ಅಮೃತಾ ಅಯ್ಯಂಗಾರ್ ಹುಟ್ಟುಹಬ್ಬಕ್ಕೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಶುಭ ಕೋರಿದ್ದು ಹೇಗೆ?
ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಸ್ಟಾರ್ ಮಕ್ಕಳಲ್ಲಿ ಒಬ್ಬರು. ಸುದ್ದಿ ಮಾಧ್ಯಮಗಳೊಂದಿಗಿನ ಸಂಪರ್ಕದಿಂದ ಸ್ವಲ್ಪ ದೂರ ಉಳಿದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಇವರು ಅಭಿಮಾನಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ.
ಅಲ್ಲದೆ ಇವರ ಇನ್ನೊಂದು ವಿಶೇಷತೆ ಎಂದರೆ ಕನ್ನಡ ಚಿತ್ರರಂಗದ ಬಹುತೇಕ ನಟಿಯರ ಸಖ್ಯ ಇವರಿಗಿದೆ. ಹೊಸಬರಾದರೂ, ಹಳಬರಾದರೂ ಸಾನ್ವಿ ಸುದೀಪ್ ಆದರದಿಂದ ಎಲ್ಲರನ್ನೂ ಪ್ರೀತಿಸುತ್ತಾರೆ. ಅಷ್ಟಕ್ಕೂ ಈಗ ಇವರ ಈ ವಿಷಯ ಮುನ್ನಲೆಗೆ ಬರಲು ಕಾರಣ ಇವರು ಕನ್ನಡದ ಖ್ಯಾತ ನಟಿ ಅಮೃತಾ ಅವರಿಗೆ ಮಾಡಿರುವ ಬರ್ತ್ ಡೇ ವಿಶ್.

'ಲವ್ ಮಾಕ್ಟೈಲ್' ಖ್ಯಾತಿಯ ನಟಿ ಅಮೃತಾ ಅಯ್ಯಂಗಾರ್ ತಮ್ಮ 27ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು ಹಲವರು ನಟಿಗೆ ಶುಭಕೋರಿದ್ದಾರೆ. ಅಂದ ಹಾಗೆ ನಟಿ ಅಮೃತಾ ಮತ್ತು ಸಾನ್ವಿ ಸುದೀಪ್ ಅವರ ಗೆಳೆತನ ಎಲ್ಲರಿಗೂ ತಿಳಿದೇ ಇದೆ. ಇನ್‌ಸ್ಟಾಗ್ರಾಂನಲ್ಲಿ ಇವರು ಫೋಟೋಗಳನ್ನು ಜೊತೆಯಾಗಿ ಶೇರ್ ಮಾಡುವುದರೊಂದಿಗೆ ಕಾಮೆಂಟ್ ಮಾಡುತ್ತಲೂ ಇರುತ್ತಾರೆ.
ಸಾನ್ವಿ ಸುದೀಪ್ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಅಲ್ಲಿಂದಲೇ ಅಮೃತಾ ಹುಟ್ಟು ಹಬ್ಬಕ್ಕೆ ಹ್ಯಾಪಿ ಬರ್ತಡೇ ಬ್ಯೂಟಿ ಎಂದು ವಿಶ್ ಮಾಡಿರುವ ಸಾನ್ವಿ, ''ಇದು ನಿಮ್ಮ ಜೀವನದ ಬೆಸ್ಟ್ ಬರ್ತಡೇ ಆಗಿರಲಿ. ನಾನು ನಿಮ್ಮನ್ನು ಸ್ಕ್ರೀನ್ ಮೇಲೆ ನೋಡಲು ಕಾಯುತ್ತಿದ್ದೇನೆ. ಲವ್ ಯೂ ಆಮ್ಸ್'' ಎಂದಿದ್ದಾರೆ. ಜೊತೆಗೆ ಅವರ ಪೋಸ್ಟ್‌ನಲ್ಲಿ ಅಮೃತಾ ಜೊತೆಗಿರುವ ಆತ್ಮೀಯತೆ ಎದ್ದು ಕಾಣುತ್ತಿದೆ. ಇಬ್ಬರೂ ಪುಷ್ಪಾ ಸ್ಟೈಲ್‌ನಲ್ಲಿ ಪಾರ್ಟಿಯೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಎಲ್ಲರಿಗೂ ಅತ್ಯಂತ ಆತ್ಮೀಯವಾಗಿ ಶುಭಾಶಯಗಳನ್ನು ತಿಳಿಸುವ ಸಾನ್ವಿ, ತಮ್ಮ ತಾಯಿ ಪ್ರಿಯಾ ಸುದೀಪ್ ಅವರ ಹುಟ್ಟುಹಬ್ಬದಂದು ''ತಮ್ಮ ಜೀವನದ ಬೆಸ್ಟ್ ಗೆಳತಿ'' ಎಂದು ತಾಯಿಯ ಪೋಟೋವನ್ನು ಹಂಚಿಕೊಂಡಿದ್ದರು. ಸದಾ ಎಲ್ಲರನ್ನು ಆತ್ಮೀಯವಾಗಿ ಕಾಣುವ ಈಕೆಗೆ ಹಿರಿಯ ನಟಿ ಶೃತಿ ಅವರ ಪುತ್ರಿ ಗೌರಿಯೂ ಆತ್ಮೀಯ ಸ್ನೇಹಿತೆ. ಚಿತ್ರ ನಟ ನಟಿಯರ ಮಕ್ಕಳೆಲ್ಲಾ ಸ್ಟಾರ್ ಕಿಡ್ ಎಂಬ ಲೇಬಲನ್ನು ಪ್ರಯೋಗಿಸುವ ಈ ಕಾಲದಲ್ಲಿ ಸಾನ್ವಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅಲ್ಲದೆ ಕನ್ನಡದ ಹೊಸ ಸಿನೆಮಾ, ಹೊಸ ಹಾಡುಗಳು,ಟ್ರೇಲರ್ ಗಳು ಎನ್ನುತ್ತಾ ಎಲ್ಲದಕ್ಕೂ ಪ್ರೋತ್ಸಾಹ ನೀಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಹಾರೈಸುತ್ತಾರೆ.
ಅಲ್ಲದೆ ಸಾನ್ವಿ ಬರ್ತಡೇಯಲ್ಲೂ ಚಿತ್ರರಂಗದ ಹೆಚ್ಚಿನ ಗಣ್ಯರು ಕಾಣಸಿಗುತ್ತಾರೆ. ಕಳೆದ ಮೇ ತಿಂಗಳಿನಲ್ಲಿ ತಮ್ಮ 20ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇವರ ಕತ್ತಿನಲ್ಲಿದ್ದ ಪಿಕೂ ಎಂಬ ಟ್ಯಾಟೂ ಸಖತ್ ವೈರಲ್ ಆಗಿತ್ತು. ಅಂದ ಹಾಗೆ ಪಿಕೂ ಎನ್ನುವುದು ಪ್ರಿಯಾ ಸುದೀಪ್ ಅವರ ನಿಕ್ ನೇಮ್.
ಸದ್ಯ ಕನ್ನಡ ಚಿತ್ರರಂಗದ ಬ್ಯುಸಿ ನಟಿಯರಲ್ಲಿ ಒಬ್ಬರಾಗಿರುವ ಅಮೃತಾ ಝೀಬ್ರಾ ಹಾಗೂ ಇನ್ನೂ ಹೆಸರಿಡದ ಸಿನಿಮಾವೊಂದಲ್ಲಿ ನಟಿಸುತ್ತಿದ್ದಾರೆ. ಡಾಲಿ ಧನಂಜಯ್ ಜೊತೆಗೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟಿ ಅವರ ಹೊಯ್ಸಳ ಸಿನೆಮಾದಲ್ಲೂ ಪ್ರಮುಖ ಪಾತ್ರದಲ್ಲಿದ್ದಾರೆ.


Click it and Unblock the Notifications











