India
  For Quick Alerts
  ALLOW NOTIFICATIONS  
  For Daily Alerts

  ಸುದೀಪ್ ಕನ್ನಡದ ಗಾಡ್ ಫಾದರ್ ಆದ ವರ್ಷವಿದು

  By ಜೀವನರಸಿಕ
  |

  ಈ ವರ್ಷ ಕೆಲವರು 'ಬಿಗ್ ಬಾಸ್' ಕಿಚ್ಚ ಸುದೀಪ್ ಗೆ ಅದೆಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಯಾಕಂದ್ರೆ ಅವಕಾಶಗಳಿಲ್ದೆ ಸ್ಯಾಂಡಲ್ ವುಡಲ್ಲಿ ರೌಂಡ್ ಹೊಡೀತಿದ್ದ ಅದೆಷ್ಟೋ ನಟ ನಟಿಯರಿಗೆ ಬಿಗ್ ಬಾಸ್ ಜೀವ ತುಂಬಿದೆ. ಹೊಸ ಜೀವನ ಕೊಟ್ಟಿದೆ. ಬಹುಶಃ ಈಟಿವಿ ಕನ್ನಡ ವಾಹಿನಿ ಬಿಗ್ ಬಾಸ್ ಶುರುವಾದಾಗ ಈ ಮಟ್ಟಿಗೆ ಯಶಸ್ವಿಯಾಗುತ್ತೆ ಅಂದ್ಕೊಂಡಿರ್ಲಿಲ್ಲ ಅನ್ಸುತ್ತೆ.

  ಆದರೆ ಬಿಗ್ ಬಾಸ್ ಭರ್ಜರಿ ಸಕ್ಸಸ್ ಪಡ್ಕೊಳ್ತು. ಅದರಲ್ಲೂ 'ವಾರದ ಕಥೆ ಕಿಚ್ಚನ ಜೊತೆ' ಎಪಿಸೋಡ್ ನಲ್ಲಂತೂ ಪ್ರೇಕ್ಷಕರು ಹುಚ್ಚೆದ್ದು ಕುಣೀತಿದ್ರು. ಕಿಚ್ಚನ ಪ್ರೆಸೆಂಟೇಷನ್ ಹಾಗೆ ಮೋಡಿ ಮಾಡಿತ್ತು. ಇನ್ನು ದಿನ ದಿನಕ್ಕೂ ಇಂಟರೆಸ್ಟಿಂಗ್ ಆಗಿ ಮೂಡಿ ಬರ್ತಿದ್ದ ಬಿಗ್ ಬಾಸ್ ವಾರದ ಕೊನೆಯಲ್ಲಿ ಬೇರೇನೇ ತಿರುವು ಪಡೆದುಕೊಳ್ತಿತ್ತು.

  ಇಷ್ಟಕ್ಕೂ ಬಿಗ್ ಬಾಸ್ ಗೆ ಎಂಟ್ರಿಕೊಟ್ಟಿದ್ದು ಕೂಡ ಅವಕಾಶಗಳಿಲ್ದೆ ಸೈಲೆಂಟಾಗಿದ್ದ ಸ್ಯಾಂಡಲ್ ವುಡ್ ನ ನಟ, ನಟಿಯರು. ಈ ನಟ, ನಟಿಯರು 'ಬಿಗ್ ಬಾಸ್ ನಲ್ಲಿ ಸಿಕ್ಕ ಭರ್ಜರಿ ಜನಪ್ರಿಯತೆಯಿಂದ ಈಗ ನಾಲ್ಕೈದು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಬಿಗ್ ಬಾಸ್ ನಿಂದ ಸಿನಿಮಾದಲ್ಲಿ ಭರ್ಜರಿ ಆಫರ್ ಪಡ್ಕೊಂಡ ತಾರೆಯರನ್ನ ನೋಡ್ತಾ ಹೋಗಿ.

  ಅರುಣ್ ಸಾಗರ್

  ಅರುಣ್ ಸಾಗರ್

  ಬಿಗ್ ಬಾಸ್ ನಲ್ಲಿ ಆರಂಭದಿಂದ ಕೊನೇವರೆಗೂ ಪ್ರೇಕ್ಷಕರನ್ನ ರಂಜಿಸಿದ ಅರುಣ್ ಸಾಗರ್. ಜೋಕರ್ ಅನ್ನೋ ಸಿನಿಮಾದಲ್ಲಿ ನಟಿಸಿ ನಿರ್ದೇಶಿಸ್ತಿದ್ದಾರೆ. ಅರುಣ್ ಸಾಗರ್ ಬಿಗ್ ಬಾಸ್ ನಿಂದ ಹೊರ ಬಂದ ಕೂಡ್ಲೆ ನಾಲ್ಕೈದು ನಿರ್ಮಾಪಕರು ಅರುಣ್ ಸಾಗರ್ ರನ್ನ ಹೀರೋ ಮಾಡೋಕೆ ಹೊರಟಿದ್ರು. ಹತ್ತಕ್ಕೂ ಹೆಚ್ಚು ಕಾಮಿಡಿ ಸಿನಿಮಾಗೆ ಆಫರ್ ಬಂದಿದ್ವಂತೆ.

  ವಿಜಯ್ ರಾಘವೇಂದ್ರ

  ವಿಜಯ್ ರಾಘವೇಂದ್ರ

  ಸತತ ಸಿನಿಮಾಗಳ ಸೋಲಿಂದ ಕಂಗೆಟ್ಟಿದ್ದ ವಿಜಯ್ ರಾಘವೇಂದ್ರಗೆ ಕೂಡ ಗೆಲುವಿನ ಹೊಸ ಉತ್ಸಾಹಕೊಟ್ಟಿದ್ದು ಬಿಗ್ ಬಾಸ್. ಬಿಗ್ ಬಾಸ್ ನಲ್ಲಿ ಮಿಂಚಿದ ವಿಜಯ್ ಗೆ ನಾಲ್ಕೈದು ಸಿನಿಮಾ ಆಫರ್ ಗಳಿವೆ. ಆದರೆ ವಿಜಯ್ ಮಾತ್ರ ತಾವೇ 'ಕಿಸ್ಮತ್' ಅನ್ನೋ ಸಿನಿಮಾದ ನಿರ್ದೇಶನಕ್ಕೆ ಕೈಹಾಕಿದ್ದಾರೆ.

  ನಿಖಿತಾ ತುಕ್ರಲ್

  ನಿಖಿತಾ ತುಕ್ರಲ್

  ನಿಖಿತಾ ತುಕ್ರಲ್ ಗೆ ಬಿಗ್ ಬಾಸ್ ಗೆ ಹೋಗೋ ಮೊದ್ಲು ಕೈಯ್ಯಲ್ಲಿ ಒಂದು ಸಿನಿಮಾ ಇರಲಿಲ್ಲ. ಆದರೆ ಈಗ ನಿಖಿತಾ ಕನ್ನಡದಲ್ಲಿ ಫುಲ್ ಬಿಜಿ.

  ಸಂಜನಾ

  ಸಂಜನಾ

  ಗಂಡ ಹೆಂಡತಿ ನಾಯಕಿ ಸಂಜನಾ ಬಿಗ್ ಬಾಸ್ ಗೆ ಎಂಟ್ರಿಕೊಡೋ ಮೊದ್ಲು ಒಂದ್ ಚಾನ್ಸ್ ಕೊಡಿ ಪ್ಲೀಸ್ ಅಂತಿದ್ದವರು. ಬಿಗ್ ಬಾಸ್ ಮನೆಯಲ್ಲಿ ಸ್ವಲ್ಪ ದಿನ ಇದ್ದು ಬಂದ್ರೂ ಈಗ ನಾಲ್ಕು ಸಿನಿಮಾಗಳಿಗೆ ನಾಯಕಿ.

  ಚಂದ್ರಿಕಾ

  ಚಂದ್ರಿಕಾ

  ವಯಸ್ಸು ಹೆಚ್ತಾ ಇದ್ರೂ ಟೀನೇಜ್ ಬ್ಯೂಟಿಗಳನ್ನೂ ಮೀರಿಸೋ ಫಿಟ್ನೆಸ್ ಉಳಿಸಿಕೊಂಡಿರೋ ಚಂದ್ರಿಕಾಗೂ ಈಗ ಫುಲ್ ಡಿಮಾಂಡ್. ಆದರೆ ತಮ್ಮದೇ ಬಿಜಿನೆಸ್ ನಲ್ಲಿ ಬಿಜಿಯಾಗಿರೋ ಚಂದ್ರಿಕಾ ಕೆಲವು ಆಫರ್ ಗಳಿಗೆ ಓಕೆ ಅಂದಿದ್ದಾರೆ.

  ಶ್ವೇತಾ ಪಂಡಿತ್

  ಶ್ವೇತಾ ಪಂಡಿತ್

  ಸುಮ್ಮನೆ ಬಿಗ್ ಬಾಸ್ ಗೆ ಎಂಟ್ರಿ ಹೊಡೆದಿದ್ದ ಶ್ವೇತಾ ಪಂಡಿತ್ ಅಲ್ಲಿ ಗಂಡ ಹೆಂಡ್ತಿ ತಿಲಕ್ ಜೊತೆ ಕುಚ್ ಕುಚ್ ಅಂತ ಸುದ್ದಿ ಮಾಡಿ ಒಂದೊಂದಾಗಿ ಆಫರ್ ಪಡ್ಕೊಳ್ತಿದ್ದಾರೆ. ಹೀಗೆ ಬಿಗ್ ಬಾಸ್ ಗೆ ಎಂಟ್ರಿಕೊಟ್ಟ ಅಷ್ಟೂ ತಾರೆಗಳು ಈಗ ಬಿಜಿಯಾಗಿದ್ದಾರೆ. ಇದಲ್ವ ಕಿಚ್ಚ ಅಂಡ್ ಟೀಂ ಮಾಡಿದ ಕಮಾಲ್.

  ಅನುಶ್ರೀ

  ಅನುಶ್ರೀ

  ಈಟಿವಿ ಕನ್ನಡದ ರಿಯಾಲಿಟಿ ಶೋ 'ಬಿಗ್ ಬಾಸ್'ನಲ್ಲಿ ತುಂಬಾ ಆಕ್ಟೀವ್ ಆಗಿ ಚಿಟಪಟ ಎಂದು ಚಿನಕುರುಳಿ ಪಟಾಕಿಯಂತೆ ಸಿಡಿಯುತ್ತಿದ್ದ ಸ್ಪರ್ಧಿ ಅನುಶ್ರೀ. 'ಬಿಗ್ ಬಾಸ್' ವಿನ್ನರ್ ಇವರೇ ಆಗುತ್ತಾರೆ ಎಂಬ ಭರವಸೆಯನ್ನು ಮೂಡಿಸಿದ್ದರು. ಈಗ ಬೆಂಕಿ ಪಟ್ಣ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

  ವಿನಾಯಕ ಜೋಶಿ

  ವಿನಾಯಕ ಜೋಶಿ

  ಇನ್ನು ವಿನಾಯಕ ಜೋಶಿ ಕೂಡ ಅಷ್ಟೇ ಅಲ್ಲಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದಾರೆ. ನಮ್ ದುನಿಯಾ ನಮ್ ಸ್ಟೈಲ್ ಹಾಗೂ ದಿಲ್ ವಾಲಾ ಚಿತ್ರಗಳಲ್ಲಿ ಮಿಂಚಿದ್ದರು. ಈಗ ಬಿಡುಗಡೆಗೆ ಸಿದ್ಧವಾಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ನಿನ್ನಿಂದಲೇ' ಚಿತ್ರದಲ್ಲೂ ಅಭಿನಯಿಸಿದ್ದಾರೆ.

  ನರ್ಸ್ ಜಯಲಕ್ಷ್ಮಿ

  ನರ್ಸ್ ಜಯಲಕ್ಷ್ಮಿ

  ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಖತ್ ಮನರಂಜನೆ ನೀಡಿದ ಸ್ಪರ್ಧಿಗಳಲ್ಲಿ ನರ್ಸ್ ಜಯಲಕ್ಷ್ಮಿ ಸಹ ಒಬ್ಬರು. ಈಗವರು ಜಾಲಿ ಬಾರು ಪೋಲಿ ಹುಡುಗರು ಚಿತ್ರದಲ್ಲಿ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮುಂದೆ ಇನ್ನಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿಕೊಳ್ಳುವ ಸಾಧ್ಯತೆಗಳಿವೆ.

  English summary
  Kichcha Sudeep becomes The Godfather in Kannada. Etv Kananda reality show Bigg Boss, which was hosted by Sudeep, seems to have given new lease of life for the participants. Some of contestants like Vijay Raghavendra, Anushree, Tilak Shekhar, Vinayak Joshi, Arun Sagar, Shwetha Pandit and Chandrika have started to get plenty of offers in Sandalwood.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X