ಕ್ರಿಕೆಟ್ ಪಿಚ್‌ to ಬ್ರೇಕ್‌ಫಾಸ್ಟ್‌ವರೆಗೆ ; ಖ್ಯಾತ ನಿರೂಪಕನ ನಿರೂಪಣೆಗೆ ಮನ ಸೋತ ಖ್ಯಾತ ನಟಿ - ಗುಟ್ಟು ರಟ್ಟು

ಪ್ರೀತಿ ಎನ್ನುವುದು ಕೇವಲ ಎರಡೇ ಎರಡು ಅಕ್ಷರಗಳ ಪದವಲ್ಲ. ಬದಲಿಗೆ ಪ್ರೀತಿ ಎಂಬ ಪದವು ಅನೇಕ ಅರ್ಥಗಳಿಂದ ಕೂಡಿದೆ. ಇದು ಅತಿ ಹೆಚ್ಚು ಪ್ರಭಾವಶಾಲಿ ಕೂಡ ಹೌದು. ಪ್ರೀತಿಯಿಂದ ಇಡೀ ಜಗತ್ತನ್ನೇ ಜಯಿಸಬಹುದಂತೆ. ಇಂತಹ ಪ್ರೀತಿಯ ಬಲೆಯಲ್ಲಿ ಇಲ್ಲಿಯವರೆಗೆ ಹಲವಾರು ಕ್ರಿಕೆಟ್ ಸ್ಟಾರ್‌ಗಳು ಸಿಲುಕಿಕೊಂಡಿದ್ದಾರೆ. ಕ್ರೀಡಾಂಗಣದಲ್ಲಿ ತಮ್ಮ ಪರಾಕ್ರಮದ ಪ್ರದರ್ಶನ ಮಾಡುವ ಹಲವರು ಬೆಳ್ಳಿತೆರೆಯ ಮಹಾರಾಣಿಯರ ಸೌಂದರ್ಯಕ್ಕೆ ಮನ ಸೋತಿದ್ದಾರೆ.

ಇದಕ್ಕೆ ಕೈಗನ್ನಡಿ ಎಂಬಂತೆ ''ಬಿಲ್ಲಾ''.. ''ಮ್ಯಾಕ್ಸಿಮಮ್''.. ''ಬಾಡಿಗಾರ್ಡ್‌''.. ಚಿತ್ರಗಳ ಚೆಲುವೆ ಹೇಜಲ್ ಕೀಚ್ ಅವರ ಜೊತೆ ಯುವರಾಜ್ ಸಿಂಗ್ ಮದುವೆಯಾಗಿದ್ದಾರೆ. ''ದಿಲ್ ದಿಯಾ ಹೈ''.. ''ದಿ ಟ್ರೈನ್''.. ''ಜಿಲ್ಲಾ ಗಾಜಿಯಾಬಾದ್''.. ನಾಯಕಿ ಗೀತಾ ಬಸ್ರಾ ಜೊತೆ ಹರ್ಭಜನ್ ಸಿಂಗ್ ಸಪ್ತಪದಿ ತುಳಿದಿದ್ದಾರೆ. ''ಚಕ್ ದೇ ಇಂಡಿಯಾ'' ಚೆಲುವೆ ಸಾಗರಿಕಾಗೆ ಜಹೀರ್ ಖಾನ್ ಶರಣಾಗಿದ್ದಾರೆ.

KRITIKA KAMRA amp amp GAURAV KAPUR GO OFFICIAL Love Story Confirmed on Instagram

ಇವರಷ್ಟೇ ಅಲ್ಲ ಕೆ.ಎಲ್.ರಾಹುಲ್.. ವಿರಾಟ್ ಕೊಹ್ಲಿ.. ಒಬ್ಬರಾ.. ಇಬ್ಬರಾ.. ಹೀಗೆ ಹಲವರು ಚಿತ್ರರಂಗದ ನಾಯಕಿಯರ ಜೊತೆ ಹೊಸ ಬದುಕು ಶುರು ಮಾಡಿದ್ಧಾರೆ. ಇನ್ನೂ ಈ ಲವ್ ಸ್ಟೋರಿ ಕೇವಲ ಕ್ರಿಕೆಟ್ ಪಿಚ್‌ಗೆ ಮಾತ್ರ ಸೀಮಿತವಾಗಿಲ್ಲ. ಸ್ಟೂಡಿಯೋದಲ್ಲಿ ಕುಳಿತು ಕ್ರಿಕೆಟ್ ವಿಶ್ಲೇಷಣೆ ಮಾಡುವವರಿಗೆ, ಮೈದಾನದಲ್ಲಿ ನಿಂತು ನಿರೂಪಣೆ ಮಾಡುವವರಿಗೆ ಕೂಡ ಇಲ್ಲಿ ಹಲವರು ಕ್ಲೀನ್ ಬೋಲ್ಡ್ ಆಗಿದ್ದಾರೆ.

ಉದಾಹರಣೆಗೆ ಮಾಯಾಂತಿ ಲ್ಯಾಂಗರ್‌ಗೆ ನಮ್ಮ ಕನ್ನಡದ ಹುಡುಗ ಸ್ಟುವರ್ಟ್ ಬಿನ್ನಿ ಮನ ಸೋತರೆ ಯಾರ್ಕರ್ ಕಿಂಗ್ ಜಸ್ಮೀತ್ ಬುಮ್ರಾ ವಿಕೆಟ್ ಕಿತ್ತಿದ್ದು ಸಂಜನಾ ಗಣೇಶನ್ ಎಂಬ ಸುಂದರಿ.

ಇಂತಹ ಇತಿಹಾಸವನ್ನು ಹೊಂದಿರುವ ಈ ಕ್ರಿಕೆಟ್ ಮತ್ತು ಸಿನಿಮಾ ಇದೀಗ ಮತ್ತೊಂದು ಲವ್ ಸ್ಟೋರಿಗೆ ಸಾಕ್ಷಿಯಾಗುತ್ತಿದೆ. ಆ ಪ್ರೇಮ ಕಥೆ ಬೇರೆ ಯಾರದ್ದು ಅಲ್ಲ ಬದಲಿಗೆ ಕೃತಿಕಾ ಕಾಮ್ರಾ ಮತ್ತು ಗೌರವ್ ಕಪೂರ್ ಅವರದ್ದು ಎನ್ನುವುದೇ ಈ ಕ್ಷಣದ ವಿಶೇಷ.

ಹೌದು, ಕೃತಿಕಾ ಕಾಮ್ರಾ ಹಿಂದಿ ಬೆಳ್ಳಿ ತೆರೆ ಮತ್ತು ಕಿರುತೆರೆಯ ಖ್ಯಾತ ಹೆಸರು.''ಕಿತನಿ ಮೊಹಬ್ಬತ್ ಹೈ''.. ''ಕುಚ್ ತೋ ಲೋಗ್ ಕೆಹೆಂಗೆ''.. ''ರಿಪೋಟರ್ಸ್‌''.. ''ಪ್ರೇಮ್ ಯಾ ಪಹೇಲಿ''.. ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕೃತಿಕಾ ''ಬಂಬಯಿ ಮೇರಿ ಜಾನ್''.. ''ತಾಂಡವ್''.. ''ಭೀಡ್''.. ''ಹುಶ್ ಹುಶ್''.. ''ಗ್ಯಾರಾ ಗ್ಯಾರಾ'' ಅಂತಹ ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ ಅಭಿನಯಿಸಿದ್ದಾರೆ.

KRITIKA KAMRA amp amp GAURAV KAPUR GO OFFICIAL Love Story Confirmed on Instagram

ಇನ್ನೂ ಗೌರವ್ ಕಪೂರ್ ಅವರ ಕುರಿತು ಹೆಚ್ಚಿನ ಪರಿಚಯದ ಅವಶ್ಯಕತೆ ಇಲ್ಲ. ಯಾಕೆಂದರೆ ''ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್'' ಸೇರಿ ಹಲವು ಕ್ರಿಕೆಟ್ ಚಾಟ್ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಇವರು. ಇಷ್ಟೇ ಯಾಕೆ.. 2008 ರಿಂದ 2017 ರವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ''ಎಕ್ಸ್ಟ್ರಾ ಇನಿಂಗ್ಸ್ ಟಿ20'' ನಿರೂಪಣೆ ಇವರ ಸಾರಥ್ಯದಲ್ಲಿಯೇ ಮೂಡಿ ಬಂದಿತ್ತು.

ನಿರೂಪಕನಾಗಿ ಮಾತ್ರವಲ್ಲದೇ ವಿಜೆ ಮತ್ತು ಆರ್‌ಜೆ ಆಗಿ ಕೂಡ ಹೆಸರು ಮಾಡಿರುವ ಗೌರವ್ ಕಪೂರ್, ''ಡರ್ನಾ ಮನಾ ಕೈ''.. ''ಎ ವೆಡ್ನಸ್‌ ಡೇ'' .. '' ಬ್ಯಾಡ್‌ ಲಕ್ ಗೋವಿಂದ'' ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗದಲ್ಲಿ ಕೂಡ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ.

KRITIKA KAMRA amp amp GAURAV KAPUR GO OFFICIAL Love Story Confirmed on Instagram

ಇಂಥಾ ಗೌರವ್ ಕಪೂರ್ ಮತ್ತು ಕೃತಿಕಾ ಕಾಮ್ರಾ ಸದ್ಯ ಪ್ರೇಮಗೀತೆಯನ್ನು ಹಾಡುತ್ತಿದ್ದಾರೆ. ಇದಕ್ಕೆ ಪುರಾವೆ ಎನ್ನುವಂತೆ ಕೃತಿಕಾ ಮತ್ತು ಗೌರವ ಬೆಳಗಿನ ತಿಂಡಿ ತಿನ್ನುವ ಸಮಯದಲ್ಲಿ ಆತ್ಮೀಯವಾಗಿ ಕೆಲ ಫೋಟೊಗಳನ್ನು ಕ್ಲಿಕಿಸಿಕೊಂಡಿದ್ದಾರೆ. "Breakfast with" ಕ್ಯಾಪ್ಷನ್ ನೀಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಈ ಹಿಂದೆ ಇವರು ಇಬ್ಬರು ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು ಇದೆ. ಇವರ ಸಂಬಂಧದ ಕುರಿತು ಆಗಲೇ ಹಲವರಲ್ಲಿ ಅನುಮಾನ ಇತ್ತು. ಆ ಅನುಮಾನ ಈಗ ಫೋಟೊ ಹಂಚಿಕೊಳ್ಳುವ ಮೂಲಕ ಇಬ್ಬರು ದೂರ ಮಾಡಿದ್ದಾರೆ. ಸದ್ಯ ಇವರಿಬ್ಬರಿಗೆ ಹಲವರು ಶುಭಾಶಯಗಳನ್ನು ಹೇಳುತ್ತಿದ್ದಾರೆ. ಮದುವೆ ಊಟ ಆದಷ್ಟು ಬೇಗ ಹಾಕಿಸಿ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ.

ಅಂದ್ಹಾಗೇ ಗೌರವ್ ಕಪೂರ್ ಈ ಹಿಂದೆ ಮಾಡೆಲ್ ಆಗಿ ಗುರುತಿಸಿಕೊಂಡ ಕಿರಾತ್ ಭಾಟ್ಟಲ್‌ ಅವರನ್ನು ಮದುವೆಯಾಗಿದ್ದರು. ಇವರ ಸಂಬಂಧ ತೀರಾ ಇತ್ತೀಚೆಗಷ್ಟೇ ಮುರಿದು ಬಿದ್ದಿದೆ. ಇನ್ನು ಕೃತಿಕಾ ಈ ಹಿಂದೆ ಕಿರುತೆರೆ ನಟ ಗೌರವ್ ಜೊತೆ ಸುತ್ತಾಡಿದ್ದರು. ರಕುಲ್ ಪ್ರೀತ್ ಸಿಂಗ್ ಗಂಡ ಜಾಕಿ ಭಗ್ನಾನಿ ಅವರ ಜೊತೆ ಕೂಡ ಇವರ ಹೆಸರು ತಳುಕು ಹಾಕಿಕೊಂಡಿತ್ತು.

More from Filmibeat

English summary
After weeks of speculation, Kritika Kamra makes it official with Gaurav Kapur! See the adorable photos the couple shared that broke the internet and confirmed their romance.
Read more about: cricket love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X