'ಬಿಗ್ ಬಾಸ್ ಕನ್ನಡ-6': ಈ ಬಾರಿ 'ಕಿಚ್ಚ'ನ್ ಟೈಮ್ ಇರಲ್ಲ ಸ್ವಾಮಿ.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಲಾಂಚ್ ಗೆ ದಿನಗಣನೆ ಆರಂಭವಾಗಿದೆ. ಕನ್ನಡದ 'ಬಿಗ್ ಬಾಸ್' ಹೊಚ್ಚ ಹೊಸ ಸೀಸನ್ ಕಣ್ತುಂಬಿಕೊಳ್ಳಲು ಇನ್ನೂ ಐದು ದಿನ ಬಾಕಿ ಇದೆ. ಅಕ್ಟೋಬರ್ 21 ರಂದು 'ಬಿಗ್ ಬಾಸ್ ಕನ್ನಡ-6' ರಿಯಾಲಿಟಿ ಶೋ ಪ್ರಸಾರ ಆಗಲಿದೆ.
ಈ ಬಾರಿ 'ಬಿಗ್ ಬಾಸ್' ಮನೆ ಸೇರುವವರು ಯಾರು ಎಂಬ ಗುಟ್ಟನ್ನ ಕಲರ್ಸ್ ಕನ್ನಡ ವಾಹಿನಿ ಬಿಟ್ಟು ಕೊಟ್ಟಿಲ್ಲ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ತರಹೇವಾರಿ ಸಂಭಾವ್ಯ ಪಟ್ಟಿಗಳು ಹರಿದಾಡುತ್ತಿವೆ.
ಕಳೆದ ಬಾರಿಯಂತೆ ಈ ಬಾರಿಯೂ ಜನ ಸಾಮಾನ್ಯರು 'ಬಿಗ್ ಬಾಸ್' ಮನೆ ಪ್ರವೇಶಿಸಲಿದ್ದಾರೆ. ಆದ್ರೆ, ಈ ಸೀಸನ್ ನಲ್ಲಿ ಭಾರಿ ಬದಲಾವಣೆಗಳನ್ನು ಮಾಡಲಾಗಿದೆ. ಏನದು ಬದಲಾವಣೆಗಳು ಅಂತೀರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ ನಿಮಗೆ ಗೊತ್ತಾಗುತ್ತೆ...

ಹೊಸ ಮನೆ
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕಾಗಿ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹೊಸ ಮನೆ ತಲೆಯೆತ್ತಿದೆ. ಕೆಲವೇ ತಿಂಗಳುಗಳ ಹಿಂದೆಯಷ್ಟೇ, ಅಗ್ನಿ ಅವಘಡದಿಂದಾಗಿ 'ಬಿಗ್ ಬಾಸ್' ಮನೆ ಸುಟ್ಟು ಭಸ್ಮವಾಗಿತ್ತು. ಇದೀಗ ಅದೇ ಜಾಗದಲ್ಲಿ ಹೊಸ ಬಂಗಲೆ ನಿರ್ಮಾಣ ಮಾಡಲಾಗಿದೆ.

ಪೌಡರ್ ರೂಮ್
'ಬಿಗ್ ಬಾಸ್' ಮನೆಯಲ್ಲಿ ಈ ಬಾರಿ 'ಪೌಡರ್ ರೂಮ್' ಎಂಬ ಹೊಸ ಕೋಣೆಯನ್ನ ಪರಿಚಯಿಸಲಾಗಿದೆ. ಇದು ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದು, ಗಾಸಿಪ್ ಗಳ ಕೇಂದ್ರಬಿಂದು ಆಗಲಿದೆ.

ಕಿಚ್ಚನ್ ಟೈಮ್ ಇರಲ್ಲ
ಕಳೆದ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ 'ಕಿಚ್ಚನ್ ಟೈಮ್' ಕೇಂದ್ರಬಿಂದು ಆಗಿತ್ತು. ಸೆಲೆಬ್ರಿಟಿಗಳ ಜೊತೆಗೆ ಸುದೀಪ್ ಅಡುಗೆ ಮಾಡುತ್ತ ವೀಕ್ಷಕರಿಗೆ ಮನರಂಜನೆ ಕೊಡುತ್ತಿದ್ದರು. ಈ ಬಾರಿ 'ಕಿಚ್ಚನ್ ಟೈಮ್' ಕಾನ್ಸೆಪ್ಟ್ ನ ಕೈಬಿಡಲಾಗಿದೆ.

ಬೆಂಕಿ ಮತ್ತು ಐಸ್.!
ಈ ಬಾರಿ 'ಬಿಗ್ ಬಾಸ್' ಲೋಗೋದಲ್ಲಿ ಬೆಂಕಿ ಮತ್ತು ಐಸ್ ಗೆ ಪ್ರಾಮುಖ್ಯತೆ ಕೊಡಲಾಗಿದೆ. ಇಡೀ ಕಾರ್ಯಕ್ರಮದ ಥೀಮ್ ಕೂಡ ಇದೇ ಆಗಿದೆ. ಸದ್ಯ ಎಲ್ಲರ ಕುತೂಹಲ ಸ್ಪರ್ಧಿಗಳ ಮೇಲೆ. ಈ ಸೀಸನ್ ನಲ್ಲಿ ಯಾರ್ಯಾರು 'ಬಿಗ್ ಬಾಸ್' ಮನೆಗೆ ಎಂಟ್ರಿಕೊಡ್ತಾರೋ, ನೋಡಬೇಕು.


Click it and Unblock the Notifications











