»   » 'ಬಿಗ್ ಬಾಸ್' ಮಾಡಿದ ಒಳ್ಳೆ ಕೆಲಸಕ್ಕೆ ವೀಕ್ಷಕರು ಫುಲ್ ಖುಷ್.!

'ಬಿಗ್ ಬಾಸ್' ಮಾಡಿದ ಒಳ್ಳೆ ಕೆಲಸಕ್ಕೆ ವೀಕ್ಷಕರು ಫುಲ್ ಖುಷ್.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದ 'ಡ್ರಾಮಾ ಕ್ವೀನ್' ಅಂತಲೇ ಫೇಮಸ್ ಆಗಿರುವ 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ ಔಟ್ ಆಗುವ ಬದಲು ಕಳೆದ ವಾರ ಕಾಮಿಡಿ ನಟ ಮಿತ್ರ ಔಟ್ ಆಗಿದ್ದಕ್ಕೆ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಧಿಕ್ಕಾರ ಕೂಗಿದ್ರು.

ಇದೀಗ ಅದೇ ವೀಕ್ಷಕರು 'ಬಿಗ್ ಬಾಸ್'ಗೆ ಥ್ಯಾಂಕ್ಸ್ ಅಂತ ಕೂಗಿ ಹೇಳ್ತಿದ್ದಾರೆ. ಅದಕ್ಕೆ ಕಾರಣ ಒನ್ಸ್ ಅಗೇನ್ ಮಿಸ್ ಕೃತಿಕಾ. ['ಬಿಗ್ ಬಾಸ್ ಅಲ್ಲ ಫ್ಲಾಪ್ ಬಾಸ್ ಡೌನ್ ಡೌನ್' ಅಂತಾವ್ರೆ ವೀಕ್ಷಕರು!]

ಈ ವಾರ 'ಬಿಗ್ ಬಾಸ್' ಮನೆಯಿಂದ ಕೃತಿಕಾ ಗೇಟ್ ಪಾಸ್ ಪಡೆದದ್ದು ವೀಕ್ಷಕರಿಗೆ ಸಿಕ್ಕಾಪಟ್ಟೆ ಖುಷಿ ಆಗ್ಬಿಟ್ಟಿದೆ. ಹೀಗಾಗಿ 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ವೀಕ್ಷಕರು 'ಬಿಗ್ ಬಾಸ್'ಗೆ ಬಿಗ್ ಸಲಾಂ ಹೊಡೆಯುತ್ತಿದ್ದಾರೆ. ಮುಂದೆ ಓದಿ.....

ನ್ಯೂ ಇಯರ್ ಪಾರ್ಟಿ ಇವತ್ತೇ!

ನಟಿ ಕೃತಿಕಾ ಔಟ್ ಆಗಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ವೀಕ್ಷಕರೊಬ್ಬರು ನ್ಯೂ ಇಯರ್ ಪಾರ್ಟಿಯನ್ನ ಇಂದೇ ಆಚರಿಸುತ್ತಾರಂತೆ. ಹ್ಹಾ....ಈ ಕಾಮೆಂಟ್ ಗೆ ಸಿಕ್ಕಿರುವ ಲೈಕ್ಸ್ ಎಷ್ಟು ಅಂತ ಒಮ್ಮೆ ನೋಡಿ.... [ಅಂತೂ ಇಂತೂ 'ತಂಬೂರಿ ಪೆಟ್ಟಿ' ಕೃತಿಕಾ ಔಟ್ ಆದ್ರಪ್ಪಾ!]

ಪಾರ್ಟಿ....ಪಾರ್ಟಿ....!

'ಬಿಗ್ ಬಾಸ್' ವೀಕ್ಷಕರೆಲ್ಲರೂ ಈಗ ಪಾರ್ಟಿ ಮೂಡ್ ನಲ್ಲಿದ್ದಾರೆ ಅಂದ್ರೆ ನೀವೇ ಊಹಿಸಿ....

ಥ್ಯಾಂಕ್ಸ್...ಥ್ಯಾಂಕ್ಸ್..!

ಕೃತಿಕಾ ರವರನ್ನ ಔಟ್ ಮಾಡಿದಕ್ಕೆ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

ಖುಷಿಯೋ...ಖುಷಿ

'ಬಿಗ್ ಬಾಸ್-3' ಕಾರ್ಯಕ್ರಮ ಶುರುವಾದಾಗಿನಿಂದ ಇದೇ ಮೊದಲ ಬಾರಿಗೆ ಅನ್ಸುತ್ತೆ ವೀಕ್ಷಕರು ಈಪಾಟಿ ಖುಷಿಯಾಗಿರುವುದು.!

ಈಗ ಬುದ್ಧಿ ಬಂದಿದೆ!

ಈ ವಾರ ಔಟ್ ಮಾಡುವ ಬದಲು ಕಳೆದ ವಾರವೇ ಕೃತಿಕಾರನ್ನ ಔಟ್ ಮಾಡಿದ್ರೆ, ಮಿತ್ರ ಉಳಿಯಬಹುದಿತ್ತು ಅನ್ನೋದು ವೀಕ್ಷಕರ ಅಭಿಲಾಷೆ.

ಗೌತಮಿ ವಿರುದ್ಧ ಕಿಡಿ

ಕೃತಿಕಾ ಆಯ್ತು. ಇದೀಗ ಗೌತಮಿ ಹೊಸ 'ಡ್ರಾಮಾ ಕ್ವೀನ್' ಪಟ್ಟಕ್ಕೆ ಏರುತ್ತಿರುವ ಹಾಗೆ ಕಾಣ್ತಿದೆ.

ಕಾಮೆಂಟ್ಸ್ ಮಹಾಪೂರ

ಕೃತಿಕಾ ಔಟ್ ಆಗಿದ್ದಕ್ಕೆ 'ಬಿಗ್ ಬಾಸ್'ಗೆ ಥ್ಯಾಂಕ್ಸ್ ಹೇಳುವ ವೀಕ್ಷಕರೇ ಹೆಚ್ಚು.

ಕೃತಿಕಾರನ್ನ ಹೊಗಳುವವರೂ ಇದ್ದಾರೆ.!

ಕೃತಿಕಾ ಔಟ್ ಆಗಿದ್ದಕ್ಕೆ ಸಂಭ್ರಮಿಸುವವರು ಒಂದ್ಕಡೆ ಆದ್ರೆ, ಆಕೆಯ ಪ್ರತಿಭೆಯನ್ನ ಹೊಗಳುವ ವೀಕ್ಷಕರೂ ಇನ್ನೊಂದ್ಕಡೆ ಇದ್ದಾರೆ ಸ್ವಾಮಿ.!

ನಿಮ್ಮ ಅಭಿಪ್ರಾಯ ಏನು?

ನಟಿ ಕೃತಿಕಾ 'ಬಿಗ್ ಬಾಸ್' ಮನೆಯಿಂದ ಹೊರಬಂದಿರುವುದು ನಿಮಗೆ ಖುಷಿ ನೀಡಿದ್ಯಾ? ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

English summary
Bigg Boss Kannada 3 Viewers are happy over the decision of Kannada Serial Actress Kruthika's eviction from Bigg Boss house. Check out the viewers reaction here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada