ಅತ್ತೆ ಕೈಗೆ ಸಿಕ್ಕಿ ಬಿದ್ದ ಶ್ಯಾಮ: ಅಮ್ಮನ ಕೈಯಿಂದ ಹೆಂಡತಿಯ ರಕ್ಷಿಸುತ್ತಾನಾ ಅಖಿಲ್?
ಜೀ ಕನ್ನಡದಲ್ಲಿ ಜನಮನ ಗೆದ್ದಿರುವ ಧಾರಾವಾಹಿಗಳಲ್ಲಿ ಒಂದು 'ಕೃಷ್ಣ-ಸುಂದರಿ'. ಈ ಧಾರವಾಹಿ ಸೋಮವಾರದಿಂದ ಶುಕ್ರವಾರದವರೆಗು ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರವಾಗುತ್ತದೆ. ಈ ಧಾರವಾಹಿಯು ನೋಡುಗರನ್ನು ಸೆಳೆಯುತ್ತಿದೆ. ಅದೆಷ್ಟೆ ಕಷ್ಟ ಬಂದರು ಅದನ್ನೆಲ್ಲ ಮೆಟ್ಟಿ ಮುನ್ನುಗ್ಗುತ್ತಿದ್ದಾಳೆ ಧಾರಾವಾಹಿ ನಾಯಕಿ ಶ್ಯಾಮ.
ಶ್ಯಾಮಳ ಒಳ್ಳೆಯತನವನ್ನು ಉಪಯೋಗಿಸಿಕೊಂಡು ಗೌರಮ್ಮ ಕುತಂತ್ರ ಮಾಡುತ್ತಿದ್ದಾಳೆ. ಶ್ಯಾಮ ಒಳ್ಳೆಯ ಹಾಡುಗಾರ್ತಿ ಎಂಬು ತಿಳಿದುಕೊಂಡ ಗೌರಮ್ಮ ರೂಪರಾಣಿಗಾಗಿ ತೆರೆ ಹಿಂದೆ ಶ್ಯಾಮ ಹಾಡು ಹಾಡುವಂತೆ ಮಾಡಿದ್ದಾರೆ. ತೆರೆ ಮುಂದೆ ರೂಪಾರಾಣಿ ಹಾಡುವ ಹಾಗೆ ಅಭಿನಯ ಮಾಡುತ್ತಾಳೆ. ಹಿಂದೆ ಶ್ಯಾಮ ಹಾಡು ಹಾಡುತ್ತಾಳೆ. ಇದಕ್ಕಾಗಿ ಶ್ಯಾಮಳಿಗೆ ಹಣದ ಆಮಿಷ ಸಹ ಒಡ್ಡುತ್ತಾಳೆ.
ರೂಪಾರಾಣಿಗಾಗಿ, ಶ್ಯಾಮ ಹಾಡು ಹಾಡಿದ ವಿಚಾರ ಯಾರಿಗೂ ತಿಳಿದಿರಲಿಲ್ಲ. ಆದರೆ ಇದೀಗ ಗೌರಮ್ಮನ ತಂತ್ರ ಶ್ಯಾಮಳ ಗಂಡನಿಗೆ, ಮಾವನಿಗೆ ತಿಳಿದಿದೆ. ಮೊದ ಮೊದಲು ಶ್ಯಾಮನ ಮೇಲೆ ಮುನಿಸಿಕೊಂಡ ಗಂಡ ಅಖಿಲ್ ಬಳಿಕ ಆಕೆಯ ಮಾತಿಗೆ ಮನಸೋತಿದ್ದಾನೆ. ಶ್ಯಾಮ ಎಂದಿಗೂ ತಪ್ಪು ಮಾಡುವವಳೆ ಅಲ್ಲ ಆದರೆ ಪರಿಸ್ಥಿತಿಗೆ ಸಿಲುಕಿ ತಪ್ಪಿನ ಮೇಲೆ ತಪ್ಪು ಮಾಡಿಸುತ್ತಿದ್ದಾನೆ ಕೃಷ್ಣ.

ಭಗವಂತ ಕೃಷ್ಣನ ಪರಮಭಕ್ತೆ ಶ್ಯಾಮ, ಏನೇ ವಿಚಾರ ಇದ್ದರೂ ಅದನ್ನು ಮೊದಲು ಕೃಷ್ಣನಿಗೆ ಒಪ್ಪಿಸಿ ಆತನ ಒಪ್ಪಿಗೆಯ ಮೇರೆಗೆ ಏನೇ ಕೆಲಸ ಮಾಡಲು ಮುಂದುವರೆಯುತ್ತಾಳೆ. ಇದೀಗ ಕಲಾವಿದರಿಂದ ಶ್ಯಾಮಳ ಗಂಡನಿಗೆ ಕಂಟಕ ಇದೆ ಎಂದು ಜ್ಯೋತಿಷ್ಯರು ಹೇಳಿದ್ದಾರೆ. ಇದನ್ನೆ ನಂಬಿಕೊಂಡ ಶ್ಯಾಮಳ ಅತ್ತೆ ವಸಂತಗೆ ಬಹಳ ಭಯವಾಗುತ್ತದೆ. ಏನು ಮಾಡುವುದು ಎಂದು ದಿಕ್ಕೆ ತೋಚದಾಗುತ್ತದೆ, ಕಲಾವಿದರಿಂದ ದೂರ ಇರುವಂತೆ ನೋಡಿಕೋ ಶ್ಯಾಮ ಎಂದು ಪದೇಪದೇ ಹೇಳುತ್ತಿರುತ್ತಾಳೆ.
ಶ್ಯಾಮ ರೂಮಿನಲ್ಲಿ ಮೈಮರೆತು ಹಾಡುವುದನ್ನು ಅಖಿಲ್‌ನ ಅತ್ತಿಗೆ, ಅತ್ತೆ ವಸಂತನನ್ನು ಕರೆದು ತೋರಿಸುತ್ತಾಳೆ. ಇದರಿಂದ ಕೋಪಗೊಂಡ ವಸಂತ ಎಷ್ಟು ಹೇಳಿದರು ನನ್ನ ಮಾತು ಯಾರು ಕೇಳುತ್ತಿಲ್ಲ, ನೀನು ಹಾಡು ಹೇಳುತ್ತಿದ್ದೀಯ, ನಿನ್ನಿಂದಾಗಿಯೇ ನನ್ನ ಅಖಿಲ್‌ಗೆ ಈ ಪರಿಸ್ಥಿತಿ ಬಂದಿದ್ದು ಎಂದೆಲ್ಲ ಸರಿಯಾಗಿ ಬಯ್ಯುತ್ತಾಳೆ. ಇದರಿಂದ ಭಯಗೊಂಡ ಶ್ಯಾಮಳಿಗೆ ಏನು ಹೇಳಬೇಕೆಂದು ದಿಕ್ಕೆ ತೋಚದಾಗುತ್ತದೆ. ಆಗ ಅಖಿಲ್ ಕೂಡ ಅದೇ ರೂಮಿನಲ್ಲಿರುವುದನ್ನು ಕಂಡು ವಸಂತಗೆ ಶಾಕ್ ಆಗುತ್ತದೆ ನೀನು ಇಲ್ಲಿಯೇ ಇದ್ದೀಯ ಎಂದೆಲ್ಲ ಪ್ರಶ್ನೆ ಕೇಳಿದಾಗ ಮೊಬೈಲ್‌ನಲ್ಲಿ ಸಾಂಗ್ ಪ್ಲೇ ಮಾಡುತ್ತಿದ್ದೆ ಶ್ಯಾಮ ಹಾಡುತ್ತಿರಲಿಲ್ಲ ಎಂದು ಸುಳ್ಳು ಹೇಳುತ್ತಾನೆ ಇದರಿಂದ ವಸಂತನಿಗೆ ಸ್ವಲ್ಪ ತಲೆನೋವು ಕಡಿಮೆಯಾಗುತ್ತದೆ.


Click it and Unblock the Notifications