ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ 'ಕೃಷ್ಣ ತುಳಸಿ' ಐಶ್ವರ್ಯ!
ಜೀ ಕನ್ನಡ ಜನಪ್ರೀಯ ವಾಹಿನಿಯಲ್ಲಿ ಈಗಾಗಲೇ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಸಾಕಷ್ಟು ವಿಭಿನ್ನ ಬಗೆಯ ಕಥೆಗಳು, ಹಿರಿಯರಿಂದ ಕಿರಿಯರವರೆಗೂ ಇಷ್ಟ ಪಡುವಂತ ಧಾರಾವಾಹಿಗಳು ಪ್ರಸಾರವಾಗಿ ನೋಡುಗರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇನ್ನು ಜೀ ಕನ್ನಡದ ಧಾರವಾಹಿಗಳು ಬೇರೆಲ್ಲ ವಾಹಿನಿಯ ಧಾರಾವಾಹಿಗಳಿಗೆ ಹೋಲಿಸಿದರೇ ಟಿಆರ್‌ಪಿ ಲಿಸ್ಟ್‌ನಲ್ಲಿ ಸದಾ ಪೈಪೋಟಿಯಲ್ಲಿ ಇರುತ್ತೆ. ಇನ್ನು ಒಂದಷ್ಟು ಸೀರಿಯಲ್‌ಗಳು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆಗಿ ಪ್ರಸಾರ ಆಗತ್ತಿದೆ. ನೋಡುಗರ ಮೆಚ್ಚುಗೆಗೂ ಪಾತ್ರವಾಗುತ್ತಿದೆ. ಅದರಲ್ಲಿ ಒಂದು 'ಕೃಷ್ಣ ತುಳಸಿ'.
'ಕೃಷ್ಣ ತುಳಸಿ' ಧಾರಾವಾಹಿಯೂ ತೆಲುಗಿನಲ್ಲಿ ಸಖತ್ ಫೇಮಸ್. ಅದೇ ಧಾರವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಮುದ್ದು ಮುಖದ ಐಶ್ವರ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಇದೀಗ ಐಶ್ವರ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೌದು ತೆಲುಗಿನಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ತುಳಸಿ ಧಾರಾವಾಹಿ, ತೆಲುಗಿನಲ್ಲಿ ಪ್ರೇಕ್ಷಕರ ಮನ ಗೆದ್ದ ನಂತರ ಕನ್ನಡಕ್ಕೆ ಡಬ್ಬಿಂಗ್ ಆಗುತ್ತಿದೆ. ಕನ್ನಡದಲ್ಲಿ ಕೃಷ್ಣ ತುಳಸಿಯಾಗಿ ಪ್ರಸಾರವಾಗುತ್ತಿರುವ ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ ಶ್ಯಾಮ, ಈಗ ರಿಯಲ್ ಲೈಫ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಶ್ಯಾಮ ಪಾತ್ರಧಾರಿ ಐಶ್ವರ್ಯ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರು. ನಟನೆಯನ್ನರಸಿ ಕಲಾ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ಇವರು ಮೊದಲಿಗೆ 'ಯಾರಿವಳು' ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅಷ್ಟೇನೂ ಹೇಳಿಕೊಳ್ಳದ ಯಶಸ್ಸನ್ನು ಕಾಣದ 'ಯಾರಿವಳು' ಧಾರಾವಾಹಿಯಿಂದ ಐಶ್ವರ್ಯ ಅವರಿಗೆ ತೆಲುಗು ಧಾರಾವಾಹಿಗಳು ಹುಡುಕಿಕೊಂಡು ಬಂದವು. ಸದ್ಯಕ್ಕೆ ತೆಲುಗು ಧಾರಾವಾಹಿಗಳಲ್ಲಿ ಕೃಷ್ಣ ತುಳಸಿ ಸಕ್ಕತ್ ಫೇಮಸ್. ಇದೇ ಧಾರಾವಾಹಿ ತೆಲುಗುವಿನಿಂದ ಕನ್ನಡಕ್ಕೆ ಡಬ್ ಆಗಿ, ಕೃಷ್ಣಸುಂದರಿ ಎನ್ನುವ ಟೈಟಲ್ ಮೂಲಕ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಮೂಲತಃ ಇದು ತೆಲುಗು ಧಾರಾವಾಹಿ ಆದರೂ ಇದರಲ್ಲಿ ಹೆಚ್ಚಾಗಿ ಕನ್ನಡದ ನಟ ನಟಿಯರಿದ್ದಾರೆ ಎನ್ನುವುದು ವಿಶೇಷ. ಐಶ್ವರ್ಯ ರೋಹಿತ್ ಎಂಬುವವರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡ ಅವರು, ಹಸಿರು ಮತ್ತು ಆರೆಂಜ್ ಕಾಂಬಿನೇಷನ್ ಸೀರೆ ತೊಟ್ಟು ಮಿಂಚುತ್ತಿದ್ದರು. ಇನ್ನು ರೋಹಿತ್ ಕೂಡ ಮರೂನ್ ಅಂಡ್ ವೈಟ್ ಉಡುಗೆ ತೊಟ್ಟು ಮಿಂಚಿದ್ದಾರೆ. ಇವರಿಬ್ಬರ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಇನ್ನು ಐಶ್ವರ್ಯ ಮತ್ತು ರೋಹಿತ್ ಅವರದ್ದು ಅರೆಂಜ್ಡ್ ಮ್ಯಾರೇಜ್ ಆಗಿದ್ದು, ಇನ್ನೆರೆಡು ತಿಂಗಳಲ್ಲಿ ಐಶ್ವರ್ಯ ಮತ್ತು ರೋಹಿತ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ.

ಮದುವೆ ಬಗ್ಗೆ ಖಾಸಗಿ ಮ್ಯಾಗಝೀನ್‌ಗೆ ನೀಡಿದ ಹೇಳಿಕೆಯಲ್ಲಿ "ನನ್ನ ಫ್ಯಾಮಿಲಿ ನೋಡಿದ ಸಂಬಂಧ ಇದು. ನನ್ನ ಹುಡುಗನ ಹೆಸರು ರೋಹಿತ್, ಇವರು ಬೆಳಗಾವಿಯಲ್ಲಿ ಡಾಕ್ಟರ್ ಆಗಿದ್ದಾರೆ. ರೋಹಿತ್ ತುಂಬಾ ಸಪೋರ್ಟಿವ್ ಆಗಿದ್ದು ನನ್ನ ಆಕ್ಟಿಂಗ್ ಕೆರಿಯರ್‌ಗೆ ಯಾವುದೇ ಅಡ್ಡಿ ಇಲ್ಲ. ಮದುವೆಯಾದಮೇಲೂ ಅಭಿನಯಿಸಬಹುದು ಎಂದು ಹೇಳಿದ್ದಾರೆ. ಇಂತಹ ಸಪೋರ್ಟಿವ್ ಮತ್ತು ಅಂಡರ್ಸ್ಟ್ಯಾಂಡಿಂಗ್ ಹುಡುಗನನ್ನು ಪಡೆದದ್ದು ನನ್ನ ಸೌಭಾಗ್ಯ. ಇಂತಹ ಒಳ್ಳೆಯ ಕುಟುಂಬಕ್ಕೆ ಸೊಸೆಯಾಗುತ್ತಿದ್ದೇನೆ ಎಂದು ಖುಷಿಯಾಗುತ್ತಿದೆ ಎಂದು ಐಶ್ವರ್ಯ ಸಂತಸ ಹಂಚಿಕೊಂಡರು. ಇನ್ನೂ ಎಂಗೇಜ್ಮೆಂಟ್ ಆಯಿತು ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ಐಶ್ವರ್ಯ ಅವರು, ಸದ್ಯಕ್ಕೆ ನಿಶ್ಚಿತಾರ್ಥ ಜರುಗಿದೆ. ಎಲ್ಲಾ ರೀತಿ ಅನುಕೂಲತೆಗಳನ್ನು ನೋಡಿಕೊಂಡು ಮದುವೆ ಡೇಟ್ ಫಿಕ್ಸ್ ಮಾಡುತ್ತೇವೆ. ಈ ಎಲ್ಲಾ ಜವಾಬ್ದಾರಿಯನ್ನು ನನ್ನ ಕುಟುಂಬವೇ ನಿರ್ಧರಿಸುತ್ತದೆ. ನನ್ನ ಮದುವೆಯ ಡೇಟ್ ಫಿಕ್ಸ್ ಆದಮೇಲೆ ಖಂಡಿತ ತಿಳಿಸುತ್ತೇನೆ ಎಂದಿದ್ದಾರೆ ಐಶ್ವರ್ಯ .


Click it and Unblock the Notifications











