ಮಗು ಜನಿಸಿದ 5 ತಿಂಗಳ ಬಳಿಕ 'ಲವ್ ಮಾಕ್ಟೆಲ್ 3' ಶುರು; ಕೃಷ್ಣ ಮಿಲನ ಮಸ್ತ್ ಪ್ಲ್ಯಾನ್
'ಲವ್ ಮಾಕ್ಟೇಲ್' ನಟಿ ಮಿಲನಾ ನಾಗರಾಜ್ ಅವರು ಗರ್ಭಿಣಿ ಆಗಿರುವ ಸುದ್ದಿ ಅವರ ಅಭಿಮಾನಿಗಳ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಫ್ಯಾನ್ ಗಳಿಗೆ ಇದು ಬಹಳ ವಿಶೇಷವಾದ ಸಿಹಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ ಸೀಮಂತ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಿಕೊಂಡಿದೆ ಈ ಜೋಡಿ.
ಸೀಮಂತದ ಹಲವಾರು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಜೊತೆಗೆ ವಿಶೇಷವಾಗಿ ಫೋಟೋಶೂಟ್ ಗಳನ್ನು ಮಾಡಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಫೋಟೋಗಳೆಲ್ಲವೂ ಬಹಳ ವೈರಲ್ ಆಗಿತ್ತು.

ಈಗ ತಮ್ಮ ಅನುಭವದ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ನಟಿ ಮಿಲನ ನಾಗರಾಜ್ "ನಾನು ನನ್ನ ಮಗುವನ್ನು ಮಡಿಲಲ್ಲಿಟ್ಟುಕೊಳ್ಳುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. ಡೆಲಿವರಿ ಆದ ತಕ್ಷಣ ನನ್ನ ತವರೂರಾದ ಹಾಸನಕ್ಕೆ ತೆರಳಲಿದ್ದೇನೆ. ಮೂರು ತಿಂಗಳ ನಂತರ ಬೆಂಗಳೂರಿಗೆ ವಾಪಸ್ ಆಗುವ ಯೋಚನೆ ಇದೆ.
ಮಗುವಿಗೆ ಸುಮಾರು 5 ತಿಂಗಳು ಕಳೆದ ನಂತರ ನಾನು ಹಾಗೂ ಕೃಷ್ಣ ಅವರು ಮತ್ತೆ ಶೂಟಿಂಗ್‌ನಲ್ಲಿ ಸಕ್ರಿಯವಾಗಬೇಕೆಂಬ ಯೋಚನೆಯಲ್ಲಿದ್ದೇವೆ. ಲವ್ ಮಾಕ್ಟೈಲ್ 3 ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದೇವೆ." ಎಂದು ಹೇಳಿಕೊಂಡಿದ್ದಾರೆ.
ಶೂಟಿಂಗ್ ಸಮಯದಲ್ಲಿ ಎಳೆ ಮಗುವಿನ ಆರೈಕೆಯ ಬಗ್ಗೆಯೂ ಯೋಚಿಸಿರುವ ನಟಿ ಮಿಲನ ನಾಗರಾಜ್ " ಕೃಷ್ಣ ಅವರು ಒಬ್ಬ ಒಳ್ಳೆಯ ತಂದೆಯಾಗುತ್ತಾರೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ನಾವಿಬ್ಬರೂ ಒಂದೇ ಸಿನಿಮಾದಲ್ಲಿ ಕೆಲಸ ಮಾಡುವುದರಿಂದ ಮಗುವನ್ನು ನೋಡಿಕೊಳ್ಳಲು ಬಹಳ ಕಷ್ಟವಾಗುವುದಿಲ್ಲ ಎಂದು ನಂಬಿದ್ದೇವೆ.

ಅಷ್ಟೇ ಅಲ್ಲದೆ ನಮ್ಮಿಬ್ಬರ ಕಡೆಯಿಂದಲೂ ನಮಗೆ ಒಳ್ಳೆಯ ಫ್ಯಾಮಿಲಿ ಸಪೋರ್ಟ್ ಸಿಸ್ಟಮ್ ಇದೆ. ಹಾಗಾಗಿ ಶೂಟಿಂಗ್ ಸಮಯದಲ್ಲಿ ಎಳೆ ಮಗುವಿನ ಆರೈಕೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂಬುದು ನಮ್ಮ ಅನಿಸಿಕೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
2021ರಲ್ಲಿ ಮದುವೆಯಾದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣಜೋಡಿ ಈ ವರ್ಷ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದು ಫ್ಯಾನ್ಸ್‌ಗೆ ಬಹಳ ಖುಷಿ ಕೊಟ್ಟಿದೆ. 35 ವರ್ಷದ ನಟಿ ಮಿಲನಾ ನಾಗರಾಜ ಅವರು ಈಗಾಗಲೇ ಪತಿ ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿದ ಸಿನಿಮಾಗಳಲ್ಲಿ ಹಾಗೇ ಒಟ್ಟಿಗೆ ಕೆಲವು ಚಿತ್ರಗಳ್ಲಿ ನಟಿಸಿದ್ದಾರೆ. 'ಲವ್ ಮಾಕ್ಟೈಲ್', 'ಲವ್ ಮಾಕ್ಟೈಲ್ 2', 'ಲವ್ ಬರ್ಡ್ಸ್' ಇತ್ಯಾದಿ ಇವರು ಒಟ್ಟಿಗೆ ನಟಿಸಿರುವಂತಹ ಸಿನಿಮಾಗಳು. ಈ ಜೋಡಿ ಚಂದನವನದಲ್ಲಿ ಬಹಳ ಖ್ಯಾತಿ ಪಡೆದಿದೆ.


Click it and Unblock the Notifications











