ರಾಗಿಣಿ ಗ್ಲಾಮರ್ ಗೆ ಔಟ್ ಆಫ್ ಔಟ್ ಮಾರ್ಕ್ ನೀಡಿದ ನಟ
Recommended Video

ನಟ ರಾಗಿಣಿ ಗ್ಲಾಮರ್ ಕ್ವೀನ್ ಅಂತ್ತಾನೆ ಫೇಮಸ್ ಆಗಿರುವ ನಟಿ. ಈ ತುಪ್ಪದ ಹುಡುಗಿ ತಮ್ಮ ಮೊದಲ ಸಿನಿಮಾದಿಂದ ಹಿಡಿದು ಇಲ್ಲಿಯವರೆಗೂ ತಮ್ಮ ಸೌಂದರ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈಗ ರಾಗಿಣಿ ಗ್ಲಾಮರ್ ನೋಡಿ ಕನ್ನಡಡ ಯುವ ನಟ ನಿರೂಪ್ ಭಂಡಾರಿ ಕೂಡ ಫಿದಾ ಆಗಿದ್ದಾರೆ.
ಇತ್ತೀಚಿಗಷ್ಟೆ ನಿರೂಪ್ ಭಂಡಾರಿ ಸ್ಟಾರ್ ಸುವರ್ಣ ವಾಹಿನಿಯ 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಶಿವರಾಜ್ ಕುಮಾರ್ ಕನ್ನಡದ ನಟಿಯರಾದ ರಚಿತಾ ರಾಮ್, ಶೃತಿ ಹರಿಹರನ್, ರಶ್ಮಿಕಾ ಮಂದಣ್ಣ, ರಾಗಿಣಿ ದ್ವಿವೇದಿ ಅವರ ಗ್ಲಾಮರ್ ತಕ್ಕಂತೆ ಅಂಕ ನೀಡುವಂತೆ ಹೇಳಿದರು.

ಆಗ ನಿರೂಪ್ ರಶ್ಮಿಕಾ ಮಂದಣ್ಣಗೆ 8, ರಚಿತಾ ರಾಮ್ ಗೆ 7, ಶೃತಿ ಹರಿಹರನ್ ಗೆ 8 ಹಾಗೂ ರಾಗಿಣಿ ದ್ವಿವೇದಿಗೆ 10 ಅಂಕಗಳನ್ನು ನೀಡಿದ್ದಾರೆ. ಕನ್ನಡದ ಈ ನಾಲ್ಕು ನಟಿಯರ ಪೈಕಿ ನಟಿ ರಾಗಿಣಿಗೆ ನಿರೂಪ್ ಔಟ್ ಆಫ್ ಔಟ್ ಮಾರ್ಕ್ ನೀಡಿದ್ದಾರೆ. ಇನ್ನು ನಿರೂಪ್ ಪ್ರಕಾರ ಈ ನಟಿಯರ ಪೈಕಿ ಹೆಚ್ಚು ಗ್ಲಾಮರ್ ಇರುವ ನಟಿಯಂತೆ. ಅಂದಹಾಗೆ, ರಾಗಿಣಿ ತಮ್ಮ ಕೆರಿಯರ್ ನಲ್ಲಿ ಹೆಚ್ಚಾಗಿ ಗ್ಲಾಮರ್ ಪಾತ್ರಗಳನ್ನೇ ಮಾಡಿದ್ದಾರೆ. ಸದ್ಯ ರಾಗಿಣಿ 'ಕಿಚ್ಚು' ಎಂಬ ಸಿನಿಮಾದಲ್ಲಿ ಡಿ ಗ್ಲಾಮರ್ ರೋಲ್ ನಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.


Click it and Unblock the Notifications











