»   » ಸುದೀಪ್ ವಿತ್ ಸುವರ್ಣ ಗರ್ಲ್ಸ್; ಕಿಚ್ಚ ಸಂದರ್ಶನ

ಸುದೀಪ್ ವಿತ್ ಸುವರ್ಣ ಗರ್ಲ್ಸ್; ಕಿಚ್ಚ ಸಂದರ್ಶನ

Posted By:
Subscribe to Filmibeat Kannada
<ul id="pagination-digg"><li class="next"><a href="/tv/kichcha-sudeep-suvarna-news-channel-new-studio-launch-067423.html">Next »</a></li></ul>
'ಸುದೀಪ್ ವಿತ್ ಸುವರ್ಣ ಗರ್ಲ್ಸ್' ಎಂಬ ವಿನೂತನ ಕಿಚ್ಚ ಸುದೀಪ್ ಸಂದರ್ಶನವು ಸುವರ್ಣ ಸುದ್ದಿ ವಾಹಿನಿ 24x7 ನಲ್ಲಿ ಇಂದು (19 ಆಗಸ್ಟ್ 2012) ಸಾಯಂಕಾಲ 4-00 ಗಂಟೆಯಿಂದ 6-30 ವರೆಗೆ ಪ್ರಸಾರವಾಯಿತು. ಅಭಿನಯ ಚಕ್ರವರ್ತಿ ಸುದೀಪ್ ಅವರ ವಿಶೇಷ ಸಂದರ್ಶನ ಇಂದು ಉದ್ಘಾಟನೆಯಾದ ಸುವರ್ಣ ನ್ಯೂಸ್ 24x7 ಸುದ್ದಿ ವಾಹಿನಿಯ ಹೊಸ ಸ್ಟುಡಿಯೋದಲ್ಲಿ ನಡೆದಿದ್ದು ವಿಶೇಷಗಳಲ್ಲಿ ವಿಶೇಷ ಎನಿಸಿತು.

ಶಿವಾನಂದ ಸರ್ಕಲ್ ಬಳಿಯ ಹೊಸ ಸ್ಟುಡಿಯೋಗೆ ಬಂದಿರುವ ಸುದ್ದಿವಾಹಿನಿಯ ಬಳಗ ಇಂದು ಹೊಸ ರೀತಿಯ ಕಾರ್ಯಕ್ರಮ ನೀಡುವಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಹೊಸ ಸ್ಟುಡಿಯೋವನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸುದ್ದಿ ಮುಖ್ಯಾಂಶಗಳನ್ನು ಓದುವ ಮೂಲಕ ಉದ್ಘಾಟಿಸಿದರು. ನಂತರ ಸಾಕಷ್ಟು ವಿನೂತನ ಕಾರ್ಯಕ್ರಮ ನೀಡುವಲ್ಲಿ ವಾಹಿನಿ ನಿರತವಾಗಿದೆ. ಅದರಲ್ಲೊಂದು ಈ 'ಸುದೀಪ್ ವಿತ್ ಸುವರ್ಣ ಗರ್ಲ್ಸ್'.

ಈ ಕಾರ್ಯಕ್ರಮದಲ್ಲಿ ಸುದೀಪ್ ಬಗೆಗಿನ ಸಾಕಷ್ಟು ವಿಷಯಗಳು ಚರ್ಚೆಗೆ ಬಂದವು. ಒಬ್ಬೊಬ್ಬ ನಿರೂಪಕಿಯರೂ ಹಲವು ಪ್ರಶ್ನೆಗಳ ಮೂಲಕ ಕಿಚ್ಚ ಸುದೀಪ್ ರನ್ನು ಕಾಲೆಳೆದರು, ಕಿಚಾಯಿಸಿದರು. ಅಷ್ಟೇ ಅಲ್ಲ, ಅವರ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಮಜುಗರ ಪಡಿಸಲು ಪ್ರಯತ್ನಪಟ್ಟರು. ಕಡ್ಡಿ ತುಂಡಾದಂತೆ ಮಾತನಾಡುವ ಕಿಚ್ಚನೆದುರು ಅವರ ಯತ್ನಗಳಾವವೂ ಫಲಿಸಲಿಲ್ಲವೆಂಬುದು ಬೇರೆ ಮಾತು. 

ಸುದೀಪ್ ಚಿಕ್ಕಂದಿನಲ್ಲಿ ಹೇಗಿದ್ದರು? ಹೇಗೆ ನಡೆದುಕೊಳ್ಳುತ್ತಿದ್ದರು? ಈಗಿನಂತೆ ಕೋಪಿಷ್ಠರಾಗಿದ್ದರೇ? ಸುದೀಪ್ ಅವರಿಗೆ 'ಲವ್' ಯಾವಾಗ ಆಯ್ತು? ಮುಂತಾದ ಅನೇಕ ವೈಯಕ್ತಿಕ ಪ್ರಶ್ನೆಗಳು ಈ ಸಂದರ್ಶನದ ವೇಳೆ ಕಿಚ್ಚರಿಗೆ ಎದುರಾಯ್ತು. ತಾವು 2 ನೇ ಕ್ಲಾಸಿನಲ್ಲಿದ್ದಾಗಲೇ ತಮ್ಮ ಸಹಪಾಠಿ ಹುಡುಗಿಯೊಬ್ಬರಿಗೆ 'ಐ ಲವ್ ಯೂ' ಹೇಳಿದ್ದ ಗುಟ್ಟನ್ನು ರಟ್ಟಾಗಿಸಿದರು ಸುದೀಪ್. ನಂತರ ಪತ್ನಿ ಪ್ರಿಯಾ ಬಗ್ಗೆಯೂ ಒಂದೆರಡು ಮಾತನ್ನು ಹೇಳಿದರು. ಮುಂದಿನ ಪಟು ನೋಡಿ...   

<ul id="pagination-digg"><li class="next"><a href="/tv/kichcha-sudeep-suvarna-news-channel-new-studio-launch-067423.html">Next »</a></li></ul>
English summary
Present South Indian Super Star Kichcha Sudeep talked with Girls at Suvarna 24x7 News Channel's New Studio which is inaugurated Today on 19th August 2012. &#13; &#13;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada