ಕಿಚ್ಚ ಸುದೀಪ್ ರನ್ನು ಕಿಚಾಯಿಸಿದ ಸುವರ್ಣ ಗರ್ಲ್ಸ್
ಸಂದರ್ಶನದಲ್ಲಿ ಮೂಡಿ ಬಂದ ಪ್ರಶ್ನೆಗಳಗೆ ಖಡಕ್ ಆಗಿ ಉತ್ತರಿಸುತ್ತಿದ್ದ ಕಿಚ್ಚ ಸುದೀಪ್, ನಿರೂಪಕಿಯರು ತಮಗೆ ಕೊಟ್ಟ ಗಿಫ್ಟ್ (ದಾಳಿಂಬೆ ಹಣ್ಣು, ಚಿಕ್ಕಿ ಮುಂತಾದವುಗಳು) ಗಳನ್ನು ಟೇಸ್ಟ್ ಮಾಡುತ್ತಾ ಲೀಲಾಜಾಲವಾಗಿ ಉತ್ತರಿಸುತ್ತಿದ್ದು ವಿಶೇಷ ಎನಿಸಿತು. ಕೆಲವೊಮ್ಮೆ ಪ್ರಶ್ನೆಗಳಿಗೆ ತಿರುಗಿ ಪ್ರಶ್ನೆ ಮೂಲಕವೇ ಅಟ್ಯಾಕ್ ಮಾಡುತ್ತಿದ್ದ ಸುದೀಪ್, ಸಾಕಷ್ಟು ಜಾಣತನ ಮೆರೆದರು. ಗಾಸಿಪ್ ಗಳಿಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ಗುಟ್ಟು ಬಿಚ್ಚಿಟ್ಟರು.
ಬಚ್ಚನ್ ಸಿನಿಮಾ ತಮ್ಮ 50 ನೇ ಚಿತ್ರವೆಂದ ಸುದೀಪ್ ಹುಚ್ಚ ಮೊದಲ ಸಕ್ಸಸ್ ಸಿನಿಮಾ ಎಂಬುದನ್ನೂ ಈ ವೇಳೆ ಬಹಿರಂಗಗೊಳಿಸಿದರು. ತಮಗೆ ರೀಮೇಕ್ ಸಿನಿಮಾದಿಂದಲೇ ಯಶಸ್ಸು ಸಿಕ್ಕಿದ್ದನ್ನು ನೆನಪಿಸಿಕೊಂಡ ಕಿಚ್ಚ, ಅವರು ನಟಿಸಿದ 50 ಚಿತ್ರಗಳಲ್ಲಿ ಕೇವಲ 9 ಮಾತ್ರ ರೀಮೇಕ್ ಎಂಬಂತಹ ಅಪರೂಪದ ಮಾಹಿತಿಯನ್ನು ನಿರೂಪಕಿಯರೊಂದಿಗೆ ಹಂಚಿಕೊಂಡರು. ಆದರೂ ತಮ್ಮನ್ನು ರೀಮೇಕ್ ಚಿತ್ರಗಳನ್ನು ಮಾಡುವವ ಎಂಬ ಹಣೆಪಟ್ಟು ಹಚ್ಚುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು.
ಹೊಸ ಸ್ಟುಡಿಯೋ ಉದ್ಘಾಟನೆ ನಿಮಿತ್ತ ಇಂದು ಇಡೀ ದಿನ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ. ಕನ್ನಡದ ಬಹಳಷ್ಟು ತಾರೆಗಳು ಇಂದು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ನಟಿ ಭಾವನಾ (ಸುಹಾಸಿನಿ ಕಾರ್ಯಕ್ರಮದಲ್ಲಿ ) ಹಾಗೂ ಕಿಚ್ಚ ಸುದೀಪ್ ಭಾಗವಹಿಸಿದ್ದು ಇನ್ಮುಂದೆ ಶಿವರಾಜ್ ಕುಮಾರ್, ತಾರಾ ಹಾಗೂ ಉಪೇಂದ್ರ ಭಾಗವಹಿಸಲಿದ್ದಾರೆ. ಎಂದಿನ ಕಾರ್ಯಕ್ರಮಗಳೂ ಇಂದು ಹೊಸ ರೂಪುರೇಷೆಯೊಂದಿಗೆ ಪ್ರಸಾರವಾಗುತ್ತಿರುವುದು ವಿಶೇಷ. (ಒನ್ ಇಂಡಿಯಾ ಕನ್ನಡ)


Click it and Unblock the Notifications












