twitter
    For Quick Alerts
    ALLOW NOTIFICATIONS  
    For Daily Alerts

    ರೇಣುಕಾ ಯಲ್ಲಮ್ಮ ಧಾರಾವಾಹಿ ಪ್ರಸಾರ ಸ್ಥಗಿತಕ್ಕೆ ಆಗ್ರಹ! ಯಾಕೆ?

    By ದಾವಣಗೆರೆ ಪ್ರತಿನಿಧಿ
    |

    ಕನ್ನಡ ಖಾಸಗಿ ವಾಹಿನಿಯಲ್ಲಿ‌ ಪ್ರಸಾರವಾಗುತ್ತಿರುವ ಉಧೋ..ಉಧೋ‌ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯಲ್ಲಿ‌ ಕ್ಷತ್ರೀಯ ಸಮುದಾಯಕ್ಕೆ ಅಪಮಾನ ಮಾಡಲಾಗಿದ್ದು, ಕೂಡಲೇ ಧಾರಾವಾಹಿ ಪ್ರಸಾರ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.

    'ಉಧೋ.. ಉಧೋ.. ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ಕಥೆ ತಿರುಚಲಾಗಿದ್ದು, ಕ್ಷತ್ರೀಯ ಸಮಾಜದ ಶ್ರೀ ಕಾರ್ತವೀರ ಸಹಸ್ರಾರ್ಜುನ ಮಹಾರಾಜರನ್ನು ದಾನವರನ್ನಾಗಿ ತೋರಿಸಲಾಗಿದೆ. ಇದರಿಂದ ಸಮಾಜಕ್ಕೆ ಘಾಸಿ ಉಂಟು ಮಾಡಿದೆ ಎಂದು ಪ್ರತಿಭಟನಾಕಾರರು ಹೇಳಿದರು.

    ಸಮಾಜದ ಜಿಲ್ಲಾಧ್ಯಕ್ಷ ಮಲ್ಲಾರಸಾ ಆರ್ ಕಾಟ್ವೆ ಮಾತನಾಡಿ ಕಳೆದ ಜನವರಿ 23 ರಿಂದ ಖಾಸಗಿ ವಾಹಿನಿಯಲ್ಲಿ "ಉಧೋ ಉಧೋ ಶ್ರೀ ರೇಣುಕಾ ಯಲ್ಲಮ "ಧಾರಾವಾಹಿ ಪ್ರಸಾರವಾಗುತ್ತಿದೆ. ಪಾತ್ರದಲ್ಲಿ ನಮ್ಮ ಸಮಾಜದ ಕುಲಪುರುಷರಾದ ಶ್ರೀ ಕಾರ್ತವೀರಾರ್ಜುನ ಸಹಸ್ರಾರ್ಜುನ ಮಹಾರಾಜರನ್ನು ರಾಕ್ಷಸರನ್ನಾಗಿ ಚಿತ್ರಿಸಿದ್ದಾರೆ, ಆದರೆ ನಮ್ಮ ಕುಲಪುರುಷರಾದ ಶ್ರೀ ಸಹರ್ಜುನ ಮಹಾರಾಜರು ದಾನವರಲ್ಲ. ಅವರು ಸಪ್ತ ಚಕ್ರವರ್ತಿಗಳಲ್ಲಿ ಒಬ್ಬರು ಎಂದು ಹೇಳಿದರು.

    Kshathriya Community Members Protest And Demand Ban Renuka Yallamma Serial

    ನಮ್ಮ ಮಹಾರಾಜರ ಬಗ್ಗೆ 18 ಪುರಾಣಗಳ ಪೈಕಿ 11 ಪುರಾಣಗಳಲ್ಲಿ ಉಲ್ಲೇಖವಿದ್ದು, ಭಗವಂತನಾದ ಶ್ರೀ ವಿಷ್ಣು 24 ಅವತಾರಗಳಲ್ಲಿ ಸುದರ್ಶನ ಚಕ್ರ ಅಂಶ ಅವತಾರಿಯಾಗಿ ಜನಿಸಿದರು. ಅಂದು ಇಡೀ ಬ್ರಹ್ಮಾಂಡದಲ್ಲಿ ರಾಕ್ಷಸರ ಅಟ್ಟಹಾಸ ನಡೆಯುತ್ತಿರುವಾಗ ಸಮಸ್ತ ಲೋಕ ಕಲ್ಯಾಣಕ್ಕಾಗಿ, ಋಷಿಮುನಿಗಳ, ಸಾದು ಸಂತ ಮಹಾತ್ಮರ, ದೀನ ದಲಿತರ ರಕ್ಷಣೆಗಾಗಿ, ಲೋಕ ಶಾಂತಿಗಾಗಿ ಶ್ರೀಗುರು ದತ್ತಾತ್ರೇಯ ಹಾಗೂ ಶ್ರೀ ಜಗನಾಥ ಮತ್ತು ಎಲ್ಲಾ ದೇವಾನುದೇವತೆಗಳ ಆಶೀರ್ವಾದದಿಂದ ಜನಿಸಿದರು. ಯುಗ ಯುಗಗಳಿಂದ ಇವತ್ತಿನವರೆಗೂ ಶ್ರೀ ಸಹಸ್ರಾರ್ಜುನ ಲೀನವಾದ ಶಿವಲಿಂಗ ಮಂದಿರ ನೋಡಬಹುದು. ಇದೊಂದು ಸಿದ್ಧಿ ಸ್ಥಳವಾಗಿದೆ. ಇದೊಂದು ಕೃತಿಯರ ಪವಿತ್ರ ಕ್ಷೇತ್ರವಾಗಿದೆ. ಶ್ರೀ ರಾಜರಾಜೇಶ್ವರ ಮಂದಿರದ ಹೆಸರಿನಿಂದ ಖ್ಯಾತವಾಗಿರುವ ಈ ದೇವಾಲಯದಲ್ಲಿ ಶುದ್ಧವಾದ ತುಪ್ಪದ ಹನ್ನೊಂದು ದೀಪಗಳು ಸದಾ ಕಾಲವೂ ಸಾವಿರಾರು ವರ್ಷಗಳಿಂದ ಶತ ಶತಮಾನಗಳಿಂದಲೂ ಅಖಂಡ ಜ್ಯೋತಿಯಾಗಿ ಈಗಲೂ ಉರಿಯುತ್ತಿವೆ ಎಂದರು.

    ಈ ಮಾಹೇಶ್ಮತಿ ನಗರದ ಸ್ಥಾಪನೆಯು ಶ್ರೀರಾಮ ಹಾಗೂ ಮಹಾಭಾರತ ಕಾಲಗಳ ಹಿಂದೆಯೇ ಶ್ವೇತಯುಗದಿಂದ ತ್ರೇತಾಯುಗದವರೆಗೆ ಸಮಸ್ತ ಭೂಮಂಡಲವನ್ನು ಆ ಕೀರ್ತಿಗೆ ಪ್ರಾಪ್ತರಾದರು, ಅನೇಕ ರಾಜ ಮಹಾರಾಜರುಗಳು ಆಳಿದರು. ಆ ಸಾಮ್ರಾಟರಲ್ಲಿ ಸರ್ವ ಶಿರೋಮಣಿ ಕ್ಷತ್ರೀಯ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರು ಎಂದು ಹೇಳುವುದಕ್ಕೆ ಮತ್ತು ನಮ್ಮ ಕುಲ ದೇವರು ಎಂದು ಹೇಳುವುದಕ್ಕೆ ನಮಗೆಲ್ಲ ಕ್ಷತ್ರಿಯ ಸಮಾಜದವರಿಗೆ, ಸಮಸ್ತ ಸನಾತನ ಹಿಂದೂಗಳಿಗೆ ಹೆಮ್ಮೆಯಾಗುತ್ತದೆ. ಅಂತಹುದರಲ್ಲಿ ನಮ್ಮ ಕುಲದೇವರನ್ನು ದಾನವರನ್ನಾಗಿ ಬಿಂಬಿಸಿರುವುದು ಸರಿಯಲ್ಲ.ಈ ಕೂಡಲೇ ಧಾರಾವಾಹಿ ಪ್ರಸಾರ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.

    ಪ್ರತಿಭಟನೆಯಲ್ಲಿ ರಾಜು ಎಲ್. ಬದ್ದಿ, ಗಿರಿಧರ್ ಡಿ. ಮೆಹರ್ವಾಡೆ, ಮಹೇಶ್ ಸೋಳಂಕಿ, ಮಂಜುನಾಥ್ ಹೆಚ್ ಹಬೀಬ್,ಕೋಟಿಕಿರಣ್ ಆರ್ ಲದ್ವಾ,ರಾಧಾಬಾಯಿ ಮೆಹರ್ವಾಡೆ,ರಶ್ಮಿ ಬದ್ದಿ,ಗುರುನಾಥ್ ಸಾ ಕಾಟ್ವೆ,ಸುರೇಶ್ ಭೂತೆ,ಅಮೃತ್ ಬದ್ದಿ,ನಾಗರತ್ನ ಬದ್ದಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

    English summary
    Kshathriya community people protest in Davangere District office and demand to ban Renuka Yallamma serial.
    Saturday, February 4, 2023, 17:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X