»   » ಸಂಗೀತ ಸಂಗ್ರಾಮದಲ್ಲಿ 'ಹೆಬ್ಬುಲಿ' ಸುದೀಪ್ ಸರಿಗಮ

ಸಂಗೀತ ಸಂಗ್ರಾಮದಲ್ಲಿ 'ಹೆಬ್ಬುಲಿ' ಸುದೀಪ್ ಸರಿಗಮ

Posted By:
Subscribe to Filmibeat Kannada

ಕರ್ನಾಟಕದ ಆರಡಿ 'ಹೆಬ್ಬುಲಿ' ಕಿಚ್ಚ ಸುದೀಪ್ ಘರ್ಜನೆಯನ್ನು ನೀವೆಲ್ಲ ಈಗಾಗಲೇ ಕಣ್ತುಂಬಿಕೊಂಡಿದ್ದೀರಿ. ಆದ್ರೆ ಅಭಿನಯ ಚಕ್ರವರ್ತಿಯ ನಟನೆ, ಡ್ಯಾನ್ಸ್ ಮತ್ತು ಹಾಡು ಹೇಳುವುದನ್ನು ಸಿನಿಮಾದಲ್ಲಿ ಮಾತ್ರವಲ್ಲದೇ ಆಗಾಗ ನೇರವಾಗಿ ಅಥವಾ ಯಾವುದಾದರೂ ಕಾರ್ಯಕ್ರಮದಲ್ಲಿ ನೋಡಬೇಕು ಎಂಬ ಆಸೆ ನಿಮಗೆಲ್ಲಾ ಇದ್ದೇ ಇರುತ್ತೆ ಅಲ್ವಾ..?[ಸುದೀಪ್ ಮನದಲ್ಲಿ ಮಡುಗಟ್ಟಿದ್ದ ನೋವು ಸಂದರ್ಶನದಲ್ಲಿ ಬಯಲು]

ನೀವೆಲ್ಲಾ ಸುದೀಪ್ ಹಾಡಿರುವ ಹಲವು ಸಿನಿಮಾ ಹಾಡುಗಳನ್ನು ಈಗಾಗಲೇ ಕೇಳಿರುತ್ತೀರಿ. ಆದರೆ ಕಾರ್ಯಕ್ರಮವೊಂದರಲ್ಲಿ ಸುದೀಪ್ ಹಾಡುವುದನ್ನು ಕೇಳಿಲ್ಲಾ ಅಂದ್ರೆ ಈಗೊಂದು ಸುವರ್ಣಾವಕಾಶ ಇದೆ.

ಜೀ ಕನ್ನಡದಲ್ಲಿ ಕಿಚ್ಚನ ಮೆರಗು

ಕಿಚ್ಚ ಸುದೀಪ್ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಸರೀಗಮಪ' ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.[ಸುದೀಪ್ ಬದುಕಿನ ಮೊದಲ ಅತ್ಯಂತ ದೊಡ್ಡ ಸಾಧನೆ ಇದು..!]

ಕಿಚ್ಚನ ಕಂಚಿನ ಕಂಠದಲ್ಲಿ ಹಾಡು

ಜೀ ಕನ್ನಡ ವಾಹಿನಿ 'ಸರೀಗಮಪ' ಕಾರ್ಯಕ್ರಮದ 13 ನೇ ಸೀಸನ್ ಗೆ ಮೊನ್ನೆಯಷ್ಟೇ ಮೆಗಾ ಆಡಿಸನ್ ನಡೆಸಿತ್ತು. ಈ ಆಡಿಸನ್ ವೇದಿಕೆಗೆ ಆಗಮಿಸಿದ್ದ ಕಿಚ್ಚ ಸುದೀಪ್ ತಮ್ಮ ಕಂಚಿನ ಕಂಠದಲ್ಲಿ ಹಾಡು ಹಾಡಿದ್ದಾರೆ.

ಯಾವುದು ಆ ಹಾಡು?

ಕಿಚ್ಚ ಸುದೀಪ್ 'ಹೆಬ್ಬುಲಿ' ಚಿತ್ರದ 'ದೇವರೇ ನೀನು ಇರೋ ವಿಳಾಸ ಬೇಕಾಗಿದೆ' ಹಾಡನ್ನು ಅನ್ ಪ್ಲಗ್ ವರ್ಸನ್ ನಲ್ಲಿ ಹಾಡಿದ್ದು, ಜೀ ಕನ್ನಡ ವಾಹಿನಿಯಲ್ಲಿ ನೋಡಬಹುದು.

ಪ್ರಸಾರ ಯಾವಾಗ?

'ಸರೀಗಮಪ' ಸೀಸನ್ 13 ವೇದಿಕೆಯನ್ನು ಮೆರಗುಗೊಳಿಸಿ, ಕಿಚ್ಚ ಸುದೀಪ್ ಕಂಚಿನ ಕಂಠದಲ್ಲಿ ಅನ್ ಪ್ಲಗ್ ಆಗಿ ಹಾಡಿರುವುದನ್ನು ನೋಡಲು ಈ ಶನಿವಾರ ಮತ್ತು ಭಾನುವಾರ ರಾತ್ರಿ 7.30 ಕ್ಕೆ ಜೀ ಕನ್ನಡ ವಾಹಿನಿ ಟ್ಯೂನ್ ಮಾಡಿ.

English summary
Kannada Actor Kiccha Sudeep Unplugged in SAREGAMAPA Mega Audition. This will be aired march 4th and 5th 7.30 pm.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada