BBK 10: ಈ ವಾರ ಟಿಆರ್‌ಪಿಯಲ್ಲಿ ಬಿಗ್ ಬಾಸ್ ನಂ 1.. ಸೈಡಿಗೆ ಸರಿದ ಸೀರಿಯಲ್‌ಗಳು

By ಫಿಲ್ಮಿಬೀಟ್ ಡೆಸ್ಕ್

ಬಿಗ್ ಬಾಸ್ ಕನ್ನಡ ಸೀಸನ್ 10 ಅತೀ ಹೆಚ್ಚು ಚರ್ಚೆಯಲ್ಲಿರೋ ರಿಯಾಲಿಟಿ ಶೋ. ಈ ದುಬಾರಿ ರಿಯಾಲಿಟಿ ಶೋ ಆರಂಭಕ್ಕೂ ಮುನ್ನವೇ ಸೀಸನ್ 10 ವಿಭಿನ್ನವಾಗಿರುತ್ತೆ ಎಂದು ಹೇಳಿಯೇ ಆರಂಭ ಮಾಡಲಾಗಿತ್ತು. ಅದನ್ನು ಸೀಸನ್ 10 ಪ್ರೋವ್ ಮಾಡಿದೆ. ಬಹಳ ದಿನಗಳ ಬಳಿಕ ಬಿಗ್ ಬಾಸ್ ಕನ್ನಡ ಟಿಆರ್‌ಪಿ ಲಿಸ್ಟ್‌ನಲ್ಲಿ ನಂ 1 ಸ್ಥಾನಕ್ಕೇರಿದೆ.

bigg-boss-kannada-season-10-no-1-on-trp

ಕಳೆದ ಕೆಲವು ಸೀಸನ್‌ಗಳು ವೀಕ್ಷಕರನ್ನು ಸೆಳೆದಿದ್ದರೂ, ಧಾರಾವಾಹಿಗಳನ್ನು ಹಿಂದಕ್ಕೆ ಹಾಕುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಬಿಗ್ ಬಾಸ್‌ಗೆ ವೀಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ದೊಡ್ಮನೆಯಲ್ಲಿ ಟಾಸ್ಕ್‌ಗಳಿಂದ ಹಿಡಿದು ಪ್ರತಿಯೊಂದು ಅಂಶವೂ ಹೊಸತನದಿಂದ ಕೂಡಿದೆ. ಹೀಗಾಗಿ ವೀಕ್ಷಕರನ್ನು ಸೆಳೆಯುತ್ತಿದೆ.

ಬಿಗ್ ಬಾಸ್ ಆರಂಭ ಆದ ಮೂರು ವಾರಗಳ ಬಳಿಕ ಕಿಚ್ಚ ಸುದೀಪ್ ಮನೆಯ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಮನೆಯಲ್ಲಿ ಇರುವ ಸದಸ್ಯರು ಟಾಸ್ಕ್‌ನಲ್ಲಿ ಸೀರಿಯಸ್ ಆಗಿ ಭಾಗವಹಿಸಬೇಕು ಎಂದು ಸೂಚನೆ ಕೊಟ್ಟಿದ್ದರು. ಒಬ್ಬರನ್ನೇ ಡಾಮಿನೇಟ್ ಮಾಡುವುದಕ್ಕೆ ಬಿಡಬಾರದು ಎಂದು ಹೇಳಿದ್ದರು. ಅಲ್ಲಿಂದ ಬಿಗ್ ಬಾಸ್ ಮನೆಯಲ್ಲಿ ಗಲಾಟೆ, ಕಿತ್ತಾಟ, ಕೂಗಾಟ, ಕಿರುಚಾಟ ಎಲ್ಲವೂ ಜೋರಾಗಿಯೇ ನಡೆಯುತ್ತಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಭರ್ಜರಿಯಾಗಿ ಮುನ್ನುಗುತ್ತಿದೆ ಅನ್ನುವುದಕ್ಕೆ ಈಗ ಬಂದಿರೋ ಟಿಆರ್‌ಪಿ ಲಿಸ್ಟ್ ಸಾಕ್ಷಿ. ಈ ವಾರ ಟಿಆರ್‌ಪಿಯಲ್ಲಿ ಬಿಗ್ ಬಾಸ್ ನಂ 1 ಸ್ಥಾನಕ್ಕೇರಿದೆ. ಕಿಚ್ಚ ಸುದೀಪ್ ನಿರೂಪಣೆ ಮಾಡುವ ಶನಿವಾರದ ಸಂಚಿಕೆ ಅತೀ ಹೆಚ್ಚು ಅಂದರೆ, 8.1 ಟಿವಿಆರ್ ಅನ್ನು ಪಡೆದುಕೊಂಡಿದೆ.

ಹಾಗೇ ಭಾನುವಾರ ಕೂಡ 7.6 ಟಿವಿಆರ್ ಸಿಕ್ಕಿದೆ. ಉಳಿದ ದಿನಗಳಲ್ಲಿ 7.5ನಷ್ಟು ಟಿವಿಆರ್ ಲಭಿಸಿದೆ. ಈ ಅಂಕಗಳ ಮೂಲಕ ಈ ವಾರ ಬಿಗ್ ಬಾಸ್ ಗೆದ್ದು ಬೀಗಿದೆ. ಮತ್ತೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ ಅನ್ನೋದು ಈ ಅಂಕಗಳ ಮೂಲಕ ಸಾಬೀತಾಗುತ್ತಿದೆ.

ಇಷ್ಟು ದಿನ ಕಿರುತೆರೆಯಲ್ಲಿ ಧಾರಾವಾಹಿಗಳು ಡಾಮಿನೇಟ್ ಮಾಡುತ್ತಿದ್ದವು. ಆದ್ರೀಗ ಬಿಗ್ ಬಾಸ್ ಅದನ್ನು ಹೊಡೆದು ಹಾಕಿದೆ. ಇಷ್ಟು ದಿನ ನಂಬರ್ ಒನ್ ಸ್ಥಾನದಲ್ಲಿರುತ್ತಿದ್ದ ಜೀ ಕನ್ನಡದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಈ ಧಾರಾವಾಹಿಗೆ 7.9, ಜೀ ಕನ್ನಡದ ಸರಿಗಮಪಗೆ 7.8 ಟಿಆರ್‌ಪಿ ಬಂದಿವೆ.

More from Filmibeat

English summary
Kichcha Sudeep BBK 10 became the No. 1 show in the Kannada trp list on November 9th
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X