ಗನ್ ಹಿಡಿದು ಲುಕ್ ಕೊಟ್ಟ ಕಿಚ್ಚ ಸುದೀಪ್ ಪುತ್ರಿ: ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಾ ಸಾನ್ವಿ?
ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಇದೀಗ ಅಭಿಮಾನಿಗಳ ಹೊಸ ಫೇವರೆಟ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಂತೂ ಬಹಳಷ್ಟು ರೀತಿಯ ಪೋಸ್ಟ್‌ಗಳನ್ನು ಹಾಕಿ ತಮ್ಮ ಫಾಲೋವರ್ಸ್ ಅನ್ನು ರಂಜಿಸುತ್ತಿರುತ್ತಾರೆ. ಸಂಗೀತವೆಂದರೆ ಬಹಳ ಇಷ್ಟ ಇರುವ ಸಾನ್ವಿ ಸುದೀಪ್ ಅವರು ಆಗಾಗ ಹೊಸ ಹೊಸ ಹಾಡುಗಳನ್ನು ಹಾಡುತ್ತಲೇ ಇರುತ್ತಾರೆ. ಡ್ರಾಯಿಂಗ್‌ನಲ್ಲಿಯೂ ಆಸಕ್ತಿ ಇರುವ ಇವರು ಆಗಾಗ ತಮ್ಮ ಸ್ಕೆಚ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಇದೀಗ ಗನ್ ಹಿಡಿದಿರುವ ಪೋಸ್ಟ್ ಅನ್ನು ಶೇರ್ ಮಾಡಿಕೊಂಡು ಹೊಸ ರೀತಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು! ಫೋಟೋ ನೋಡಿದರೆ ಸಾನ್ವಿ ಸುದೀಪ್ ಯಾವುದೋ ಇನ್ವೆಸ್ಟಿಗೇಷನ್‌ನಲ್ಲಿ ಕೂತಿರುವಂತೆ ಪೋಸ್ಟ್ ನೀಡಿದ್ದಾರೆ. ಆದರೆ, ಈ ಫೋಟೋ ಹಿಂದಿನ ನಿಜವಾದ ಉದ್ದೇಶ ಏನು ಎಂಬುದು ಯಾರಿಗೂ ಇನ್ನು ತಿಳಿದು ಬಂದಿಲ್ಲ.

ಇತ್ತೀಚೆಗಷ್ಟೇ ತಮಿಳು ಸಂಗೀತ ನಿರ್ದೇಶಕ ತಮನ್ ಎಸ್ ಅವರನ್ನು ಭೇಟಿಯಾದ ಸಾನ್ವಿ ಸುದೀಪ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಫಿಲ್ಮ್ ಇಂಡಸ್ಟ್ರಿಗೆ ಕಾಲಿಡುವ ಪ್ಲಾನ್ ಇಲ್ವೇ ಇಲ್ಲ ಮುಂದೆ ತಮನ್ ಎಸ್ ಅವರೊಂದಿಗೆ ಕೆಲಸ ಮಾಡುವ ಆಸೆ ಇದೆ ಎಂದಷ್ಟೇ ಹೇಳಿಕೊಂಡಿದ್ದರು.
ಆದರೆ ಈಗ ಇವರು ಶೇರ್ ಮಾಡಿರುವ ಫೋಟೋಗಳನ್ನು ನೋಡಿದರೆ ಸಿನಿಮಾ ಇಂಡಸ್ಟ್ರಿಗೆ ಕಾಲಿಡುವ ಸಾಧ್ಯತೆಗಳು ಹೆಚ್ಚಿದೆ ಎನಿಸುತ್ತಿದೆ. ಹೇಗೂ ಕಿಚ್ಚ ಸುದೀಪ್ ಹಾಗೂ ಸಾನ್ವಿ ಸುದೀಪ್ ಅವರ ಅಭಿಮಾನಿಗಳು ಹಾಗೂ ಫಾಲೋವರ್ಸ್ ಬಹಳ ಹಿಂದಿನ ಕಾಲದಿಂದಲೂ ಸಾನ್ವಿ ಸುದೀಪ್ ಅವರನ್ನು ಇಂಡಸ್ಟ್ರಿಗೆ ಕರೆಯುತ್ತಿದ್ದಾರೆ.
ಸಾನ್ವಿ ಸುದೀಪ್ ಅವರು ಹಂಚಿಕೊಂಡ ಫೋಟೋಗೆ 'ಲೈಟ್ಸ್ ಕ್ಯಾಮೆರಾ ಆಕ್ಷನ್' ಎಂಬ ಕ್ಯಾಪ್ಶನ್ ಕೊಟ್ಟಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ. ಈ ಪೋಸ್ಟ್‌ಗೆ ಪ್ರೇಕ್ಷಕರು, ಫಾಲೋವರ್ಸ್ 'ಆಲ್ ದ ಬೆಸ್ಟ್' ಎಂಬಿತ್ಯಾದಿ ಶುಭ ಹಾರೈಕೆಗಳನ್ನಷ್ಟೇ ಹೇಳಿದ್ದಾರೆ. ನೆಗೆಟಿವ್ ಕಾಮೆಂಟ್‌ಗಳು ಹೆಚ್ಚೇನು ಕಂಡು ಬಂದಿಲ್ಲ. ಆದರೂ, ಈ ಫೋಟೋದಲ್ಲಿನ ಪೋಸ್ ನೋಡಿದರೆ ಸಾನ್ವಿಯವರು ಈಗಾಗಲೇ ಸಿನಿಮಾ ಒಂದರಲ್ಲಿ ಆಕ್ಟಿಂಗ್ ಮಾಡುತ್ತಿದ್ದಾರೆ ಎಂದೇ ಹೇಳಬಹುದು. ಆದರೆ ಅಭಿಮಾನಿಗಳ ಕುತೂಹಲಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ.
ಇವರು ಇಂಡಸ್ಟ್ರಿಗೆ ಬರುವುದೇ ಆದರೆ ಖಂಡಿತವಾಗಿಯೂ ಹೊಸ ಅಭಿಮಾನಿಗಳ ಬಳಗವೇ ಹುಟ್ಟಿಕೊಳ್ಳಲಿದೆ. ಆದರೆ ಸದ್ಯಕ್ಕೆ ಎಲ್ಲವನ್ನು ರಹಸ್ಯವಾಗಿ ಇಟ್ಟಿರುವ ಸಾನ್ವಿ ಸುದ್ದಿ ಅವರ ಮುಂದಿನ ಪ್ಲಾನ್ ಗಳೇನು ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











