ಸೀರಿಯಲ್ ನಟಿಯರ ಮಕ್ಕಳ ಜೀವನ ಶೈಲಿ ಬಲು ಸ್ಟೈಲಿಶ್!

By ಪ್ರಿಯಾ ದೊರೆ

ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಾ ಬಂದಿರುವ ಹಲವು ನಟ-ನಟಿಯರ ನಿಜವಾದ ಮಕ್ಕಳು ಯಾರು ಎಂದು ತಿಳಿಯುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಕಿರುತೆರೆಯಲ್ಲಿ ನಟಿಸುತ್ತಿರುವ ನಟ ನಟಿಯರ ಮಕ್ಕಳು ನೋಡಲು ಹೇಗಿದ್ದಾರೆ.? ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಮುಂದೆ ಓದಿ.

'ಪಾಪಾ ಪಾಂಡು' ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ಶಾಲಿನಿ, ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಸದ್ಯ ಸ್ಟಾರ್ ಸುವರ್ಣಾದಲ್ಲಿ ಮೂಡಿ ಬರುವ ಸುವರ್ಣಾ ಸೂಪರ್ ಸ್ಟಾರ್ ಕಾರ್ಯಕ್ರಮವನ್ನು ಕೂಡ ನಿರೂಪಣೆ ಮಾಡುತ್ತಿದ್ದಾರೆ. ಇನ್ನು ಇವರಿಗೆ 12 ವರ್ಷದ ಹೆಣ್ಣು ಮಗುವಿದೆ. ಮಗುವಿನ ಹೆಸರು ಆಭಾ. ಶಾಲಿನಿಗೆ ತಮ್ಮ ಮಗಳೆಂದರೆ ಹುಚ್ಚು ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಮಗಳ ಜೊತೆ ರೀಲ್ಸ್ ಮಾಡುತ್ತಿರುತ್ತಾರೆ. 'ಜೊತೆ ಜೊತೆಯಲಿ' ಧಾರಾವಾಹಿಯ ಅಪೂರ್ವಶ್ರೀ ಅವರ ಮಗಳು ಯಾವ ಹೀರೋಯಿನ್‌ಗೂ ಕಮ್ಮಿ ಇಲ್ಲ. ಅಪೂರ್ವಶ್ರೀ ಅವರಿಗೆ ಒಬ್ಬಳೇ ಮಗಳಿದ್ದಾಳೆ.. ಮಗಳ ಮೇಲೆ ಪ್ರಾಣ ಇಟ್ಟುಕೊಂಡಿರುವ ಅಪೂರ್ವ ಅವರು ಸಮಯವಿದ್ದಾಗೆಲ್ಲಾ ಮಗಳ ಜೊತೆಗೆ ಕಾಲ ಕಳೆಯುತ್ತಾರೆ. ಇತ್ತೀಚೆಗೆ ಅಪೂರ್ವ ಅವರ ಮಗಳ ಫೋಟೊಶೂಟ್ ಮಾಡಿಸಿದ್ದಾರೆ.

ನಟಿ ಸ್ವಾತಿಗೆ 18 ವರ್ಷದ ಮಗ ಇದ್ದಾನೆ!

ನಟಿ ಸ್ವಾತಿ ಯಾರಿಗೆ ಗೊತ್ತಿಲ್ಲ ಹೇಳಿ. ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿರುವ ಸ್ವಾತಿ ಅವರು ಈ ಹಿಂದೆ ಧಾರಾವಾಹಿಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇನ್ನೂ ಯಂಗ್ ಆಗೇ ಕಾಣಿಸುವ ಸ್ವಾತಿ ಅವರಿಗೆ 18 ವರ್ಷದ ಮಗನಿದ್ದಾನೆ. ಆಗಾಗ ಕುಟುಂಬದ ಜೊತೆಗೆ ಫೋಟೊಗಳನ್ನು ತೆಗೆದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.

ಇಬ್ಬರು ಮುದ್ದಿನ ಮಕ್ಕಳ ತಾಯಿ ಮಧುಮತಿ!

ನಟಿ ಮಧುಮತಿ ಅವರು ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ಇಬ್ಬರು ಮುದ್ದು ಮಕ್ಕಳಿದ್ದಾರೆ. ಇವರ ಪತಿ ಸಂಜಯ್ ಕುಮಾರ್ ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮಗಳು ಕೃತಿ, ಬಿಎ ವಿದ್ಯಾರ್ಥಿನಿ ಹಾಗೂ ಮಗ ಕೌಸ್ತುಭ್, ಒಂಬತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ನಟಿ ವಾಣಿಶ್ರೀ ಪುತ್ರಿ ಮಾಡೆಲ್!

ಹಲವರು ವರ್ಷಗಳಿಂದ ಧಾರಾವಾಹಿಯಲ್ಲಿ ನಟಿಸುತ್ತಿರುವ ವಾಣಿಶ್ರೀಗೆ ಒಬ್ಬಳು ಮಗಳಿದ್ದಾಳೆ. ವಾಣಿಶ್ರೀ ಮಗಳ ಹೆಸರು ಖುಷಿ. ಖುಷಿ ಮಾಡೆಲಿಂಗ್ ಕ್ಷೇತ್ರದಲ್ಲಿದ್ದು, ನಟನೆಯಲ್ಲಿ ವಾಣಿಶ್ರೀ ಗಿಂತ ಒಂದು ಕೈ ಹೆಚ್ಚಂತೆ. ವಾಣಿಶ್ರೀ ಹಾಗೂ ಖುಷಿ ಇಬ್ಬರನ್ನು ಪಕ್ಕದಲ್ಲಿ ನಿಲ್ಲಿಸಿ ನೋಡಿದರೆ, ಅಕ್ಕ-ತಂಗಿಯರಂತೆ ಕಾಣುತ್ತಾರೆ.

ವಿನಯಾ ಪ್ರಸಾದ್ ಮಗಳನ್ನು ನೋಡಿದ್ದೀರಾ?

ನಟಿ ವಿನಯಾ ಪ್ರಸಾದ್ ಅವರು ಕಿರುತೆರೆ ಹಾಗೂ ಹಿರಿತೆರೆ ಎರಡೂ ಕಡೆ ಸಕ್ರಿಯರಾಗಿದ್ದಾರೆ. ವಿನಯಾ ಪ್ರಸಾದ್ ಅವರಿಗೆ ಒಬ್ಬಳೇ ಮಗಳು. ಆಕೆಯ ಹೆಸರು ಪ್ರಥಮಾ ಪ್ರಸಾದ್. ಪ್ರಥಮಾ ಪ್ರಸಾದ್ ಭರತನಾಟ್ಯಂ ಡ್ಯಾನ್ಸರ್ ಆಗಿದ್ದು, ಅವರು ಕೂಡ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಬ್ರಹ್ಮಗಂಟು', 'ಅಮ್ನೋರು' ಧಾರಾವಾಹಿಗಳಲ್ಲಿ ಪ್ರಥಮಾ ಪ್ರಸಾದ್ ಅವರು ಬಣ್ಣ ಹಚ್ಚಿದ್ದಾರೆ.

More from Filmibeat

English summary
Know About kannada Serial Actress Vanishri, Shalini, Vinaya Prasad Childrens Life Style And Biography,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X