»   » ಅಪ್ಪು ಸರಳತೆಗೆ ತಲೆ ಬಾಗಿದ ಕಿರಿಕ್ ಕೀರ್ತಿ

ಅಪ್ಪು ಸರಳತೆಗೆ ತಲೆ ಬಾಗಿದ ಕಿರಿಕ್ ಕೀರ್ತಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಷ್ಟು ಸಿಂಪಲ್ ಮನುಷ್ಯ ಅನ್ನೋದು ಹೆಚ್ಚಿನ ಜನರಿಗೆ ಹೇಳಬೇಕಿಲ್ಲ. ಅವರನ್ನ ತುಂಬಾ ಹತ್ತಿರದಿಂದ ಭೇಟಿ ಮಾಡಿಲ್ಲ ಅಂದರೂ ಕೂಡ ಒಂದೆರೆಡು ಬಾರಿ ಹತ್ತಿರದಿಂದ ನೋಡಿರುವ ಅಭಿಮಾನಿಗಳಿಗೆ ಅವರೆಷ್ಟು ಸರಳತೆಯ ವ್ಯಕ್ತಿ ಅನ್ನುವುದು ಅನುಭವಕ್ಕೆ ಬಂದಿರುತ್ತೆ.

ಇತ್ತೀಚಿಗಷ್ಟೇ ರಸ್ತೆ ಬದಿಯ ವ್ಯಾಪಾರಿಗಳ ಅಂಗಡಿಯಲ್ಲಿ ತಿಂಡಿ ತಿಂದು ಜನರ ಗಮನ ಸೆಳೆದಿದ್ದ ಅಪ್ಪು ಬಗ್ಗೆ ಮತ್ತೊಂದು ಖುಷಿ ಪಡುವಂತಹ ವಿಚಾರ ಹೊರಬಂದಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆಸಿಕೊಡುವ ಪವರ್ ಫ್ಯಾಮಿಲಿ ರಿಯಾಲಿಟಿ ಶೋ ನಲ್ಲಿ ಪುನೀತ್ ಸಿಂಪ್ಲಿ ಸಿಟಿಯ ಬಗ್ಗೆ ನಟ ಕಿರಿಕ್ ಕೀರ್ತಿ ಹೇಳಿದ್ದಾರೆ.

Kirik Kirti said about the simplicity of actor Puneet Raj Kumar

ಖಾಸಗಿ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮದ ಅಥಿತಿಯಾಗಿ ಪುನೀತ್ ರಾಜ್ ಕುಮಾರ್ ಬರಬೇಕಾಗಿತ್ತಂತೆ. ಮನೆಯಿಂದ ಹೊರಟ ಅಪ್ಪು ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದರು. ಒಂದು ನಿಮಿಷದಲ್ಲಿ ಪುನೀತ್ ವಾಹಿನಿಗೆ ಬರಬೇಕಾಗಿತ್ತು. ಕಾರ್ ನಲ್ಲಿ ಕಾಯುತ್ತಾ ಕುಳಿತರೆ ಟೈಂ ಆಗುತ್ತೆ ಎಂದು ಅರಿತ ಪುನೀತ್ ರಸ್ತೆಯಲ್ಲಿ ನಡೆದುಕೊಂಡು ಬಂದು ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ಹಾಜರ್ ಆಗಿದ್ದಾರೆ.

ಈ ರೀತಿಯಲ್ಲಿ ಪುನೀತ್ ಹಲವಾರು ಬಾರಿ ನಡೆದುಕೊಂಡಿದ್ದಾರೆ. ಒಬ್ಬ ಸ್ಟಾರ್ ಆದವರಿಗೆ ಸಮಯ ಪ್ರಜ್ಞೆ ಇರಬೇಕಾಗುವುದು ತುಂಬಾ ಮುಖ್ಯವಾದ ವಿಚಾರ ಎನ್ನುವುದು ಪುನೀತ್ ಅರಿತು ಕೊಂಡಿದ್ದಾರೆ. ಇದೊಂದೆ ಅಲ್ಲದೆ ಇಂತಹ ಸಾವಿರಾರು ಉದಾಹರಣೆಗಳು ಪುನೀತ್ ವಿಚಾರದಲ್ಲಿ ಕೇಳಲು ಮತ್ತು ನೋಡಲು ಸಿಗುತ್ತದೆ.

English summary
Kannada actor and reality show winner Kirik Kirti said about the simplicity of actor Puneet Raj Kumar. Kirik Kirti said this on the Family Power Program

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X