೀ ಕನ್ನಡದಲ್ಲಿ ಪ್ರೀಮಿಯರ್ ಆಗುವವರೆಗೂ ಕಾಯಬೇಕು. ಅಂದ್ಹಾಗೆ, ಜೀ ಕನ್ನಡದಲ್ಲಿ 'ಪೈಲ್ವಾನ್' ಪ್ರಸಾರದ ದಿನಾಂಕ ಮತ್ತು ಸಮಯ ನಿಗದಿ ಆಗಿಲ್ಲ.

  English summary
  Kiccha Sudeep starrer Pailwaan premier in Zee Kannada.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X