ರಕ್ಷಿತಾ ಅವರಿಂದ ಕಲಾವಿದರಿಗೆ ಅವಮಾನ ; ಬಿಗ್ ಬಾಸ್ ಮನೆಯಲ್ಲಿ ಚಪ್ಪಲಿ ಸದ್ದು- ಕಿಚ್ಚನ ಪಂಚಾಯ್ತಿಯಲ್ಲಿ ಏನೇನಾಯ್ತು?
''ಬಿಗ್ ಬಾಸ್'' ಕಾರ್ಯಕ್ರಮ ಶುರುವಾಗುವ ಮುನ್ನ, ಈ ಬಾರಿ ಮನೆಯನ್ನು ಪ್ರವೇಶ ಮಾಡುವ ವ್ಯಕ್ತಿಗಳ್ಯಾರು..? ಎನ್ನುವ ಪ್ರಶ್ನೆ ಹಲವರಲ್ಲಿ ಇರುತ್ತೆ. ಅದೇ ರೀತಿ ಕಾರ್ಯಕ್ರಮ ಶುರುವಾದ ನಂತರ ಈ ವಾರ '' ಬಿಗ್ ಬಾಸ್'' ಮನೆಯಿಂದ ಹೊರಗಡೆ ಬರೋರು ಯಾರು..? ಎಂಬ ಪ್ರಶ್ನೆ ಕಾಡಲು ಶುರುವಾಗುತ್ತೆ. ಈ ಪ್ರಶ್ನೆಗೆ ಉತ್ತರ ಪಡೆಯಲೆಂದೇ ಹಲವರು ''ಬಿಗ್ ಬಾಸ್'' ಕಾರ್ಯಕ್ರಮವನ್ನು ವಾರಾಂತ್ಯದಲ್ಲಿ ತಪ್ಪದೇ ನೋಡುತ್ತಾರೆ.
ಅದರಲ್ಲಿಯೂ ಕನ್ನಡದಲ್ಲಿ ಕಿಚ್ಚನ ಪಂಚಾಯ್ತಿಗೆ ಇರುವ ಬೆಲೆ ಬೇರೆಯದ್ದೇ. ಕಾಲೆಳೆಯುತ್ತಾ.. ನಗುತ್ತಾ.. ನಲಿಯುತ್ತಾ.. ಅಲ್ಲಲ್ಲಿ ಕಿಚ್ಚ ಸ್ಫರ್ಧಿಗಳ ಕಿವಿಯನ್ನು ಹಿಂಡುವ ಶೈಲಿಗೆ ಹಲವರು ಅಭಿಮಾನಿಗಳಿದ್ದಾರೆ. ಇನ್ನೂ ಬೇರೆ ಭಾಷೆಯ ಕಥೆ ಗೊತ್ತಿಲ್ಲ.

ಆದರೆ.. ಕನ್ನಡದಲ್ಲಿ ವಾರಾಂತ್ಯದ ಕಥೆ ಹೇಳಲು ಸುದೀಪ್ ಬಂದರೆ ಹಲವರಿಗೆ ನಡುಕು ಶುರುವಾಗಿರುತ್ತೆ. ಕಿಚ್ಚನ ಚಪ್ಪಾಳೆ ತಮಗೆ ಸಿಗಬಹುದು ಎನ್ನುವ ಆಶಾಭಾವನೆ ಕೂಡ ಮನೆ ಮಾಡಿರುತ್ತೆ. ಈ ವಾರ ಕೂಡ ಇದರಿಂದ ಹೊರತಾಗಿರಲಿಲ್ಲ.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಇಂದು ( ನವೆಂಬರ್ 1) ಎಲ್ಲರಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್, ಧನುಷ್ ಅವರಿಗೆ ಕ್ಯಾಪ್ಟನ್ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ರಘು ಅವರಿಗೆ ಪ್ರಿನ್ಸಿಪಾಲ್ ಅನುಭವ ಹೇಗಿತ್ತು ಎಂದು ಕೇಳಿದರು. ಆ ನಂತರ ಪ್ರಿನ್ಸಿಪಾಲ್ ರಘು ಅವರ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಕಾಲೇಜ್ ದಿನಗಳಿಗೆ ಮರಳಿದ ನಿಮ್ಮ ಅನುಭವ ಹೇಗಿತ್ತು ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಮಲ್ಲಮ್ಮ ನಾವು ಶಾಲೆ-ಕಾಲೇಜ್‌ಗೆ ಹೋಗಲಿಲ್ಲ. ಆದರೆ..ಇದೆಲ್ಲ ನೋಡಿದ ಮೇಲೆ ಹೋಗಬೇಕು ಎಂದು ಅನ್ಸಿದ್ದು ಸುಳ್ಳಲ್ಲ ಎಂದು ಹೇಳಿದರು. ಶಾಲೆಗೆ ಹೋಗಲಿಲ್ಲ ಎಂದು ಕಣ್ಣೀರು ಹಾಕಿದರು.
ಆ ನಂತರ ಚಂದ್ರಪ್ರಭ ಕೂಡ ನಾನು ಕಾಲೇಜ್‌ಗೆ ಹೋಗಲಿಲ್ಲ ಆದರೆ ಹೋಗಬೇಕಿತ್ತು ಎಂಬ ಭಾವನೆ ಈಗ ಕಾಡ್ತಿದೆ ಎಂದು ಹೇಳಿದರು. ಆರೋಗ್ಯದ ಕುರಿತು ಚಂದ್ರಪ್ರಭ ಮಾತನಾಡಿದ ಮಾತುಗಳಿಗೆ ಕಿಚ್ಚ ಸಖತ್ ಕಾಲೆಳೆದರು. ಮಟನ್ ಬಿಡಬೇಕು ಅನ್ಕೊಂಡಿದೀರಾ..? ಸೊಪ್ಪು ತಿನ್ನಬೇಕು ಅಂದ್ಕೊಂಡಿದೀರಾ..? ಎಂದು ಕೇಳಿದರು.
ಇದೇ ಸಮಯದಲ್ಲಿ ಕ್ಲಾಸ್‌ರೂಮ್‌ನಲ್ಲಿ ಗಂಭೀರತೆ ಇರಲಿಲ್ಲ ಎಂದು ಸೂರಜ್ ಹೇಳಿದರೆ, ರಕ್ಷಿತಾ ನಾನು ಸ್ಟೂಡೆಂಟ್‌ಗಳ ಜೊತೆ ಕುಂತಿದ್ದೇನೆ ಎಂದು ಯಾವತ್ತೂ ಅನಿಸಿಯೇ ಇಲ್ಲ ಎಂದು ಹೇಳಿದರು. ರಿಷಾ ಮತ್ತು ರಾಶಿಕಾ ಕೂಡ ''ಬಿಬಿ ಕಾಲೇಜ್'' ಕುರಿತು ತಮ್ಮ ಅಸಮಾಧಾನ ಹೊರಹಾಕಿದರು. ಕಾವ್ಯ, ಸ್ಪಂದನಾ, ರಕ್ಷಿತಾ, ಜಾಹ್ನವಿ ಅವರಿಗೆ ರಘು ಉಪಕಾರ ಮಾಡಿದರು ಎಂದು ಹೇಳಿದರು. ಅವರ ಜೊತೆಯಲ್ಲಿಯೇ ಸಂಭಾಷಣೆ ತುಂಬಾ ಮಾಡ್ತಿದ್ದರು ಆದರೆ ಬ್ಲೂ ಟೀಮ್ ಜೊತೆ ಅವರು ಚರ್ಚೆ ಮಾಡಲೇ ಇಲ್ಲ ಎಂದು ಹೇಳಿದರು. ಇದೇ ಸಮಯದಲ್ಲಿ ಚಂದ್ರಪ್ರಭಾ ಮತ್ತು ಗಿಲ್ಲಿ ನಡುವೆ ನಡೆದ ಚರ್ಚೆಯಲ್ಲಿ ಚಂದ್ರಪ್ರಭಾ ಅವರನ್ನು ವಿನ್ನರ್ ಎಂದು ಘೋಷಿಸಿದ್ದಕ್ಕೆ ಪ್ರಿನ್ಸಿಪಾಲ್ ರಘು ಅವರ ಕಾಲನ್ನು ಕೂಡ ಎಳೆದರು ಸುದೀಪ್.

ಹೀಗೆ ನಗುತ್ತಾ, ಎಲ್ಲರನ್ನು ನಗಿಸುತ್ತಾ.. ಕಾರ್ಯಕ್ರಮದ ನಿರೂಪಣೆ ಮಾಡುತ್ತಾ ಬಂದ ಸುದೀಪ್ ಆ ನಂತರ ರಕ್ಷಿತಾ ಅವರ ವಿರುದ್ದ ಕೇಳಿ ಬಂದ ಅಪಸ್ವರ ಕುರಿತು ಪ್ರಶ್ನೆ ಮಾಡಿದರು. ಆಗ ರಾಶಿಕಾ ಟಾಸ್ಕ್ ವಿಚಾರದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದರು. ಅಶ್ವಿನಿ ಗೌಡ ಕೂಡ ರಕ್ಷಿತಾ ಅವರ ವಿರುದ್ದ ಹರಿಹಾಯ್ದರು. ಚಪ್ಪಲಿ ತೋರಿಸಿದರು ಇವೆಲ್ಲ ವರ್ತನೆ ನನಗೆ ಸರಿ ಎಂದು ಅನಿಸಲಿಲ್ಲಾ ಎಂದು ಹೇಳಿದರು. ರಿಶಾ ಕೂಡ ಇಲ್ಲದೆ ಇರೋ ಕಡೆ ಮೂಗು ತೂರಿಸುತ್ತಾರೆ ಎಂದು ಹೇಳಿದರು.
ರಕ್ಷಿತಾ ಮೂಗು ತೂರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಸೂರಜ್, ರಕ್ಷಿತಾ ಪರ ವಕಾಲತ್ತು ವಹಿಸಿದರು. ರಕ್ಷಿತಾ ಅನಗತ್ಯ ಮಾತು ಮಾತನಾಡ್ತಾರೆ ಅಂತ ನನಗೆ ಅನಿಸಲ್ಲ ಎಂದು ಹೇಳಿದರು. ಪ್ರಿನ್ಸಿಪಾಲ್ ರಘು ಕೂಡ ರಕ್ಷಿತಾ ತುಂಬಾ ಸೆನ್ಸಿಬಲ್ ಹುಡುಗಿ, ಪ್ರ್ಯಾಕ್ಟಿಕಲ್ ಹುಡುಗಿ ಎಂದು ಹೊಗಳಿದರು. ಕಾವ್ಯಾ ಅವರು ಕೂಡ ರಕ್ಷಿತಾ ಪರ ಬೆಂಬಲ ಬಾವುಟ ಹಾರಿಸಿದರು.


Click it and Unblock the Notifications











