Sanvi Sudeep: ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸಖತ್ ಸ್ಲಿಮ್.. ಸಿನಿಮಾಗೆ ಬರೋ ಪ್ಲ್ಯಾನ್ ಇದ್ಯಾ?

By ಅನಿತಾ ಬನಾರಿ

ಕಿಚ್ಚ ಸುದೀಪ್ ಅವರ ಏಕೈಕ ಸುಪುತ್ರಿ ಸಾನ್ವಿ ಸುದೀಪ್. ಇವರು ಸೋಶಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಆ್ಯಕ್ಟಿವ್. 20ರ ಹರೆಯದ ಸಾನ್ವಿ ಸುದೀಪ್ ತಂದೆಯಂತೆಯೇ ಮಲ್ಟಿ ಟ್ಯಾಲೆಂಟೆಡ್. ಆಗಾಗ ಇಂಗ್ಲಿಷ್ ಹಾಡುಗಳನ್ನು ಹಾಡುತ್ತಾ, ರೀಲ್ಸ್‌ಗೆ ಡ್ಯಾನ್ಸ್ ಮಾಡುತ್ತಾ, ತಾವು ಬಿಡಿಸುವ ಚಿತ್ರಗಳನ್ನು ಶೇರ್ ಮಾಡುತ್ತಾ, ಒಂದಷ್ಟು ಡೈಲಾಗ್‌ಗೆ ಲಿಪ್‌ ಸಿಂಕ್ ಮಾಡುತ್ತಾ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಅನ್ನು ಆ್ಯಕ್ಟಿವ್ ಆಗಿ ಇಟ್ಟಿರುತ್ತಾರೆ.

ಕಿಚ್ಚ ಸುದೀಪ್‌ಗೆ ಪುತ್ರಿ ಸಾನ್ವಿ ಅಂದರೆ ಬಲು ಪ್ರೀತಿ. ಹಾಗೇ ಮಗಳು ಕಂಡರೆ ಭಯ ಕೂಡ ಇದೆ. ಈ ಹಿಂದೆ ನೀಡಿದ ಸಂದರ್ಶದಲ್ಲಿ ತಮ್ಮ ಸಿನಿಮಾ ಚೆನ್ನಾಗಿದೆಯೋ ಇಲ್ಲವೋ ಅಂತ ನೇರವಾಗಿ ಹೇಳುವ ಏಕೈಕ ವ್ಯಕ್ತಿ ಎಂದು ಸುದೀಪ್ ಹೇಳಿಕೊಂಡಿದ್ದರು. ಅಪ್ಪು- ಮಗಳ ಸಂಬಂಧ ಹಾಗೆ ಅನ್ಯೋನ್ಯವಾಗಿದೆ.

Kichcha Sudeep daughter Sanvi shared a body transformation video

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಬಾಡಿ ಟ್ರಾನ್ಸ್‌ಫರ್ಮೇಷನ್ ಮಾಡಿಕೊಂಡಿರುವ ವಿಡಿಯೋವನ್ನು ಶೇರ್ ಮಾಡಿದ್ದು, ಕಿಚ್ಚ ಅಭಿಮಾನಿಗಳು ಅವರ ಡೆಡಿಕೇಷನ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ವಯಸ್ಸು ಇಪ್ಪತ್ತು ಆದರೂ, ಸ್ವಲ್ಪ ದಪ್ಪವೇ ಇರುವ ಸಾನ್ವಿ ಸುದೀಪ್ ಇದೀಗ ವರ್ಕೌಟ್ ಮಾಡುತ್ತಿದ್ದಾರೆ. ಈ ಬಗ್ಗೆ ಒಂದು ವಿಡಿಯೋ ಶೇರ್ ಮಾಡಿರುವ ಸಾನ್ವಿ, ಕೆಲ ದಿನಗಳ ಹಿಂದೆ ದಪ್ಪಗಿದ್ದ ಅವರ ಫೋಟೋದ ಜೊತೆಗೆ ಈಗ ತೆಳ್ಳಗಾಗಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದಕ್ಕೆ ಬಹಳಷ್ಟು ಪಾಸಿಟಿವ್ ಕಮೆಂಟ್ಸ್ ಬಂದಿದ್ದು, "ಅದು ಹೇಗೆ ತೆಳ್ಳಗಾಗುತ್ತಿದ್ದೀರಿ? ಏನೆಲ್ಲಾ ಮಾಡುತ್ತಿದ್ದೀರಿ? ನಮ್ಮಂದಿಗೂ ಶೇರ್ ಮಾಡಿ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೊಬ್ಬರು "ಅಯ್ಯೋ ಮೇಡಂ ನೀವು ಸಿನಿಮಾಗೆ ಬಂದು ಬಿಡಿ," ಎಂಬಿತ್ಯಾದಿ ಕಾಮೆಂಟ್‌ಗಳ ಮೂಲಕ ಅಭಿಮಾನಿಗಳು ತಮ್ಮ ಪ್ರೀತಿ ವಿಶ್ವಾಸವನ್ನು ಸಾನ್ವಿ ಸುದೀಪ್ ಅವರಿಗೆ ತೋರಿಸುತ್ತಿದ್ದಾರೆ.

ಇವರು ಈ ರೀತಿ ಬಾಡಿ ಟ್ರಾನ್ಸ್‌ಫರ್ಮೆಷನ್ ಮಾಡಿಕೊಳ್ಳುತ್ತಿರುವುದು ವರ್ಕೌಟ್ ಮಾಡಿ, ತೆಳ್ಳಗಾಗುತ್ತಿರುವುದು ಸಿನಿ ಇಂಡಸ್ಟ್ರಿಗೆ ಬರುವುದಕ್ಕೆ ಎಂದು ಬಹಳಷ್ಟು ಜನ ಊಹೆ ಕೂಡ ಮಾಡಿದ್ದಾರೆ. ಎಷ್ಟೋ ಅಭಿಮಾನಿಗಳು ಸಾನ್ವಿಯ ಹಲವು ಪೋಸ್ಟ್‌ಗಳಿಗೆ 'ಸಿನಿಮಾಗೆ ಬನ್ನಿ ಮೇಡಮ್' ಎಂದು ಕಾಮೆಂಟ್ ಮಾಡುತ್ತಿರುತ್ತಾರೆ. ಆದರೆ, ಸದ್ಯಕ್ಕೆ ಇನ್ನೂ ಓದುತ್ತಿರುವ ಸಾನ್ವಿ ಸುದೀಪ್ ಈ ಬಗ್ಗೆ ಯಾವುದೇ ರೀತಿಯ ಸಂದೇಶವನ್ನು ಕೊಟ್ಟಿಲ್ಲ.

ಅಸಲಿಗೆ ಸಾನ್ವಿ ಸುದೀಪ್‌ಗೆ ಎಷ್ಟೋ ಬಾರಿ ಕೆಟ್ಟ ಕಾಮೆಂಟ್‌ಗಳು ಕೂಡ ಬಂದಿದ್ದಿದೆ. ಅವರು ಹಾಡಿದ ಇಂಗ್ಲಿಷ್ ಹಾಡುಗಳಿಗೆ ಜನರು ಕನ್ನಡ ಹಾಡಿ ಎಂದು ಬೈದಿದ್ದುಂಟು. ಬಾಡಿ ಶೇಮಿಂಗ್‌ನ ಕಾಮೆಂಟ್‌ಗಳು ಈ ಮೊದಲು ಹಲವು ಪೋಸ್ಟ್‌ಗಳಿಗೆ ಬಂದಿದ್ದಿದೆ. ಆದರೆ, ಅದು ಯಾವುದಕ್ಕೂ ಹೆಚ್ಚಿನ ಗಮನ ಕೊಡದಂತೆ ಇರುವ ಸಾನ್ವಿ ಸುದೀಪ್ ಇದೀಗ ತೆಳ್ಳಗಾಗುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿ ಪಾಸಿಟಿವ್ ಕಾಮೆಂಟ್‌ಗಳನ್ನು ಹೆಚ್ಚು ಪಡೆದಿದ್ದಾರೆ.

ಸಾನ್ವಿ ಸುದೀಪ್ ಮುಂದಿನ ದಿನಗಳಲ್ಲಿ ತಂದೆಯಂತೆ ಸಿನಿಮಾ ಇಂಡಸ್ಟ್ರಿಗೆ ಬರುತ್ತಾರಾ, ಸಿನಿಮಾದಲ್ಲಿ ನಟಿಸುತ್ತಾರಾ ಎಂಬ ಪ್ರಶ್ನೆ ಕಿಚ್ಚನ ಅಭಿಮಾನಿಗಳಲ್ಲಿ ಇದ್ದೇ ಇದೆ. ಆದರೆ, ಸಾನ್ವಿ ಸುದೀಪ್ ಆಯ್ಕೆ ಏನು ಅನ್ನೋದು ಸದ್ಯಕ್ಕೆ ಕುತೂಹಲ.

More from Filmibeat

English summary
Kichcha Sudeep's daughter, Sanvi, shared a new video of her body transformation:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X