ಟಾಲಿವುಡ್ ಗೆ ಹಾರಿದ ಕೃಷ್ಣನ ಪ್ರಣಯ ಸಖಿ!

By ಅನಿತಾ ಬನಾರಿ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿದ್ದು ಸಕತ್ ಸದ್ದು ಮಾಡಿತ್ತು. ಆ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ ಸಿನಿಪ್ರಿಯರ ಮನ ಸೆಳೆದಿರುವ ಚೆಂದುಳ್ಳಿ ಚೆಲುವೆಯ ಹೆಸರು ಶರಣ್ಯ ಶೆಟ್ಟಿ. ಸಹಜ ನಟನೆಯ ಮೂಲಕ ಸಿನಿಪ್ರಿಯರ ಮನ ಸೆಳೆದಿರುವ ಶರಣ್ಯ ಶೆಟ್ಟಿ ಇದೀಗ ಟಾಲಿವುಡ್ ನತ್ತ ಮುಖ ಮಾಡಿದ್ದಾರೆ. ಆ ಮೂಲಕ ಪರಭಾಷೆಯ ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಲು ತಯಾರಾಗಿದ್ದಾರೆ ಈ ಕನ್ನಡತಿ.

ಅಂದ ಹಾಗೇ ಶರಣ್ಯ ಶೆಟ್ಟಿ ಅವರ ನಟನಾ ಪಯಣಕ್ಕೆ ಮುನ್ನುಡಿ ಬರೆದುದು 'ಗಟ್ಟಿಮೇಳ' ಧಾರಾವಾಹಿ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಾಹಿತ್ಯಾಳಾಗಿ ಅಭಿನಯಿಸುತ್ತಿರುವ ಶರಣ್ಯ ಶೆಟ್ಟಿ ಮೊದಲ ಧಾರಾವಾಹಿಯಲ್ಲಿಯೇ ಖಳನಾಯಕಿಯಾಗಿಯೇ ಗುರುತಿಸಿಕೊಂಡ ಬೆಡಗಿ. ಮುಂದೆ ಸಿನಿಮಾದತ್ತ ಮುಖ ಮಾಡಿದ ಈಕೆ ಮೊದಲು ನಟಿಸಿದ್ದು '1980' ಸಿನಿಮಾದಲ್ಲಿ.

Krishnam Pranaya Sakhi actress Sharanya Shetty signed a Tollywood movie

'1980' ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ಸಂತಸದ ವಿಚಾರ ಎಂದರೆ ಆ ಸಿನಿಮಾದ ಪಾತ್ರಕ್ಕೆ ಸೈಮಾ ನೀಡುವ 'ಉತ್ತಮ ಹೊಸ ನಟಿ' ಪ್ರಶಸ್ತಿ ಪಡೆದುಕೊಂಡ ಬೆಡಗಿ ಶರಣ್ಯ ಶೆಟ್ಟಿ ಮುಂದೆ 'ಹುಟ್ಟುಹಬ್ಬದ ಶುಭಾಶಯಗಳು', 'ನಗುವಿನ ಹೂಗಳ ಮೇಲೆ' ಸಿನಿಮಾಗಳಲ್ಲಿ ಅಭಿನಯಿಸಿರುವ ಶರಣ್ಯ ಶೆಟ್ಟಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಬೆಡಗಿ.

ಬಾಲ್ಯದಲ್ಲಿ ಭರತನಾಟ್ಯ ಕಲಿತ್ತಿದ್ದ ಶರಣ್ಯ ಶೆಟ್ಟಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಲ್ ರೌಂಡರ್ ಎಂದೇ ಗುರುತಿಸಿಕೊಂಡಿದ್ದ ಈಕೆ ಪಿಯುಸಿ ಓದುತ್ತಿರುವಾಗಲೇ ಮಾಡೆಲಿಂಗ್ ಲೋಕದ ನಂಟು ಬೆಳೆಸಿಕೊಂಡಾಕೆ. 'ಮಿಸ್ ಸೌತ್ ಇಂಡಿಯಾ 2018' ಸ್ಪರ್ಧೆಯಲ್ಲಿ ಭಾಗವಹಿಸಿರುವ ಈಕೆ ಮುಂದೆ ಓದಿನ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಿಗಿಸಿಕೊಂಡಿದ್ದರು. ಮಾತ್ರವಲ್ಲ ಒಂದಷ್ಟು ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಈಕೆ ಕಾಣಿಸಿಕೊಂಡಿದ್ದರು. ಇದರಿಂದಾಗಿ ಆಕೆಯ ಆತ್ಮವಿಶ್ವಾಸ ಹೆಚ್ಚಾದುದು ಮಾತ್ರವಲ್ಲದೇ ನಟನೆಯತ್ತ ಮುಖ ಮಾಡುವ ನಿರ್ಧಾರವನ್ನು ಕೂಡಾ ಆಕೆ ಮಾಡಿದರು.

ಮಾಡೆಲಿಂಗ್ ಲೋಕದಲ್ಲಿ ಸಕ್ರಿಯವಾಗಿದ್ದ ಈಕೆ ಮಾಡೆಲಿಂಗ್ ಜೊತೆ ಜೊತೆಗೆ ಸಾಕಷ್ಟು ಧಾರಾವಾಹಿಗಳ ಆಡಿಶನ್‌ಗೆ ಆಯ್ಕೆಯಾಗಿದ್ದರು. 'ಗಟ್ಟಿಮೇಳ' ಧಾರಾವಾಹಿಯ ಸಾಹಿತ್ಯಾಳಾಗಿ ಕಿರುತೆರೆಗೆ ಕಾಲಿಟ್ಟ ಶರಣ್ಯ ಶೆಟ್ಟಿ ಇಂಜಿನಿಯರಿಂಗ್ ಪದವೀಧರೆ ಹೌದು. ಇಂಜಿನಿಯರಿಂಗ್‌ನಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿರುವ ಶರಣ್ಯ ಶೆಟ್ಟಿ ಅವರಿಗೆ ಒಳ್ಳೆಯ ಕಂಪೆನಿಯೊಂದರಲ್ಲಿಯೂ ಕೆಲಸ ಗಿಟ್ಟಿಸಿಕೊಂಡಿದ್ದರು. ಆದರೆ ನಟನೆಯಲ್ಲಿ ಮುಂದುವರಿಯುವ ಸಲುವಾಗಿ ಕೆಲಸಕ್ಕೆ ಬಾಯ್ ಹೇಳಿರುವ ಈಕೆ ಇಂದು ಪರಿಪೂರ್ಣ ನಟಿಯಾಗಿ ಹೊರಹೊಮ್ಮಿದ್ದಾರೆ.

ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ಸಕ್ರಿಯವಾಗಿರುವ ಶರಣ್ಯ ಶೆಟ್ಟಿಯವರಿಗೆ ಅಭಿನಯಿಸಲು ಇಂತಹುದ್ದೇ ಆದ ಪಾತ್ರ ಬೇಕೆಂದೇನಿಲ್ಲ. ಹೌದು, ಗ್ಲಾಮರಸ್ ರೋಲ್ ಗಳ ಮೂಲಕ ವೀಕ್ಷಕರ ಮನ ಸೆಳೆದಿರುವ ಶರಣ್ಯ ಶೆಟ್ಟಿ ಅವರಿಗೆ ಡಿ ಗ್ಲಾಮರ್ ಆಗಿರುವಂತಹ ಪಾತ್ರಗಳೂ ಕೂಡಾ ಇಷ್ಟ. ಒಟ್ಟಿನಲ್ಲಿ ಅಭಿನಯಕ್ಕೆ ಅವಕಾಶ ಇರುವಂತಹ ಪಾತ್ರಗಳ ಜೊತೆಗೆ ಅಭಿನಯಿಸುವಂತಹ ಒಂದೊಂದು ಪಾತ್ರಗಳು ಬೇರೆ ಬೇರೆಯದ್ದೇ ಆಗಿರಬೇಕು ಎಂಬುದು ಅವರ ಅಂಬೋಣ.

More from Filmibeat

English summary
Sharanya Shetty, who is busy in television and big screen, has written a prelude to a colorful life and is modeling,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X