'ಕೃಷ್ಣ ತುಳಸಿ' ನಟಿ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ: ಕೈಯಲ್ಲಿದೆ 3 ಬ್ಯಾಕ್ ಟು ಬ್ಯಾಕ್ ಸಿನಿಮಾ!
'ಕೃಷ್ಣ ತುಳಸಿ' ಧಾರಾವಾಹಿಯ ನಂತರ ಸೀದಾ ಸ್ಯಾಂಡಲ್‌ವುಡ್‌ಗೆ ಹಾರಿದ ನಟಿ ಪ್ರಿಯಾಂಕಾ ಕುಮಾರ್ ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹೌದು! 2018ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಕೃಷ್ಣ ತುಳಸಿ' ಪ್ರಸಾರ ಆಗಿತ್ತು. ಇಲ್ಲಿಂದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಟಿ ಪ್ರಿಯಾಂಕಾ ಈಗಂತೂ ಬ್ಯಾಕ್ ಟು ಬ್ಯಾಕ್ ಮೂರು ಚಿತ್ರಗಳಿಗೆ ನಟಿಸುತ್ತ ಬ್ಯುಸಿ ಆಗಿದ್ದಾರೆ. ಅಸಲಿಗೆ ನಟನೆಯ ಬ್ಯಾಕ್ ಗ್ರೌಂಡ್ ಇಲ್ಲದ ಈಕೆ ಇಷ್ಟು ಬೇಗ ಅಭಿನಯಲೋಕದಲ್ಲಿ ಯಶಸ್ಸನ್ನು ಗಳಿಸುತ್ತಿದ್ದಾರೆ.

ನನಗೆ ಯಾವುದೇ ರೀತಿಯ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲ ಅಂತ ಪ್ರಿಯಾಂಕಾ ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಮಾಡೆಲಿಂಗ್ ಮಾಡುತ್ತಿದ್ದರು. ಐದು ವರ್ಷದ ಹಿಂದೆ ಅಂದರೆ, ಅಂದರೆ 2018ರಲ್ಲಿ ಧಾರಾವಾಹಿ ನಟಿಸೋಕೆ ಆಫರ್ ಬಂದಿತ್ತು. ಖಳನಾಯಕಿ ಪಾತ್ರ ಆಗಿದ್ದರೂ ಒಪ್ಪಿಕೊಂಡು ಯಶಸ್ಸು ಗಳಿಸಿದ್ದಾರೆ.
'ಕೃಷ್ಣ ತುಳಸಿ' ಧಾರಾವಾಹಿಯಲ್ಲಿ ಸಿಕ್ಕ ಪಾತ್ರದಿಂದ ನಟನೆಯ ಸಾಕಷ್ಟು ವಿಚಾರಗಳನ್ನು ಕಲಿತಿದ್ದಾಗಿ ಹೇಳಿಕೊಂಡಿದ್ದಾರೆ. ಯಾವ ರೀತಿಯ ನಟನೆ ಮಾಡಬಹುದು ಎಂಬುವ ವಿಚಾರ ಆತ್ಮವಿಶ್ವಾಸ ಬಂದಿದೆ ಎಂದಿದ್ದಾರೆ.

ಈಗ ಸಿನಿಮಾದಲ್ಲಿ ಸಿಕ್ಕಿರುವ ಮೂರು ವಿಭಿನ್ನ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ ಪ್ರಿಯಾಂಕಾ ಕುಮಾರ್, ನನಗೆ ಮೂರು ಚಿತ್ರದಲ್ಲೂ ಬಹಳ ವಿಭಿನ್ನ ಹಾಗೂ ಸ್ಪೆಷಲ್ ಪಾತ್ರಗಳು ಸಿಕ್ಕಿವೆ. ಒಂದಂತೂ ನನ್ನ ನಿಜ ಜೀವನದ ಸ್ವಭಾವಕ್ಕೆ ತದ್ವಿರುದ್ಧವಾಗಿದೆ. ನನಗೆ ವೈಯಕ್ತಿಕವಾಗಿ ಈ ಮೂರೂ ಪಾತ್ರಗಳು ಸಂತೋಷ ಸಮಾಧಾನ ಕೊಟ್ಟಿದೆ. ಮುಂದೆಯೂ ನಾನು ಸ್ತ್ರೀ ಪ್ರಾಬಲ್ಯದಂತಹ ಪಾತ್ರಗಳನ್ನು ಮಾಡಲು ಬಯಸುತ್ತೇನೆ. ಅಂತಹ ಪಾತ್ರಗಳೇ ನನ್ನ ಅಂತಃಕರಣಕ್ಕೆ ಸಮಾಧಾನ ಕೊಡುವುದು ಎಂದಿದ್ದಾರೆ.
ಅಂದಹಾಗೆ, ಪ್ರಿಯಾಂಕಾ ಕುಮಾರ್ 'ಅದ್ಧೂರಿ ಲವರ್ ' ಎಂಬ ಮಿಸ್ಟೆರಿ ಹಾಗೂ ಅಡ್ವೆಂಚರಸ್ ಸಿನಿಮಾದಲ್ಲಿ ಕಾಲೇಜು ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ 'ದಿಲ್ದರ್' ಎಂಬ ರೋಮ್ಯಾಂಟಿಕ್ ಸಿನಿಮಾದಲ್ಲಿ ಮಾತಿನ ಮಲ್ಲಿಯಂತಹ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಇವರ ಇನ್ನೊಂದು ಬಿಗ್ ಪ್ರಾಜೆಕ್ಟ್ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಒಟ್ಟಿನಲ್ಲಿ, ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಿಯಾಂಕಾ ಕುಮಾರ್ ಅವಕಾಶ ದೊರೆತರೆ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗಬೇಕಿದೆ. ಕೇವಲ ಒಂದೇ ಧಾರಾವಾಹಿಗಳಲ್ಲಿ ಅಭಿನಯಿಸಿ ಮೇಲಿಂದ ಮೇಲೆ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಿರುವ ಪ್ರಿಯಾಂಕಾ ಕುಮಾರ್ ನಿಜಕ್ಕೂ ಅದೃಷ್ಟವಂತೆಯೇ ಸರಿ.


Click it and Unblock the Notifications











