ರಾಜ್ಯೋತ್ಸವ ವಿಶೇಷ: 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ 'ಕಿರಿಕ್' ಕೀರ್ತಿ ಫ್ಯಾಮಿಲಿ
Recommended Video

ಈ ಗೇಮ್ ಶೋ ನಲ್ಲಿ ಕಿರಿಕ್ ಕೀರ್ತಿ ಕುಟುಂಬ ಭಾಗಿ |FILMIBEAT KANNADA
ಉದಯ ಟಿವಿಯಲ್ಲಿ ಹೊಸ ಕಾರ್ಯಕ್ರಮ 'ತುತ್ತಾ ಮುತ್ತಾ' ಆರಂಭವಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ನಿರಂಜನ್ ದೇಶಪಾಂಡೆ ನಿರೂಪಕನಾಗಿ ಕಾಣಿಸಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಮನರಂಜನೆಯೇ ಮೂಲ ಮಂತ್ರ.
'ತುತ್ತಾ ಮುತ್ತಾ' ಈ ವಾರದ ರಾಜ್ಯೋತ್ಸವ ವಿಶೇಷ ಸಂಚಿಕೆಯಲ್ಲಿ 'ಕಿರಿಕ್' ಕೀರ್ತಿ ಫ್ಯಾಮಿಲಿ ಭಾಗವಹಿಸಿದ್ದಾರೆ. 'ಕಿರಿಕ್' ಕೀರ್ತಿಯ ಹಾಸ್ಯ ಪ್ರಜ್ಞೆ, ಅವರ ಬಾಲ್ಯ ಹಾಗೂ ಕಷ್ಟದ ದಿನಗಳತ್ತ 'ತುತ್ತಾ ಮುತ್ತಾ' ಕಾರ್ಯಕ್ರಮ ಬೆಳಕು ಚೆಲ್ಲಲಿದೆ.

ಕನ್ನಡ ಪರ 'ಕಿರಿಕ್' ಕೀರ್ತಿ ಹೋರಾಟಕ್ಕೆ ಇಳಿದಾಗ ಅವರ ಮಡದಿ ಹಾಗೂ ತಾಯಿ ಎದುರಿಸಿದ ಕಷ್ಟಗಳು, ಬೆದರಿಕೆಗಳನ್ನು 'ತುತ್ತಾ ಮುತ್ತಾ' ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.
ಸಿಹಿ ಕಹಿ ಎರಡೂ ಸಮವಾಗಿ ಇರುವ ಈ ವಾರದ 'ತುತ್ತಾ ಮುತ್ತಾ' ಸಂಚಿಕೆ ಶನಿವಾರ ರಾತ್ರಿ 9 ಗಂಟೆಗೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ.
English summary
Kirik Keerthi and family have taken part in Tutta Mutta game show.


Click it and Unblock the Notifications