BBK 12: ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ಕಿಚ್ಚನ ಹೇರ್‌ಸ್ಟೈಲ್ ಹೇಗಿರುತ್ತೆ? ಬರ್ತ್‌ಡೇ ದಿನವೇ ರಿವೀಲ್ ಆಗುತ್ತೆ!

ಸ್ಯಾಂಡಲ್‌ವುಡ್ ಬಾದ್‌ಷಾ ಕಿಚ್ಚ ಸುದೀಪ್ ಇಂದು (ಸೆಪ್ಟೆಂಬರ್ 2) 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿ 'ಬಿಗ್ ಬಾಸ್' ವೀಕ್ಷಕರಿಗೆ ವಿಶೇಷವಾಗಿ ಸರ್ಪ್ರೈಸ್ ನೀಡಲು ಸಿದ್ಧತೆ ನಡೆಸಿದೆ. ಈ ಕುರಿತು ಇಂದು ಸಂಜೆ ಪ್ರಮುಖ ಅಪ್‌ಡೇಟ್ ನೀಡಲಾಗುವುದು ಎಂದು ಕಲರ್ಸ್‌ ಕನ್ನಡ ಚಿಕ್ಕದೊಂದು ತುಣುಕನ್ನು ರಿಲೀಸ್ ಮಾಡಿದೆ. ಹೀಗಾಗಿ ಬರ್ತ್‌ಡೇ ಜೊತೆಗೆ ಬಿಗ್‌ ಬಾಸ್ ಅಭಿಮಾನಿಗಳಲ್ಲೂ ಸಂಭ್ರಮ ಮನೆ ಮಾಡಿದೆ.

ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಇಂದು (ಸೆಪ್ಟೆಂಬರ್ 2) ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಕಲರ್ಸ್ ಕನ್ನಡ ವಾಹಿನಿ ಸಜ್ಜಾಗಿದ್ದು, 'ಬಿಗ್ ಬಾಸ್ ಕನ್ನಡ 12' ಕಾರ್ಯಕ್ರಮದ ಕುರಿತು ಮಹತ್ವದ ಮಾಹಿತಿ ನೀಡಲಿದೆ. ಮೂಲಗಳ ಪ್ರಕಾರ, ಕಿಚ್ಚ ಸುದೀಪ್ ಹೊಸ ಕೇಶ ವಿನ್ಯಾಸದಲ್ಲಿ ಕಾಣಿಸಿಕೊಂಡಿರುವ ಪ್ರೋಮೋ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Kichcha Sudeep Birthday Special Bigg Boss Kannada 12 Big Update Announcement today

ಕಲರ್ಸ್ ಕನ್ನಡ ವಾಹಿನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರೋಮೋ ರಿಲೀಸ್ ಮಾಡಿದ್ದು, "ಬಿಗ್ ಅನೌನ್ಸ್‌ಮೆಂಟ್: ಕಿಚ್ಚನ ಹುಟ್ಟುಹಬ್ಬಕ್ಕೆ ಕಲರ್ಸ್ ಕನ್ನಡದಿಂದ ಬಿಗ್ ನ್ಯೂಸ್. ಇಂದು ಸಂಜೆ ಬಿಗ್ ಅಪ್‌ಡೇಟ್. ನಿರೀಕ್ಷಿಸಿ..." ಎಂದು ಬರೆದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಜೊತೆಗೆ, ಕಿಚ್ಚ ಸುದೀಪ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ತುಣುಕುಗಳನ್ನು ಸಹ ಶೇರ್ ಮಾಡಿದೆ. ಇಂದು 'ಬಿಗ್ ಬಾಸ್ ಕನ್ನಡ ಸೀಸನ್ 12' ಕುರಿತು ಸಂಜೆ ಅಪ್‌ಡೇಟ್ ಸಿಗುವುದು ಖಚಿತ ಎಂದು ಸೂಚಿಸುತ್ತದೆ.

ಈಗಾಗಲೇ 'ಬಿಗ್ ಬಾಸ್ ಕನ್ನಡ 12' ಕಾರ್ಯಕ್ರಮದ ಲೋಗೋ ಬಿಡುಗಡೆಯಾಗಿದ್ದು, ಅದು ಸಾಕಷ್ಟು ಸದ್ದು ಮಾಡುತ್ತಿದೆ. ಸುದೀಪ್ ಹುಟ್ಟುಹಬ್ಬದಂದು 'ಬಿಗ್ ಬಾಸ್ ಕನ್ನಡ 12' ರ ಮೊದಲ ಪ್ರೋಮೋ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಪ್ರೋಮೋ ಶೂಟಿಂಗ್ ಈಗಾಗಲೇ ಮುಗಿದಿದ್ದು, ಸುದೀಪ್ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರತಿಬಾರಿ ಹೊಸ ಸೀಸನ್ ಆರಂಭ ಆಗುವ ಮುನ್ನ ಕಿಚ್ಚನ ಬಿಗ್‌ಬಾಸ್ ಪ್ರೋಮೋಗಾಗಿಯೇ ಕಾದು ಕೂರುವ ಜನರು ಇದ್ದಾರೆ.

'ಬಿಗ್ ಬಾಸ್ ಕನ್ನಡ 12' ಕಾರ್ಯಕ್ರಮದ ಪ್ರಾರಂಭದ ದಿನಾಂಕವನ್ನು ಕಿಚ್ಚ ಸುದೀಪ್ ಅವರೇ ಈ ಹಿಂದೆ ಬಹಿರಂಗಪಡಿಸಿದ್ದಾರೆ. ಅದರಂತೆ, ಇದೇ ಸೆಪ್ಟೆಂಬರ್ 28 ರಿಂದ 'ಬಿಗ್ ಬಾಸ್ ಕನ್ನಡ ಸೀಸನ್ 12' ಪ್ರೀಮಿಯರ್ ಸಂಚಿಕೆ ಪ್ರಸಾರವಾಗಲಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇಂದು (ಸೆಪ್ಟೆಂಬರ್) ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಪ್ರತಿ ಸೀಸನ್‌ಗೂ 'ಹ್ಯಾಪಿ ಬಿಗ್ ಬಾಸ್', 'ಹೊಸ ಅಧ್ಯಾಯ'ದಂತಹ ಟ್ಯಾಗ್‌ಲೈನ್‌ಗಳನ್ನು ನೀಡಲಾಗಿತ್ತು. ಈ ಬಾರಿ 'ಬಿಗ್ ಬಾಸ್'ನ ಟ್ಯಾಗ್‌ಲೈನ್ ಏನಾಗಿರಬಹುದು ಮತ್ತು ಅದು ಇಂದು ಬಹಿರಂಗವಾಗಲಿದೆ ಎಂಬ ಕುತೂಹಲ ಮೂಡಿದೆ. ಹೀಗಾಗಿ ಸಂಜೆ ವೇಳೆಗೆ ಏನು ಅಪ್‌ಡೇಟ್ ಸಿಗಬಹುದು ಎಂಬುವುದನ್ನು ವೀಕ್ಷಕರು ಎದುರು ನೋಡುತ್ತಿದ್ದಾರೆ.

'ಬಿಗ್ ಬಾಸ್ ಕನ್ನಡ 11' ಕಾರ್ಯಕ್ರಮದಲ್ಲಿ 'ಸ್ವರ್ಗ ವರ್ಸಸ್ ನರಕ' ಎಂಬ ಕಲ್ಪನೆಯನ್ನು ಪರಿಚಯಿಸಲಾಗಿತ್ತು. ಈ ಬಾರಿ ಯಾವ ಕಾನ್ಸೆಪ್ಟ್ ಇರಲಿದೆ? ಇಂದು ನೀಡುವ ಸರ್ಪ್ರೈಸ್ ಪ್ರೋಮೋದಲ್ಲಿ ಈ ಕುರಿತು ಸುಳಿವು ಸಿಗಲಿದೆಯೇ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Kichcha Sudeep Birthday: Colors Kannada is set to announce a big update about Bigg Boss Kannada Season 12. Fans are eagerly waiting for the special reveal as the superstar continues to host the most popular reality show in Karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X