twitter
    For Quick Alerts
    ALLOW NOTIFICATIONS  
    For Daily Alerts

    'ಮಜಾಭಾರತ' ವೇದಿಕೆಯಲ್ಲಿ ಗಳಗಳನೆ ಕಣ್ಣೀರಿಟ್ಟ ಕಿರಣ್ ರಾಜ್: ಕಾರಣವೇನು?

    |

    ಕನ್ನಡ ಕಿರುತೆರೆ ಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸತನವನ್ನು ತಂದ ಧಾರಾವಾಹಿ ಎಂದರೆ ಕನ್ನಡತಿ. ಅಪ್ಪಟ ಕನ್ನಡದ ಸಂಭಾಷಣೆ ಇರುವ ಈ ಧಾರಾವಾಹಿ ಪ್ರೇಕ್ಷಕರ ಹೃದಯಗೆದ್ದಿದೆ. ಧಾರಾವಾಹಿಯ ಪಾತ್ರಗಳು ಸಹ ನೋಡುಗರನ್ನು ಕಾಡುವಂತೆ ಮಾಡಿದೆ.

    ಹರ್ಷ, ಭುವಿ, ಅಮ್ಮಮ್ಮ, ವರೂಧಿನಿ, ಸಾನಿಯಾ ಹೀಗೆ ಧಾರಾವಾಹಿಯ ಪ್ರತಿಯೊಂದು ಪಾತ್ರಗಳು ಸಹ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದೆ. ಅಂದಹಾಗೆ ಕನ್ನಡತಿ ಧಾರಾವಾಹಿ ಬಗ್ಗೆ ಇಷ್ಟು ಪೀಠಿಕೆ ಹಾಕಲು ಕಾರಣ ಈ ಧಾರಾವಾಹಿ ತಂಡ ಇತ್ತೀಚಿಗಷ್ಟೆ ಕಾಮಿಡಿ ಶೋ ಮಜಾಭಾರತಕ್ಕೆ ಭೇಟಿ ನೀಡಿದ್ದಾರೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು, ಈ ಶೋ ಶನಿವಾರ ಮತ್ತು ಭಾನುವಾರ ಪ್ರಸಾರವಾಗಿದೆ. ಮುಂದೆ ಓದಿ...

    45 ವರ್ಷಗಳಿಂದ ಇದ್ದ ದುಶ್ಚಟವನ್ನು ಬಿಗ್‌ಬಾಸ್ ಮನೆಯಲ್ಲಿ ಬಿಟ್ಟ ಶಂಕರ್ ಅಶ್ವತ್ಥ್45 ವರ್ಷಗಳಿಂದ ಇದ್ದ ದುಶ್ಚಟವನ್ನು ಬಿಗ್‌ಬಾಸ್ ಮನೆಯಲ್ಲಿ ಬಿಟ್ಟ ಶಂಕರ್ ಅಶ್ವತ್ಥ್

    ಕಣ್ಣೀರಿಟ್ಟ ಕಿರಣ್ ರಾಜ್

    ಕಣ್ಣೀರಿಟ್ಟ ಕಿರಣ್ ರಾಜ್

    ಇಡೀ ಕನ್ನಡತಿ ತಂಡ ಮಜಾಭಾರತ ಶೋನಲ್ಲಿ ನೃತ್ಯ ಮಾಡಿ, ಕುಣಿದು, ನಕ್ಕು ನಗಿಸಿ ಸಖತ್ ಎಂಜಾಯ್ ಮಾಡಿದ್ದಾರೆ. ಆದರೆ ಕನ್ನಡತಿ ಹೀರೋ ಕಿರಣ್ ರಾಜ್ ಪಾತ್ರ ವೇದಿಕೆಯಲ್ಲಿ ಗಳಗಳನೆ ಕಣ್ಣೀರಾಕಿದ್ದಾರೆ. ಹೌದು, ತಾಯಿ ಮಾತನಾಡಿದ್ದನ್ನು ಕೇಳಿ ಕಿರಣ್ ರಾಜ್ ಭಾವುಕರಾಗಿದ್ದಾರೆ.

    ಕಿರಣ್ ರಾಜ್ ಹುಟ್ಟಿಬೆಳೆದಿದ್ದು ಮಧ್ಯಪ್ರದೇಶದಲ್ಲಿ

    ಕಿರಣ್ ರಾಜ್ ಹುಟ್ಟಿಬೆಳೆದಿದ್ದು ಮಧ್ಯಪ್ರದೇಶದಲ್ಲಿ

    ಕಿರಣ್ ರಾಜ್ ಕನ್ನಡದ ಹುಡುಗ ಆಗಿರಬಹುದು ಆದರೆ ಹುಟ್ಟಿಬೆಳೆದಿದ್ದು ಮಧ್ಯಪ್ರದೇಶದಲ್ಲಿ. ಹಿಂದಿಯನ್ನೇ ಮಾತನಾಡಿಕೊಂಡು ಬೆಳೆದ ಕಿರಣ್ ರಾಜ್ ಕನ್ನಡ ಕಲಿತು, ಕನ್ನಡತಿ ಧಾರಾವಾಹಿ ಧಾರಾವಾಹಿಯಲ್ಲಿ ನಟಿಸಿ, ಕನ್ನಡಿಗರ ಹೃದಯ ಗೆದ್ದಿರುವ ಬಗ್ಗೆ ಕಿರಣ್ ತಾಯಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸಂತಸ ವ್ಯಕ್ತಪಡಿಸಿದ ಕಿರಣ್ ತಾಯಿ

    ಸಂತಸ ವ್ಯಕ್ತಪಡಿಸಿದ ಕಿರಣ್ ತಾಯಿ

    'ಕಿರಣ್ ರಾಜ್ ಬೆಳೆದಿದೆಲ್ಲ ಮಧ್ಯ ಪ್ರದೇಶದಲ್ಲಿ. ಸುತ್ತಮುತ್ತ ಇರೋರೆಲ್ಲ ಹಿಂದಿ ಮಾತನಾಡುವವರು. ಡ್ಯಾಡಿ ಹೇಳೋರು ಕನ್ನಡ ಮಾತನಾಡಿ ಅಂತ. ಆದರೂ ಹಿಂದಿ ಮಾತನಾಡುತ್ತಿದ್ವಿ. ಈಗ ಕನ್ನಡತಿ ಧಾರಾವಾಹಿಯಲ್ಲಿ, ಕರ್ನಾಟಕದಲ್ಲಿ ಜನ ಮೆಚ್ಚಿದ ಪ್ರಶಸ್ತಿ ಪಡೆದಿದ್ದು, ತುಂಬಾ ಖುಷಿಯಾಗಿದೆ' ಎಂದಿದ್ದಾರೆ.

    ಅಡುಗೆ ಮನೆಯಲ್ಲಿ ಹತ್ತಿದ ಬೆಂಕಿ: ಚಂದ್ರಕಲಾ ಮತ್ತು ನಿರ್ಮಲಾ ಜಗಳಕ್ಕೆ ಸ್ಪರ್ಧಿಗಳು ಗಪ್ ಚುಪ್ಅಡುಗೆ ಮನೆಯಲ್ಲಿ ಹತ್ತಿದ ಬೆಂಕಿ: ಚಂದ್ರಕಲಾ ಮತ್ತು ನಿರ್ಮಲಾ ಜಗಳಕ್ಕೆ ಸ್ಪರ್ಧಿಗಳು ಗಪ್ ಚುಪ್

    ಶಾಲೆಯ ಡ್ರಾಮ ವಿಚಾರ ಬಿಚ್ಚಿಟ್ಟ ತಾಯಿ

    ಶಾಲೆಯ ಡ್ರಾಮ ವಿಚಾರ ಬಿಚ್ಚಿಟ್ಟ ತಾಯಿ

    'ಶಾಲೆಯಲ್ಲಿ ಡ್ರಾಮ ಮಾಡಿದಾಗ ನಿನ್ನನ್ನು ಸಿಪಾಯಿ ಮಾಡಿದ್ರು, ಮೊದಲಿನಿಂದ ಕೊನೆಯವರೆಗೂ ನಿಂತೇ ಇದ್ದೆ, ಡೈಲಾಗ್ ಕೊಟ್ಟಿಲ್ಲ ಎಂದು ಅಳುತ್ತಿದ್ದೆ, ಆಗ ಡ್ಯಾಡಿ ಹೇಳಿದ್ರು, ಎಲ್ಲರೂ ಡೈಲಾಗ್ ಹೇಳಿ ಹೋದರು, ಆದರೆ ನೀನು ಕೊನೆ ವರೆಗೂ ನಿಂತಿದ್ದೆ ನೀನೆ ಹೀರೋ ಅಂದಿದ್ರು. ಕಿರಣ್ ಅಮ್ಮ ಲಲಿತಾ ಸುರೇಶ್ ಅಂತ ಗೊತ್ತು ಮಾಡ್ಲಿ ಅಂತ ಅಂದುಕೊಳ್ಳುತ್ತಿದ್ದೆ, ಅದು ಇವತ್ತು ಆಗಿದೆ. ಹೀಗೆ ಇರು, ಹೀಗೆ ಮುಂದುವರಿ' ಎಂದು ಹೇಳುತ್ತಿದ್ದಂತೆ ಕಿರಣ್ ರಾಜ್ ಭಾವುಕರಾಗಿದ್ದಾರೆ.

    ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ನಟನೆ

    ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ನಟನೆ

    ಕಿರಣ್ ರಾಜ್ ಸದ್ಯ ಧಾರಾವಾಹಿ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿರುವ ಕಿರಣ್ ರಾಜ್ ಇದೀಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿಗಳಿಸಿರುವ ಕಿರಣ್ ರಾಜ್ ಬೆಳ್ಳಿಪರದೆ ಮೇಲು ಮಿಂಚು ಸಕ್ಸಸ್ ಕಾಣುತ್ತಾರಾ ಕಾದು ನೋಡಬೇಕು.

    English summary
    Serial Actor Kiran Raj gets emotional in Majabharatha show.
    Sunday, March 7, 2021, 18:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X