ಫಿನಾಲೆ ಗ್ಯಾಪ್ ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಗ್ರಾಂಡ್ ಪಾರ್ಟಿ ಕೊಟ್ಟ ಕಿಚ್ಚ ಸುದೀಪ್

ಅಂತೂ ನೂರು ದಿನಗಳ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಮುಕ್ತಾಯಗೊಂಡಿದೆ. ಈ ಸೀಸನ್ ನ ವಿನ್ನರ್ ಆಗಿ ಆಧುನಿಕ ಕೃಷಿಕ ಶಶಿಕುಮಾರ್ ಹೊರಹೊಮ್ಮಿದ್ದಾರೆ. ಇನ್ನೂ ರನ್ನರ್ ಅಪ್ ಸ್ಥಾನಕ್ಕೆ ಗಾಯಕ ನವೀನ್ ಸಜ್ಜು ತೃಪ್ತಿಪಟ್ಟುಕೊಂಡಿದ್ದಾರೆ.

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಶನಿವಾರ ಮತ್ತು ಭಾನುವಾರ ನಡೆಯಿತು. ಟಾಪ್ ಫೈವ್ ಹಂತದಲ್ಲಿದ್ದವರ ಪೈಕಿ ಇಬ್ಬರನ್ನು ಶನಿವಾರ ಎಲಿಮಿನೇಟ್ ಮಾಡಲಾಯಿತು. ರಾಪಿಡ್ ರಶ್ಮಿ ಮತ್ತು ಆಂಡ್ರ್ಯೂ ಹೊರಗೆ ಬಂದಮೇಲೆ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಗ್ರ್ಯಾಂಡ್ ಪಾರ್ಟಿ ನೀಡಿದರು.

ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಗ್ರಾಂಡ್ ಪಾರ್ಟಿ ನಡೆಯಿತು. ಅದರ ಫೋಟೋಗಳು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿದೆ ನೋಡಿರಿ.

Kiccha Sudeep throws a grand party during Bigg Boss Kannada 6 Finale

ಕಿಚ್ಚ ಸುದೀಪ್ ಅರೇಂಜ್ ಮಾಡಿದ್ದ ಗ್ರಾಂಡ್ ಪಾರ್ಟಿಯಲ್ಲಿ 'ಬಿಗ್ ಬಾಸ್ ಕನ್ನಡ-4' ವಿನ್ನರ್ ಪ್ರಥಮ್, ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಸೇರಿದಂತೆ 'ಬಿಗ್ ಬಾಸ್ ಕನ್ನಡ'ದ ಮಾಜಿ ಸ್ಪರ್ಧಿಗಳು, ಹಾಲಿ ಸ್ಪರ್ಧಿಗಳು, ಕಿಚ್ಚ ಸುದೀಪ್ ಆತ್ಮೀಯ ಗೆಳೆಯರು ಮತ್ತು ಕಲರ್ಸ್ ವಾಹಿನಿಯ ತಂಡದವರು ಪಾಲ್ಗೊಂಡಿದ್ದರು.

ಪಾರ್ಟಿಯಲ್ಲಿ ಪಾಲ್ಗೊಂಡ ಅತಿಥಿಗಳಿಗೆ ಪ್ರಿಯಾ ಸುದೀಪ್ ವಿಶೇಷವಾಗಿ ಉಪಚರಿಸಿದರು. ಈ ಪಾರ್ಟಿಯಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಕಿಚ್ಚ ಸುದೀಪ್ ಗಾನಸುಧೆ ಹರಿಸಿ ಎಲ್ಲರಿಗೂ ಮನರಂಜನೆ ನೀಡಿದ್ದು ವಿಶೇಷವಾಗಿತ್ತು.

More from Filmibeat

English summary
Kiccha Sudeep throws a grand party during Bigg Boss Kannada 6 Finale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X