ಸಿನಿಮಾಗಳಿಗಿಂತ ಕಿರುತೆರೆಯಲ್ಲಿಯೇ ಹೆಚ್ಚು ಮಿಂಚುತ್ತಿರೋ ಕಿಚ್ಚ ಸುದೀಪ್; ವೀಕ್ಷಕರು ಫಿದಾ
ಕನ್ನಡದ ಸೂಪರ್ ಹಿಟ್ ನಟ ಕಿಚ್ಚ ಸುದೀಪ್ ಯಾರಿಗೆ ಗೊತ್ತಿಲ್ಲ ಹೇಳಿ? ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್ ಇವರು. 'ಬಾಹುಬಲಿ', 'ಈಗ' ಇತ್ಯಾದಿ ಸಿನಿಮಾಗಳಲ್ಲಿ ನಟಿಸಿ ಬಹುಭಾಷಾ ನಟನಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವಾರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಇರುವ ಈ ನಟ ಹಲವು ಯಶಸ್ವಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಿರುವುದಿಲ್ಲದೆ, ಬಹುದೊಡ್ಡ ಸ್ಟಾರ್ ಎಂದು ಎನಿಸಿಕೊಂಡಿದ್ದಾರೆ.
ಬಹಳ ದೊಡ್ಡ ಫ್ಯಾನ್ ಬೇಸ್ ಇರುವ ನಟ ಸುದೀಪ್ ಕಿರುತೆರೆಯಲ್ಲೂ ಮಿಂಚಿದ್ದಾರೆ. ಸುಮಾರು ಈಗ ಹತ್ತು ವರ್ಷಗಳಿಂದ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.

ಹೌದು, ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ 2013ರಲ್ಲಿ ಮೊದಲ ಸೀಸನ್ ಕಂಡಿತ್ತು. ಅಂದಿನಿಂದ ಇಂದಿನವರೆಗೂ ಒಟ್ಟು 10 ಸೀಸನ್‌ಗಳಾಗಿದ್ದು, ಹತ್ತು ಸೀಸನ್‌ಗೆ ನಟ ಸುದೀಪ ನಿರೂಪಕರಾಗಿದ್ದು ಗೊತ್ತೇ ಇದೆ. ಸಿನಿಮಾಗಳ ನಂತರ ನಟ ಸುದೀಪ್‌ಗೆ ಬಹಳಷ್ಟು ಯಶಸ್ಸು ಹಾಗೂ ಹೆಸರು ಕೊಟ್ಟಿದ್ದು ಬಿಗ್ ಬಾಸ್ ಎಂದರೆ ತಪ್ಪಾಗಲ್ಲ. ಅಂತೆಯೇ ಬಿಗ್ ಬಾಸ್ ಎಂಬ ರಿಯಾಲಿಟಿ ಶೋನ ಘನತೆಯನ್ನು ಹೆಚ್ಚಿಸಿದ್ದು ನಟ ಸುದೀಪ್ ಎಂದರೆ ಅತಿಶಯೋಕ್ತಿಯೇನಲ್ಲ.
ಅಂದ ಹಾಗೆ ಪ್ರತಿ ಬಾರಿ ಬಿಗ್ ಬಾಸ್ ಶುರುವಾದಾಗಲೂ ಪ್ರೇಕ್ಷಕರು ವಾರಗಳ ಐದು ದಿನಕ್ಕೆ ಕಾದಂತೆ ವಾರದ ಕೊನೆ ಎರಡು ದಿನಕ್ಕೆ ಹೆಚ್ಚು ಕುತೂಹಲದಿಂದ ಕಾಯುತ್ತಾರೆ. ಕಾರಣ ನಟ ಸುದೀಪ್ ಅವರ ನಿರೂಪಣೆ. ನಿರೂಪಣೆ ಅಷ್ಟೇ ಅಲ್ಲದೆ ಬಿಗ್ ಮನೆಯ ಸರಿ ತಪ್ಪು ಆಗುಹೋಗುಗಳನ್ನು ಬ್ಯಾಲೆನ್ಸ್ ಮಾಡುವ ಬಹುದೊಡ್ಡ ಜವಾಬ್ದಾರಿಯನ್ನು ಇಷ್ಟು ವರ್ಷಗಳ ಕಾಲ ನಟ ಸುದೀಪ್ ಅವರು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ.

ಪ್ರತಿ ವಾರ ಸುದೀಪ್‌ಗೆ ಕಾಯುವ ಪ್ರೇಕ್ಷಕರು ಅವರ ಕಾಸ್ಟ್ಯೂಮ್ ಬಗ್ಗೆಯೂ ಬಹಳ ಕೌತುಕವನ್ನು ತೋರಿಸುತ್ತಾರೆ. ಹೌದು ಪ್ರತಿ ವಾರದ ಕೊನೆಯಲ್ಲಿ ಸುದೀಪ ಅವರು ವೇದಿಕೆಗೆ ಬರುವುವಾಗ ಅವರು ಹಾಕಿಕೊಳ್ಳುವ ಕಾಸ್ಟ್ಯೂಮ್ ಬಹಳ ಹೈಲೈಟ್ ಆಗುತ್ತದೆ. ಬಹಳ ವಿಭಿನ್ನ ವಿಶೇಷ ವಿನ್ಯಾಸಗಳಿಂದ ಕೂಡಿರುವ ಈ ಕಾಸ್ಟ್ಯೂಮ್ ಬಗ್ಗೆ ಹಲವಾರು ಕಾಂಪ್ಲಿಮೆಂಟ್‌ಗಳು ಸಿಗುತ್ತಿರುತ್ತವೆ. ಅಷ್ಟೇ ಯಾಕೆ ಎಷ್ಟೋ ಸ್ಪರ್ಧಿಗಳು ಸುದೀಪ್ ಕಾಸ್ಟ್ಯೂಮ್ ಅನ್ನು ಮೆಚ್ಚಿ ಕೇಳಿ ಪಡೆದುಕೊಂಡು ಹೋದ ಸನ್ನಿವೇಶಗಳು ಇವೆ.
ಅದರ ಜೊತೆ ಅಡುಗೆಯಲ್ಲಿ ಒಂದು ಕೈ ಮೇಲಿರುವ ನಟ ಸುದೀಪ್ ಪ್ರತಿ ಸೀಸನ್ ಸ್ಪರ್ದಿಗಳಿಗೆ ಒಂದು ದಿನ ತಮ್ಮ ಕೈಯಾರೆ ಅಡುಗೆ ಮಾಡಿ ಕಳಿಸಿಕೊಡುತ್ತಾರೆ. ಶೂಟಿಂಗ್ ಸಮಯದಲ್ಲಿ ಸುದೀಪ್ ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಬಿಗ್ ಬಾಸ್ ತಂಡ ಆ ವೇದಿಕೆಯ ಸಮೀಪದಲ್ಲಿ ಒಂದು ಮನೆಯನ್ನು ನೀಡುತ್ತಾರಂತೆ.
ಯಾವುದೇ ಸಿನಿಮಾ ಶೂಟಿಂಗ್ ಅಥವಾ ಬೇರೆ ಯಾವುದೇ ಬ್ಯುಸಿ ಶೆಡ್ಯೂಲ್ಲಿದ್ದರೂ ಸಹ ಬಿಗ್ ಬಾಸ್ ಗಾಗಿ ಬಿಡು ಮಾಡಿಕೊಂಡು ಬಂದು ತಮ್ಮ ವೃತ್ತಿ ನಿಷ್ಠೆಯನ್ನು ತೋರಿಸಿಕೊಂಡು ಬಂದಿದ್ದಾರೆ. ಇತ್ತೀಚೆಗಷ್ಟೇ ಕೊನೆಗೊಂಡ ಬಿಗ್ ಬಾಸ್ ಸೀಸನ್ 10ರ ಸಮಯದಲ್ಲಿ ನಟ ಸುದೀಪ ಅವರು ಚೆನ್ನೈನಲ್ಲಿ ಶೂಟಿಂಗ್ ನಲ್ಲಿ ಇದ್ದರೂ ಸಹ ಪ್ರತಿ ವಾರದ ಕೊನೆಯಲ್ಲಿ ಬಿಗ್ ಬಾಸ್ ಗೋಸ್ಕರ ಚೆನ್ನೈನಿಂದ ಬೆಂಗಳೂರಿಗೆ ಬಂದು ಹೋಗುತ್ತಿದ್ದರು ಎಂಬ ವಿಚಾರ ಗೊತ್ತಾಗಿದೆ.
ಇನ್ನು ಸುದೀಪ್ ಅವರ ಈ ವೃತ್ತಿಪರತೆಯನ್ನು ಮೆಚ್ಚಿಕೊಂಡಿರುವ ಬಿಗ್ ಬಾಸ್ ತಂಡ "ಸುದೀಪ್ ಅವರು ಇಲ್ಲದ ಈ ಕಾರ್ಯಕ್ರಮವನ್ನು ಊಹಿಸಲು ಸಾಧ್ಯವಿಲ್ಲ. ಅವರು ನಮಗೆ ಇಷ್ಟು ವರ್ಷಗಳ ಕಾಲ ಬೆನ್ನೆಲುಬಾಗಿ ನಿಂತಿದ್ದಾರೆ. ರಿಯಾಲಿಟಿ ಶೋ ಗೆ ಕಿಂಚಿತ್ತು ಸಮಸ್ಯೆ ಆಗಿಲ್ಲ ಬದಲಾಗಿ ಇದರ ಘನತೆ ಹೆಚ್ಚಿದೆ" ಎಂದು ಬಿಗ್ ಬಾಸ್ ತಂಡ ಹಾಡಿ ಹೊಗಳಿದೆ.


Click it and Unblock the Notifications











